ಕೋವಿಡ್ ವಿರುದ್ಧ ಹೋರಾಡಲು ಮತ್ತೊಂದು ಲಸಿಕೆ ಸಾರ್ವಜನಿಕ ಬಳಕೆಗೆ ಸಜ್ಜಾಗಿದೆ. ರಷ್ಯಾದ ಸುಟ್ನಿಕ್ ವಿ ಬಳಕೆಗೆ ಅನುಮತಿ ನೀಡಲಾಗಿದ್ದು, ಈ ವಾರದ ಅಂತ್ಯದಲ್ಲಿ ದೆಹಲಿಯ ಎರಡು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಖಾಸಗಿ ಆಸ್ಪತ್ರೆಗಳಾದ ಅಪೊಲೊ ಮತ್ತು ಮಧುಕರ್ ರೇನ್ಬೋ ಮಕ್ಕಳ ಆಸ್ಪತ್ರೆಯಲ್ಲಿ ವಾರಾಂತ್ಯದ ವೇಳೆಗೆ ಸ್ಪುಟ್ನಿಕ್ ವಿ ಲಸಿಕೆ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಭಾನುವಾರ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ನಂತರ ಭಾರತ ಸರ್ಕಾರದಿಂದ ಸಾರ್ವಜನಿಕ ಬಳಕೆಗೆ ಅನುಮೋದಿಸಿದ ಮೂರನೇ ಲಸಿಕೆ ಸ್ಪುಟ್ನಿಕ್ ವಿ. ಈ ಲಸಿಕೆಯನ್ನು ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.,

ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್ ಪ್ರತಿ ಡೋಸ್‌ಗೆ 780 ರೂ ಹಾಗು ಕೊವಾಕ್ಸಿನ್ ಪ್ರತಿ ಡೋಸ್‌ಗೆ 1,410 ರೂ. ನಿಗದಿ ಪಡಿಸಿದೆ. ಇದೀಗ ಸ್ಪುಟ್ನಿಕ್ ವಿ. ಪ್ರತಿ ಡೋಸ್‌ಗೆ 1,145 ರೂ ನಿಗಧಿಸಿರುವುದಾಗಿ ತಿಳಿದುಬಂದಿದೆ.
ದೇಶದ ಲಸಿಕೆ ಮಾರುಕಟ್ಟೆಯ ಪಾಲುದಾರರಾದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಸದ್ಯಕ್ಕೆ ರಷ್ಯಾದಿಂದ ಲಸಿಕೆಗಳನ್ನು ಆಮದು ಮಾಡಿಕೊಳುತ್ತಿದೆ. ನಂತರದ ದಿನ ಲಸಿಕೆ ಭಾರತದಲ್ಲಿಯೂ ತಯಾರಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲ: NIE






