• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಾ. ಮಂಜುನಾಥ್​ ಸೋಲುಂಡರೆ ಕರ್ನಾಟಕ ಜನತೆ ಸೋಲುಂಡಂತೆ.. ಹೇಗೆ..!?

ಪ್ರತಿಧ್ವನಿ by ಪ್ರತಿಧ್ವನಿ
April 7, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಬೆಂ.ಗ್ರಾ ಗೆಲ್ಲಲು ‘ಅಷ್ಟಪಾಲಕರ’ ನೇಮಕ.. ಡಿಕೆ ಬ್ರದರ್ಸ್ ತಂತ್ರಕ್ಕೆ ‘ಕೇಸರಿ’ ಪ್ರತಿತಂತ್ರ.. ಡಾ.ಮಂಜುನಾಥ್ ಜಯಕ್ಕೆ ವೋಟ್ ‘ಲೆಕ್ಕಾ’ಚಾರ ..!
Share on WhatsAppShare on FacebookShare on Telegram

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್​ ಹಾಗು ಬಿಜೆಪಿ ಅಭ್ಯರ್ಥಿಯಾಗಿ ಡಾ ಮಂಜುನಾಥ್​ ಚುನಾವಣಾ ಅಖಾಡದಲ್ಲಿ ಇದ್ದಾರೆ.ಡಿ.ಕೆ ಸುರೇಶ್​ ಶಕ್ತಿ ಏನು ಕಡಿಮೆ ಇಲ್ಲ. ಹಣ ಬಲ, ತೋಳ್ಬಲ, ರಾಜಕೀಯ ಶಕ್ತಿ ಹೀಗೆ ಎಲ್ಲಾ ಆಯಾಮದಲ್ಲೂ ಡಾ ಮಂಜುನಾಥ್​ಗೆ ಹೋಲಿಸಿದರೆ ಡಿ.ಕೆ ಸುರೇಶ್ ಮುಂದಿದ್ದಾರೆ.  ಆದರೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾದ ಡಾ ಮಂಜುನಾಥ್​ಗೆ ಸೇವೆ ಮಾಡುವುದಷ್ಟೇ ಗೊತ್ತು. ರಾಜಕಾರಣಕ್ಕೆ ಹೊಸಬರು. ಆದರೂ ಬಿಜೆಪಿ ಹಾಗು ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವ ಕಾರಣ ಡಾ ಮಂಜುನಾಥ್​ ಗೆಲುವಿನ ಬಗ್ಗೆ ಹೆಚ್ಚಿನ ವಿಶ್ವಾಸ ಇದೆ. 

ADVERTISEMENT

ಡಾ ಮಂಜುನಾಥ್​ ಗೆಲುವಿನ ಲೆಕ್ಕಾಚಾರ ಹೇಗಿದೆ..?

ರಾಮನಗರ ಜಿಲ್ಲೆಯನ್ನು ಒಳಪಟ್ಟಂತೆ ತುಮಕೂರಿನ ಕುಣಿಗಲ್​, ಬೆಂಗಳೂರಿಗೆ ಸೇರಿದ ಆನೇಕಲ್​, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರವೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಲಿದ್ದು, ಬೆಂಗಳೂರು ಭಾಗದ ನಗರವಾಸಿಗಳು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿ ದೋಸ್ತಿ ನಾಯಕರಿದ್ದಾರೆ. ಹೆಚ್ಚೂ ಕಡಿಮೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಒಟ್ಟು ಮತಗಳಲ್ಲಿ ಅರ್ಧಕ್ಕೂ ಅಧಿಕ ಜನರು ಈ ಮೂರು ಕ್ಷೇತ್ರದಲ್ಲೇ ಇದ್ದಾರೆ. ಇನ್ನು ರಾಮನಗರ ಜಿಲ್ಲೆ ಹಾಗು ತುಮಕೂರಿನ ಕುಣಿಗಲ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗು ಜೆಡಿಎಸ್​ ಸಮ ಬಲಶಾಲಿಗಳು. ಹೀಗಾಗಿ ಗೆಲ್ಲುತ್ತಾರೆ ಎನ್ನಲಾಗ್ತಿದೆ.

ಸಂಸದ ಸುರೇಶ್​ ಸೋಲಿಗೆ ಇರುವ ಅಂಶಗಳು ಏನು..? 

ಸಂಸದ ಸುರೇಶ್ ಹೆಚ್ಚು ಕ್ರಿಯಾಶೀಲರಾಗಿರುವ ಸಂಸದ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರ ಕಷ್ಟ ಸುಖಗಳಿಗೆ ಸ್ಪಂದಿಸ್ತಾರೆ (ಕಾಂಗ್ರೆಸ್​ ಕಾರ್ಯಕರ್ತರ) ಅನ್ನೋ ಮಾತುಗಳೂ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಆದರೆ ಸುರೇಶ್​ ಹಾಗು ಅವರ ಬೆಂಬಲಿಗರು ಗೂಂಡಾಗಳ ರೀತಿ ನಡೆದುಕೊಳ್ತಾರೆ. ಭೂ ವಿಚಾರದಲ್ಲಿ ಭಾಗಿಯಾಗ್ತಾರೆ. ಒತ್ತುವರಿ ವಿಚಾರದಲ್ಲಿ ಸುರೇಶ್​ ಹೇಳಿದ್ದೇ ಆಗಬೇಕು. ಬಡವರ ಭೂಮಿ ಕಂಡವರ ಪಾಲಾಗುವುದರಲ್ಲಿ ಸುರೇಶ್​ ಕೈವಾಡ ಇರುತ್ತದೆ ಎನ್ನುವ ಆರೋಪವೂ ಬೆಂಗಳೂರು ಸುತ್ತಮುತ್ತಲ ಜನರ ಮಾತು. ಇದೆಲ್ಲವೂ ಕಾನೂನು ಮೂಲಕ ಸಾಬೀತಾಗಿಲ್ಲ ಎನ್ನುವುದು ಸತ್ಯ. ಆದರೂ ಜನರ ಮನಸ್ಸಿನ ಆಳದಲ್ಲಿ ಸುರೇಶ್​ ಹಾಗು ಬೆಂಬಲಿಗರ ಗೂಂಡಾಗಿರಿ ಬೇರು ಬಿಟ್ಟಿದೆ ಎನ್ನಬಹುದು. 

