Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕ್ರಿಪ್ಟೊಕರೆನ್ಸಿಗಳು “ಚಿಟ್ ಫಂಡ್”ಗಳಿದ್ದಂತೆ: ಹೂಡಿಕೆದಾರರನ್ನು ಎಚ್ಚರಿಸಿದ ರಘುರಾಮ್ ರಾಜನ್

ಪ್ರತಿಧ್ವನಿ

ಪ್ರತಿಧ್ವನಿ

November 25, 2021
Share on FacebookShare on Twitter

ಕ್ರಿಪ್ಟೊ ಕರೆನ್ಸಿಗಳು ಚಿಟ್ ಫಂಡ್ ಗಳಂತೆಯೇ ಹೂಡಿಕೆದಾರರಿಗೆ ಸಮಸ್ಯೆ ತಂದೊಡ್ಡುತ್ತವೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಚಿಟ್ ಫಂಡ್ ಗಳು ಜನರಿಂದ ಹಣ ಸಂಗ್ರಹಿಸಿ ದಂಧೆ ನಡೆಸಿ ವಂಚಿಸುವಂತೆಯೇ ಕ್ರಿಪ್ಟೊ ಕರೆನ್ಸಿಗಳೂ ಸಹ. ಚಿಟ್ ಫಂಡ್ ಸಮಸ್ಯೆಯನ್ನೇ ಕ್ರಿಪ್ಟೊ ಕರೆನ್ಸಿ ಖರೀದಿಸಿರುವವರು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್!‌

ಅಪಾಯಮಟ್ಟದಲ್ಲಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಕಟ್ಟೆಚ್ಚರ!

ದೇಶದಲ್ಲಿ ಕರೋನಾ ಹೆಚ್ಚಳ : ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ

ಕ್ರಿಪ್ಟೊ ಕರೆನ್ಸಿಗಳ ಭವಿಷ್ಯ ಕುರಿತಂತೆ ಮಾತನಾಡಿರುವ ರಘುರಾಮ್ ರಾಜನ್, ಪ್ರಸ್ತುತ ಅಸ್ತಿತ್ವದಲ್ಲಿರುವ ಬಹುತೇಕ ಕ್ರಿಪ್ಟೊ ಕರೆನ್ಸಿಗಳು ನಶಿಸಲಿವೆ ಎಂದೂ ಹೇಳಿದ್ದಾರೆ. ರಘುರಾಮ್ ರಾಜನ್ ಅವರ ಪ್ರಕಾರ, ವಿಶ್ವವ್ಯಾಪಿ ಸುಮಾರು 6,000 ಕ್ರಿಪ್ಟೊ ಕರೆನ್ಸಿಗಳು ಅಸ್ವಿತ್ವದಲ್ಲಿವೆ. ಈ ಪೈಕಿ ಒಂದೆರಡು, ಬಹಳ ಎಂದರೆ ಬೆರಳೆಣಿಕೆಯಷ್ಟು ಕ್ರಿಪ್ಟೊ ಕರೆನ್ಸಿಗಳು ಉಳಿಯಬಹುದು ಎಂದು ರಾಜನ್ ಅಂದಾಜಿಸಿದ್ದಾರೆ.

