2020ರಲ್ಲಿ ದೇಶ ಮೊದಲ ಬಾರಿ ರಾಷ್ಟ್ರೀಯ ಲಾಕ್‌ಡೌನ್ನನು ಕಂಡಿತ್ತು. ಈ ಅವಧಿಯಲ್ಲಿ ಸಾಂಪ್ರದಾಯಿಕ ಅಪರಾಧಗಳಾದ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆ ದಾಖಲಾದವು ಆದರೆ ಇದು ದೊಡ್ಡ ಮಟ್ಟದ ನಾಗರಿಕ ಸಂಘರ್ಷಗಳಿಗೆ ಕಾರಣವಾಯಿತು.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಬಿಡುಗಡೆ ಮಾಡಿದ ‘ಕ್ರೈಮ್ ಇನ್ ಇಂಡಿಯಾ’ದ ಇತ್ತೀಚಿನ ಮಾಹಿತಿಯ ಪ್ರಕಾರ, 2020 ರಲ್ಲಿ ಕೋಮು ಗಲಭೆಗಳು ಹಿಂದಿನ ವರ್ಷಕ್ಕಿಂತ 96% ಹೆಚ್ಚಳವನ್ನು ದಾಖಲಿಸಿವೆ. ಅಂತೆಯೇ, ಜಾತಿ ಗಲಭೆಗಳು 50%, ಕೃಷಿ ಗಲಭೆಗಳು 38%ಮತ್ತು ‘ಆಂದೋಲನ/ಪ್ರತಿಭಟನಾ’ ಸಮಯದಲ್ಲಿನ ಗಲಭೆಗಳು 33%ಹೆಚ್ಚಾಗಿದೆ.
ಕಳೆದ ವರ್ಷ ಮಾರ್ಚ್ 25 ಮತ್ತು ಮೇ 31 ರಿಂದ ಸಂಪೂರ್ಣ ಲಾಕ್ಡೌನ್ನಿಂದಾಗಿ, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರೀಕರ ವಿರುದ್ಧದ ಪ್ರಕರಣಗಳು, ಕಳ್ಳತನ, ದರೋಡೆ ಮತ್ತು ದೌರ್ಜನ್ಯಗಳಂತಹ ಅಪರಾಧಗಳು ಸುಮಾರು 2 ಲಕ್ಷದಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ‘ಹಿಂಸಾತ್ಮಕ ಅಪರಾಧಗಳ’ ವರ್ಗದಲ್ಲಿ ಬರುವ ಅಪರಾಧಗಳು 0.5% ರಷ್ಟು ಕಡಿಮೆಯಾಗಿದ್ದರೂ ಸಹ ಕೊಲೆ 1% ನಷ್ಟು ಹೆಚ್ಚಳವನ್ನು ದಾಖಲಿಸಿದೆ.
ಈ ವರ್ಷವು ‘ದೇಶದ ವಿರುದ್ಧದ ಅಪರಾಧಗಳಿಗೆ’ ಸಂಬಂಧಿಸಿದ ಪ್ರಕರಣಗಳು ಗಮನಾರ್ಹ ಕುಸಿತವನ್ನು ಕಂಡಿದೆ, ಇವು 2019 ಕ್ಕಿಂತ 27% ನಷ್ಟು ಇಳಿಕೆಯಾಗಿದೆ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಕಾರಣದಿಂದಾಗಿ ಈ ವರ್ಗದಲ್ಲಿ ಹೆಚ್ಚಳವನ್ನು ದಾಖಲಿಸಿದ ಏಕೈಕ ಪ್ರಮುಖ ರಾಜ್ಯ ಯುಪಿ. ರಾಜ್ಯವು ದಾಖಲಿಸಿದ ‘ಸಾರ್ವಜನಿಕ ಆಸ್ತಿಗೆ ಹಾನಿ’ ಪ್ರಕರಣಗಳಲ್ಲಿ ಹಲವು ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದ್ದು.