ಡಾ ಮಂಜುನಾಥ್​ ಯಾಕೆ ಗೆಲ್ಲಬೇಕು.. ಕರ್ನಾಟಕ ಸೋಲುವುದು ಹೇಗೆ..? 

ನಿಜ, ಶೀರ್ಷಿಕೆಯಲ್ಲೇ ಡಾಕ್ಟರ್​ ಮಂಜುನಾಥ್​ ಗೆಲುವಿನ ಬಗ್ಗೆ ಹೇಳಿದ್ದೇವೆ. ​ಇಬ್ಬರು ಬಲಶಾಲಿ ಅಭ್ಯರ್ಥಿಗಳು ಎರಡು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನೂ ಸಾಕಷ್ಟು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಇದ್ದಾರೆ. ಜನರ ಮತ ಚಲಾವಣೆ ಮಾಡುವಾಗ ಅಭ್ಯರ್ಥಿಗಳನ್ನು ನೋಡಿ ಮತ ಚಲಾವಣೆ ಮಾಡಬೇಕಾಗುತ್ತದೆ. ಎಲ್ಲರನ್ನೂ ಒಮ್ಮೆ ನೋಡಿಕೊಂಡು ಅಂತಿಮವಾಗಿ ಇಬ್ಬರ ನಡುವೆ ಜಟಾಪಟಿ ನಡೆಯಬೇಕು. ಆಗ ಕುಕ್ಕರ್​ ಕೊಟ್ಟವರು, 500 ರೂಪಾಯಿ ಹಣ ಕೊಟ್ಟವರು, ಯಾವುದೋ ಕೆಲಸ ಮಾಡಿಸಿಕೊಟ್ಟವರು ಅನ್ನೋ ಕಾರಣಕ್ಕೆ ಮತ ನೀಡಬಾರದು. ಇಬ್ಬರು ವ್ಯಕ್ತಿಗಳಲ್ಲಿ ಉತ್ತಮರು ಯಾರು ಅನ್ನೋದನ್ನು ಮನಗಂಡು ಮತ ಚಲಾವಣೆ ಮಾಡಬೇಕು. ಡಾ ಮಂಜುನಾಥ್​ ಅರೆ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತೆ ಮಾಡಿದ್ದಾರೆ. ಡಾ ಮಂಜುನಾಥ್​ ರಾಜಕಾರಣಕ್ಕೆ ಹೊಸಬರು ಇರಬಹುದು, ಆದರೆ ಅಧಿಕಾರವನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ ಎನ್ನುವುದಕ್ಕೆ ಜಯದೇವ ಜೀವಂತ ಸಾಕ್ಷಿ. ಆಯ್ಕೆ ನಿಮ್ಮದು. 

Tags: ಕನಕಪುರಕಾಂಗ್ರೆಸ್ಕುಮಾರಸ್ವಾಮಿಜೆಡಿಎಸ್ಡಿಕೆ ಶಿವಕುಮಾರ್ಡಿಕೆ ಸುರೇಶ್ದೇವೇಗೌಡಬಿಜೆಪಿಬೆಂಗಳೂರು ಗ್ರಾಮಾಂತರಮಂಜುನಾಥ್ರಾಮನಗರ
Previous Post

ಚುನಾವಣಾ ಬಾಂಡ್‌ ಅಕ್ರಮದ ರೂವಾರಿ ನರೇಂದ್ರ ಮೋದಿಯನ್ನು ಬಂಧಿಸಿ: ಮುಖ್ಯಮಂತ್ರಿ ಚಂದ್ರು ಆಗ್ರಹ

Next Post

D BOSS ಕೈ ಆಪರೇಷನ್ ಯಶಸ್ವಿ.. ಚಾಲೆಂಜಿಂಗ್ ಸ್ಟಾರ್ ಗೆ ವಿಶ್ರಾಂತಿ.. ಮೇ 2ನೇ ವಾರದಿಂದ ‘DEVIL’ ಶೂಟಿಂಗ್ ಮತ್ತೆ ಶುರು ..?

Related Posts

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..
Top Story

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ನಡೆಯುತ್ತಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರ ವಿಂಗಡಣೆ, ಜನಗಣತಿ ಹಾಗೂ ಮಹಿಳಾ ಮೀಸಲಾತಿ...

Read moreDetails
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

April 16, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
Next Post
D BOSS ಕೈ ಆಪರೇಷನ್ ಯಶಸ್ವಿ.. ಚಾಲೆಂಜಿಂಗ್ ಸ್ಟಾರ್ ಗೆ ವಿಶ್ರಾಂತಿ.. ಮೇ 2ನೇ ವಾರದಿಂದ ‘DEVIL’ ಶೂಟಿಂಗ್ ಮತ್ತೆ ಶುರು ..?

D BOSS ಕೈ ಆಪರೇಷನ್ ಯಶಸ್ವಿ.. ಚಾಲೆಂಜಿಂಗ್ ಸ್ಟಾರ್ ಗೆ ವಿಶ್ರಾಂತಿ.. ಮೇ 2ನೇ ವಾರದಿಂದ 'DEVIL' ಶೂಟಿಂಗ್ ಮತ್ತೆ ಶುರು ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada