ಚೆನ್ನೈ :ಏ.೦೩: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಇಂದು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಮುಖಾಮುಖಿಯಾಗಿವೆ.
ಚೆನ್ನೈನ ಎಮ್ಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತು ಹಿನ್ನಡೆ ಅನುಭವಿಸಿರುವ ಸಿಎಸ್ಕೆ ಖಾತೆ ತೆರೆಯುವ ಪ್ಲಾನ್ನಲ್ಲಿದೆ. ಇತ್ತ ಎಲ್ಎಸ್ಜಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿದ್ದು ಇಂದಿನ ಮ್ಯಾಚ್ನಲ್ಲಿ ಕೂಡ ಗೆಲುವು ಸಾಧಿಸಿ ಟೇಬಲ್ ಟಾಪರ್ ಆಗುವ ಯೋಜನೆ ಹಾಕಿಕೊಂಡಿದೆ.