ಬಿಹಾರವು 117 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಹರಿಯಾಣ ಮತ್ತು ಜಾರ್ಖಂಡ್ ತಲಾ 51, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (26) ಮತ್ತು ಗುಜರಾತ್ (23) ಇವೆ. ಡಾಟಾಗಳ ಪ್ರಕಾರ 2020 ರಲ್ಲಿ ಉತ್ತರ ಪ್ರದೇಶವು ಒಂದೇ ಒಂದು ಕೋಮುಗಲಭೆಯನ್ನು ದಾಖಲಿಸಿಲ್ಲ.
2019ರಲ್ಲಿ 492ರಷ್ಟಿದ್ದ ಜಾತಿ ಸಂಘರ್ಷದ ಪ್ರಕರಣಗಳು 2020 ರಲ್ಲಿ 736 ಕ್ಕೆ ಏರಿಕೆಯಾಗಿದೆ. ಬಿಹಾರದಲ್ಲಿ ಈ ವಿಭಾಗದಲ್ಲಿ 208, ಮಹಾರಾಷ್ಟ್ರ (125), ಯುಪಿ (116), ಕರ್ನಾಟಕ (95) ಮತ್ತು ತಮಿಳುನಾಡು (69) ಪ್ರಕರಣಗಳು ದಾಖಲಾಗಿವೆ.
ಆದರೆ ಈ ಎನ್‌ಸಿಆರ್‌ಬಿ ದತ್ತಾಂಶವು ಪೊಲೀಸರು ದಾಖಲಿಸಿದ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿರುತ್ತವೆ ಆದ್ದರಿಂದ ದತ್ತಾಂಶವು ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ.
ಕೇಂದ್ರವು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಅಭೂತಪೂರ್ವ ಪ್ರತಿಭಟನೆಗಳನ್ನು ಕಂಡ ಈ ವರ್ಷವು 2,188 ಕೃಷಿ ಗಲಭೆಗಳನ್ನು ದಾಖಲಿಸಿದೆ.
ಆದರೆ ಕುತೂಹಲಕಾರಿ ಪ್ರಕ್ರಿಯೆಯಲ್ಲಿ ಪಂಜಾಬ್ ನಲ್ಲಿ ಕೃಷಿ ಗಲಭೆಗಳ ಶೂನ್ಯ ಪ್ರಕರಣಗಳು ದಾಖಲಾಗಿದೆ.
ಹರಿಯಾಣ 34, ಬಿಹಾರ 1,286, ಮಹಾರಾಷ್ಟ್ರ 279, ಕರ್ನಾಟಕ 148, ಯುಪಿ 142 ಮತ್ತು ಜಾರ್ಖಂಡ್ನಲ್ಲಿ 83 ಪ್ರಕರಣಗಳು ವರದಿಯಾಗಿವೆ.
‘ಆಂದೋಲನ/ಪ್ರತಿಭಟನಾ’ ಸಮಯದ ಗಲಭೆಯ ಪ್ರಕರಣಗಳಲ್ಲಿ, ಕೇರಳವು 1,798 ಪ್ರಕರಣಗಳನ್ನು ದಾಖಲಿಸಿದೆ. ಇದು 2020 ಕ್ಕಿಂತ 95% ಹೆಚ್ಚು.
ಯುಎಪಿಎ ಪ್ರಕರಣಗಳು 2019 ಕ್ಕಿಂತ 2020 ರಲ್ಲಿ 35% ನಷ್ಟು ಇಳಿಕೆಯನ್ನು ದಾಖಲಿಸಿವೆ. ಅತಿಹೆಚ್ಚು UAPA ಪ್ರಕರಣಗಳು J&K (287) ನಲ್ಲಿ ದಾಖಲಾಗಿವೆ, ಮಣಿಪುರ (169), ಜಾರ್ಖಂಡ್ (86), ಅಸ್ಸಾಂ (76) ಮತ್ತು UP (72) ನಂತರದ ಸ್ಥಾನದಲ್ಲಿವೆ.