ಚಿಕ್ಕಮಗಳೂರು : ರಾಜ್ಯದಲ್ಲಿ ಸದ್ಯ ಬಿಜೆಪಿ ನಾಯಕರ ಬಂಡಾಯ ಜೋರಾಗಿದೆ. ನನಗೆ ಬಿಜೆಪಿಯಿಂದ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾರಣ ಎಂದು ಆರೋಪಿಸಿದ್ದ ಎಂಪಿ ಕುಮಾರಸ್ವಾಮಿ ಹೇಳಿಕೆಗೆ ಇಂದು ಸ್ವತಃ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನಾನು ನಿನ್ನೆಯವರೆಗೆ ಅವರಿಗೆ ನಾಯಕನಾಗಿದ್ದೆ. ಇಂದು ವಿಲನ್ ಆಗಿದ್ದೇನೆ. ನಾಳೆ ಮತ್ತೆ ನಾಯಕನಾಗುತ್ತೇನೆ ಕಾದು ನೋಡ್ತಿರಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಿಂದ ನಾನೊಬ್ಬನೇ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಅಭಿಪ್ರಾಯ ಬಂದಿದೆ. ಬಿಜೆಪಿ ಎಂಪಿ ಕುಮಾರಸ್ವಾಮಿ ಹಾಗೂ ಸೊಗಡು ಶಿವಣ್ಣರನ್ನು ಬೆಳೆಸಿದೆ. ಈಗ ಟಿಕೆಟ್ ಸಿಕ್ಕಿಲ್ಲ ಅಂತಾ ಬಂಡಾಯವೆದ್ದಿದ್ದಾರೆ. ಬಿಜೆಪಿ ಬಂಡಾಯ ಶಮನ ಮಾಡುತ್ತೆ ಎಂದು ಹೇಳಿದ್ದಾರೆ.