ಸಿಎನ್ಬಿಸಿ 18 ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಘುರಾಮ್ ರಾಜನ್, ವಸ್ತುಗಳ ಮೌಲ್ಯವು ಅದರ ಬೆಲೆಗಿಂತ ಮಿತಿ ಮೀರಿದ್ದರೆ ಅದು ಗಾಳಿಯಲ್ಲಿ ತೆಳುವ ಗುಳ್ಳೆಯಿದ್ದಂತೆ, ಯಾವಾಗಲಾದರೂ ಒಡೆದು ಮಾಯವಾಗಬಹುದು. ಬಹಳಷ್ಟು ಕ್ರಿಪ್ಟೊ ಕರೆನ್ಸಿಗಳ ಮೌಲ್ಯವು ವಾಸ್ತವಿಕ ಬೆಲೆಗಿಂತ ಅದೆಷ್ಟೊ ಪಟ್ಟು ಹೆಚ್ಚಿದೆ. ಮಿತಿ ಮೀರಿದ ಮೌಲ್ಯವಿದ್ದರೂ ಅದನ್ನು ಖರೀದಿಸಲು ಮೂರ್ಖರು ಸಿದ್ದರಿದ್ದಾರೆ ಎಂದೂ ರಾಜನ್ ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿಗೆ ಮೂಲ ಆಧಾರವಾಗಿರುವ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರವರ್ಧಮಾನಕ್ಕೆ ತರಲು ಕೇಂದ್ರ ಸರ್ಕಾರ ಉತ್ತೇಜನ ನೀಡುವುದು ಅತ್ಯಗತ್ಯ ಎಂದೂ ರಾಜನ್ ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿ ಮೌಲ್ಯ ಮತ್ತು ಭವಿಷ್ಯ ಕುರಿತಂತೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ರಘುರಾಮ್ ರಾಜನ್ ಅವರ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಲುದ್ದೇಶಿಸಿರುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಚೌಕಟ್ಟನ್ನು ಒದಗಿಸುವಾಗ ಮತ್ತು ಖಾಸಗಿ ನಾಣ್ಯಗಳನ್ನು ನಿಯಂತ್ರಿಸುವ, ಕ್ರಿಪ್ಟೋಕರೆನ್ಸಿಗಳಿಗೆ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ (2021) ಮಂಡಿಸಲಿದೆ.

ಕ್ರಿಪ್ಟೊ ಕರೆನ್ಸಿಯು ಹಾಲಿ ಆರ್ಥಿಕ ವ್ಯವಸ್ಥೆಯ ಮೇಲೆ ಉಂಟುಮಾಡಬಹುದಾದ ಮತ್ತು ಅಕ್ರಮಗಳಿಗೆ ಬಳಕೆಯಾಗಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆರಂಭದಿಂದಲೂ ಕ್ರಿಪ್ಟೊಕರೆನ್ಸಿ ವಹಿವಾಟಿಗೆ ಅನುಮತಿ ನೀಡಲು ನಿರಾಕರಿಸುತ್ತಲೇ ಬಂದಿದೆ. ಆದರೆ, ಅಧಿಕೃತವಾಗಿ ಅದನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ.
ಕ್ರಿ
ಪ್ಟೊಕರೆನ್ಸಿಗೆ ಪರ್ಯಾಯವಾಗಿ ಡಿಜಿಟಲ್ ಕರೆನ್ಸಿಯನ್ನು ಅಧಿಕೃತವಾಗಿ ತರುವ ಮತ್ತು ಅದನ್ನು ವಿನಿಮಯ ಮಾಧ್ಯಮವಾಗಿ ಬಳಕೆ ಮಾಡುವ ಸಾಧ್ಯತೆಯನ್ನು ಆರ್ಬಿಐ ಪ್ರಸ್ತಾಪಿಸಿತ್ತು. ಅದರ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಕ್ರಿಪ್ಟೊಕರೆನ್ಸಿ ನಿಷೇಧಿಸಲು ಮತ್ತು ದೇಶೀಯ ಮತ್ತು ನಿಯಂತ್ರಿತ ಡಿಜಿಟಲ್ ಕರೆನ್ಸಿಯನ್ನು ತರಲು ಮಸೂದೆ ರೂಪಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ.

ಭಾರತದಲ್ಲಿ ಕ್ರಿಪ್ಟೊ ಕರೆನ್ಸಿ ನಿಷೇಧಿಸುವ ಮತ್ತು ಪರ್ಯಾಯ ಡಿಜಿಟಲ್ ಕರೆನ್ಸಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಸುದ್ದಿ ಪ್ರಕಟವಾದ ನಂತರ ಕಳೆದ ಎರಡು ದಿನ ಸತತ ಕುಸಿತ ದಾಖಲಿಸಿದ್ದ ಕ್ರಿಪ್ಟೊ ಕರೆನ್ಸಿಗಳು ಚೇತರಿಸಿಕೊಂಡಿವೆ. ನವೆಂಬರ್ 25ರ ವಹಿವಾಟಿನಲ್ಲಿ ಬಿಟ್ ಕಾಯಿನ್ ಶೇ.2ರಷ್ಟು, ಇಥಿರಿಯಂ ಶೇ.1ರಷ್ಟು, ಬಿನೆನ್ಸ್ ಕಾಯಿನ್ ಶೇ.4ರಷ್ಟು ಏರಿಕೆ ದಾಖಲಿಸಿವೆ. ಸೊಲೊನಾ, ಕರ್ಡಾನೊ, ಎಕ್ಸ್ಆರ್ಪಿ, ಪೊಲ್ಕಾಡಾಟ್ ಕರೆನ್ಸಿಗಳು ಶೇ.1ರಿಂದ 5ರಷ್ಟು ಕುಸಿದಿವೆ.

