• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ CJP ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

ಪ್ರತಿಧ್ವನಿ by ಪ್ರತಿಧ್ವನಿ
August 21, 2026
in Top Story
0
ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ CJP ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ
Share on WhatsAppShare on FacebookShare on Telegram

NEET ಪ್ರತಿಭಟನೆಯ ಬಳಿಕ ‘ಸರ್ಕಾರಿ ಶಾಲೆಗಳನ್ನು ಸರಿಪಡಿಸಿ’ ಎಂಬ ಅಭಿಯಾನ ಆರಂಭಿಸಿರುವ ಕ್ರಾಂತಿಕಾರಿ ಜನತಾ ಪಾರ್ಟಿ (CJP)ಗೆ ಜೈಪುರದಲ್ಲಿ ಬಿಸಿ ತಟ್ಟಿದೆ. ಸರ್ಕಾರಿ ಶಾಲೆಯೊಂದರ ಅವ್ಯವಸ್ಥೆ ಪರಿಶೀಲಿಸಲು ತೆರಳಿದ್ದ CJP ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ವಾಗ್ವಾದ ನಡೆದು, ಬಳಿಕ ಅದು ಘರ್ಷಣೆಗೆ ತಿರುಗಿದೆ.CJP ವಕ್ತಾರ ಆಶುತೋಷ್ ರಾಂಕಾ ನೇತೃತ್ವದಲ್ಲಿ ಕಾರ್ಯಕರ್ತರು ಜೈಪುರದ ರಾಮಪುರದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಲು ಮುಂದಾದಾಗ ಸ್ಥಳೀಯರು ಅವರನ್ನು ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂದು ವರದಿಯಾಗಿದೆ.

ADVERTISEMENT

CJP ಕಾರ್ಯಕರ್ತರ ಆರೋಪದ ಪ್ರಕಾರ, ಕೆಲ ಸ್ಥಳೀಯರು ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ಕಾರುಗಳ ಮೇಲೂ ಕಲ್ಲುಗಳಿಂದ ದಾಳಿ ನಡೆಸಿ ಹಾನಿಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ಮಾತನಾಡಿರುವ ಆಶುತೋಷ್ ರಾಂಕಾ, ರಾಮಪುರದ ಸರ್ಕಾರಿ ಶಾಲೆಯಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ತಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾಗಿದ್ದ ₹12.50 ಲಕ್ಷ ಹಣದ ದುರ್ಬಳಕೆ ನಡೆದಿದೆ ಎಂಬ ಆರೋಪದ ಕುರಿತು ಮಾಹಿತಿ ಸಂಗ್ರಹಿಸಲು ಶಾಲೆಗೆ ತೆರಳಿದ್ದಾಗಿ ತಿಳಿಸಿದ್ದಾರೆ.ಆದರೆ, ಶಾಲೆಗೆ ಭೇಟಿ ನೀಡುವುದನ್ನು ಕೆಲವರು ವಿರೋಧಿಸಿದ್ದು, ನಂತರ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಅಂಗಿಯನ್ನು ಹರಿದು ಹಾಕಲಾಗಿದ್ದು, ತಮ್ಮೊಂದಿಗೆ ಇದ್ದ ಯುವತಿಯರು ಸೇರಿದಂತೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಲಾಗಿದೆ ಎಂದು ರಾಂಕಾ ಆರೋಪಿಸಿದ್ದಾರೆ.

DK Shivakumar : ಯಾವುದು ಡ್ಯಾಂ ಭರ್ತಿ ಆಗಿಲ್ಲ : ಸಿಎಂ ಡಿಕೆ ಶಿವಕುಮಾರ್‌..! #KRS #congress #pratidhvani

ಹಲ್ಲೆಯ ಹಿಂದೆ ಬಿಜೆಪಿ ಬೆಂಬಲಿಗರು ಇದ್ದಾರೆ ಎಂದು ಆರೋಪಿಸಿರುವ CJP ನಾಯಕರು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕರು ಗ್ರಾಮಸ್ಥರ ಪರವಾಗಿ ನಿಂತಿದ್ದು, CJP ಕಾರ್ಯಕರ್ತರ ವರ್ತನೆಯನ್ನು ಪ್ರಶ್ನಿಸಿದ್ದಾರೆ.ಬಿಜೆಪಿ ಶಾಸಕ ಬಾಲ ಮುಕುಂದಾಚಾರ್ಯ ಅವರು, ಗ್ರಾಮಸ್ಥರಿಗೆ CJP ಕಾರ್ಯಕರ್ತರ ಬಗ್ಗೆ ಮಾಹಿತಿ ಇದ್ದು, ತಮ್ಮ ಊರಿಗೆ ಬಂದು ಪರಿಸ್ಥಿತಿ ಹಾಳು ಮಾಡಲು ಮುಂದಾದವರ ವಿರುದ್ಧ ಗ್ರಾಮಸ್ಥರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

B. Sriramulu : ನಾಗೇಂದ್ರ ರಾಜೀನಾಮೆ ಪಡೆದು ಬೇರೆಯವ್ರನ್ನ ಮಂತ್ರಿಮಾಡಲಿ..

ಮತ್ತೊಬ್ಬ ಬಿಜೆಪಿ ಶಾಸಕ ಗೋಪಾಲ್ ಶರ್ಮಾ, CJP ಯನ್ನು ಟೀಕಿಸಿ, ಯುವಜನತೆಗೆ ಮಾದರಿಯಾಗುವ ಐತಿಹಾಸಿಕ ವ್ಯಕ್ತಿಗಳ ಬದಲಿಗೆ ವಿವಾದಾತ್ಮಕ ರಾಜಕೀಯ ನಿಲುವು ಹೊಂದಿರುವವರನ್ನು ನಾಯಕರೆಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದು, ಸರ್ಕಾರಿ ಶಾಲೆಯ ಪರಿಶೀಲನೆಗೆ ತೆರಳಿದ ವಿಚಾರವೇ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

 

 

Tags: #AshutoshRanka#bjp#CJPActivists#CJPNews#FixGovernmentSchools#GovernmentSchool#GovernmentSchools#indianews#politicalnews#RajasthanNews#Rampur#SchoolEducationCJPjaipur
Previous Post

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

Next Post

ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

Related Posts

ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು
Top Story

ತಮಿಳುನಾಡು ವಿಧಾನಸಭೆಯಲ್ಲಿ ವಾಕ್ಸಮರ: ಉದಯನಿಧಿಗೆ ‘ಬಾತ್ರೂಮ್ ಲೀಡರ್’ ತಿರುಗೇಟು ಏನು

by ಪ್ರತಿಧ್ವನಿ
August 21, 2026
0

ತಮಿಳುನಾಡು ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಉದಯನಿಧಿ ಸ್ಟಾಲಿನ್ ಅವರು...

Read moreDetails
ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

August 21, 2026
500 KPS ಶಾಲೆಗಳ ಅಭಿವೃದ್ಧಿಗೆ  1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

500 KPS ಶಾಲೆಗಳ ಅಭಿವೃದ್ಧಿಗೆ 1,750 ಕೋಟಿ ರೂ ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

August 21, 2026
ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

ರೇಷನ್ ಕಾರ್ಡ್ ಇ-ಕೆವೈಸಿಗೆ ತಾತ್ಕಾಲಿಕ ಬ್ರೇಕ್: ಮತ್ತೆ ಯಾವಾಗ ಆರಂಭ?

August 21, 2026
ವಿರೋಧ ಪಕ್ಷದವರಿಗೆ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ- ಸಿಎಂ ಡಿ.ಕೆ ಶಿವಕುಮಾರ್

ವಿರೋಧ ಪಕ್ಷದವರಿಗೆ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ- ಸಿಎಂ ಡಿ.ಕೆ ಶಿವಕುಮಾರ್

August 21, 2026
Next Post
ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

ಸಕ್ಕರೆ ಬೆಲೆ ಏರಿಕೆಗೆ ಕೇಂದ್ರದ ಬ್ರೇಕ್‌: ದಾಸ್ತಾನು ಮಿತಿಗೂ ಕಡಿವಾಣ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada