ದೆಹಲಿ ಹೊರಭಾಗದ ಸುಲ್ತಾನ್‌ಪುರಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು 3 ದಿನಗಳ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿದೆ.

ದೆಹಲಿ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳ್ಳಗ್ಗೆ 20 ವರ್ಷದ ಯುವತಿ ಒಡಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದು ನಂತರ ಯುವತಿಯ ಮೃತದೇಹವನ್ನ ಸುಮಾರು 4 ಕಿಲೋಮೀಟರ್‌ವರೆಗೆ ಎಳೆದೊಯ್ದು ನಂತರ ಆಕೆಯ ಮೃತದೇಹ ಕಾಲು ಮುರಿದು ನಗ್ನಾವಸ್ಥೆಯಲ್ಲಿ ಕಂಡು ಬಂದಿತ್ತು.
ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣಾ (27), ಮಿಥುನ್ (26), ಮನೋಜ್ ಮಿತ್ತಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.