RS 500
RS 1500

SCAN HERE

[elfsight_youtube_gallery id="4"]

don't miss it !

Uncategorized

Finest Antivirus Security For Windows

by ಶ್ರುತಿ ನೀರಾಯ
August 8, 2022
ಅಯೋಧ್ಯೆಯ ಅಕ್ರಮ ಭೂಮಿ ಮಾರಾಟದ ಹಿಂದೆ ಬಿಜೆಪಿ : ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಪಟ್ಟಿ ಬಿಡುಗಡೆ
ದೇಶ

ಅಯೋಧ್ಯೆಯ ಅಕ್ರಮ ಭೂಮಿ ಮಾರಾಟದ ಹಿಂದೆ ಬಿಜೆಪಿ : ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಪಟ್ಟಿ ಬಿಡುಗಡೆ

by ಪ್ರತಿಧ್ವನಿ
August 7, 2022
ಆಧಾರ್ ಇಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಸಿಗುತ್ತಿಲ್ಲ ಪ್ರವೇಶ : ಶಿಕ್ಷಣದ ಹಕ್ಕನ್ನೂ‌ ಕಸಿದುಕೊಳ್ಳುತ್ತಿದೆಯೇ ಆಧಾರ್?
ದೇಶ

ಆಧಾರ್ ಇಲ್ಲದ ಮಕ್ಕಳಿಗೆ ಶಾಲೆಗಳಲ್ಲಿ ಸಿಗುತ್ತಿಲ್ಲ ಪ್ರವೇಶ : ಶಿಕ್ಷಣದ ಹಕ್ಕನ್ನೂ‌ ಕಸಿದುಕೊಳ್ಳುತ್ತಿದೆಯೇ ಆಧಾರ್?

by ಫಾತಿಮಾ
August 7, 2022
ಭಾರತದಲ್ಲಿ ರೈಲ್ವೆ ಹಳಿ ಸ್ಫೋಟಿಸಲು ಪಾಕಿಸ್ತಾನದ ಐಎಸ್‌ ಐ ಸಂಚು!
ದೇಶ

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

by ಪ್ರತಿಧ್ವನಿ
August 8, 2022
ಲಾಲು ಪುತ್ರ ತೇಜಸ್ವಿಯ ರೋಚಕ ಕ್ರಿಕೆಟ್‌ ಪ್ರಯಾಣ
ಕ್ರೀಡೆ

ಲಾಲು ಪುತ್ರ ತೇಜಸ್ವಿಯ ರೋಚಕ ಕ್ರಿಕೆಟ್‌ ಪ್ರಯಾಣ

by Shivakumar A
August 11, 2022
Next Post
MLC  ಕಾಂಗ್ರೆಸ್‌  ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

MLC ಕಾಂಗ್ರೆಸ್‌ ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ

ಸಿದ್ದರಾಮಯ್ಯ, ಡಿ.ಕೆ. ಶಿ ಸಂಭಾಷಣೆ ವೈರಲ್ : ಬಿಜೆಪಿಗೆ ಹೆದರಿ ಪಟೇಲರಿಗೆ ಕಾಂಗ್ರೆಸ್ ಗೌರವ ನೀಡುತ್ತಿದೆ ಎಂದ ಬಿಜೆಪಿ ನಾಯಕರು

ಸಿದ್ದರಾಮಯ್ಯ, ಡಿ.ಕೆ. ಶಿ ಸಂಭಾಷಣೆ ವೈರಲ್ : ಬಿಜೆಪಿಗೆ ಹೆದರಿ ಪಟೇಲರಿಗೆ ಕಾಂಗ್ರೆಸ್ ಗೌರವ ನೀಡುತ್ತಿದೆ ಎಂದ ಬಿಜೆಪಿ ನಾಯಕರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist