ಭಾರತ ಪುರುಷರ ಹಾಕಿ ತಂಡ 4-1 ಗೋಲುಗಳಿಂದ ವೇಲ್ಸ್ ತಂಡವನ್ನು ಮಣಿಸಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.
ಬರ್ಮಿಂಗ್ ಹ್ಯಾಂನಲ್ಲಿ ಗುರುವಾರ ನಡೆದ ಬಿ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಹರ್ಮನ್ ಪ್ರೀತ್ ಕೌರ್ ಹ್ಯಾಟ್ರಿಕ್ ಹಾಗೂ ಗುರ್ಜಂತ್ ಸಿಂಗ್ ಬಾರಿಸಿದ ಒಂದು ಗೋಲಿನ ನೆರವಿನಿಂದ ಭಾರತ ಸುಲಭ ಗೆಲುವು ದಾಖಲಿಸಿತು.