• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕರೋನಾ ಸೋಂಕು: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ‘ಕೊವ್ಯಾಕ್ಸಿನ್’ ಪರಿಣಾಮಕಾರಿ- ಅಧ್ಯಯನ ವರದಿ

Shivakumar A by Shivakumar A
August 3, 2021
in ದೇಶ, ಶೋಧ
0
ಕರೋನಾ ಸೋಂಕು: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ‘ಕೊವ್ಯಾಕ್ಸಿನ್’ ಪರಿಣಾಮಕಾರಿ- ಅಧ್ಯಯನ ವರದಿ
Share on WhatsAppShare on FacebookShare on Telegram

ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿದ ‘ಕೊವ್ಯಾಕ್ಸಿನ್’ ಲಸಿಕೆ ಕರೋನಾ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ICMR ಅಧ್ಯಯನ ವರದಿ ತಿಳಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಪ್ರಮುಖ ಕಾರಣವಾಗಿದ್ದ ಈ ರೂಪಾಂತರಿ, ಅತೀ ಶೀಘ್ರದಲ್ಲಿ ಹರಡುತ್ತದೆ. ಇದರಿಂದಾಗಿ, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. 

ADVERTISEMENT

“BBV152 ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ, IgG ರೋಗನಿರೋಧಕ ಶಕ್ತಿ ಉತ್ಪಾದನೆಯಾಗಿರುವುದು  ಅಧ್ಯಯನದಲ್ಲಿ ಕಂಡು ಬಂದಿದೆ. ಈ ಲಸಿಕೆಯು ಕರೋನಾ ರೂಪಾಂತರಿಯಾದ ಡೆಲ್ಟಾ, ಡೆಲ್ಟಾ AY.1 ಮತ್ತು B.1.617.3. ವಿರುದ್ದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ದಿಪಡಿಸಿಕೊಂಡಿರುವುದು ಕಂಡು ಬಂದಿದೆ,” ಎಂದು ವರದಿ ಹೇಳಿದೆ. 

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್’ನಲ್ಲಿ ಡೆಲ್ಟಾ ರೂಪಾಂತರಿಯ ವಿರುದ್ದ 65.2 ಶೇಕಡದಷ್ಟು ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ಈಗಾಗಲೇ ಈ ಲಸಿಕೆಯು ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಒಂದಾಗಿದೆ. 

ಆತಂಕದ ವಿಚಾರವೇನೆಂದರೆ, ಈಗಾಗಲೇ ಡೆಲ್ಟಾ ರೂಪಾಂತರಿಯ ಹಲವು ಮಾದರಿಗಳು ಭಾರತದಲ್ಲಿ ಪತ್ತೆಯಾಗಿವೆ.ಪ್ರಮುಖವಾಗಿ AY.1, AY.2, ಮತ್ತು AY.3 ಮಾದರಿಯ ಡೆಲ್ಟಾ ರೂಪಾಂತರಿ ಸೋಂಕು, ಮೂರನೇ ಅಲೆಯ ವೇಳೆ  ಹೆಚ್ಚಾಗಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. 

ಇವುಗಳಲ್ಲಿ AY.1 ಮಾದರಿಯ ಡೆಲ್ಟಾ ರೂಪಾಂತರಿ ಏಪ್ರಿಲ್ 2021ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆ ನಂತರ ಇತರ 20 ರಾಷ್ಟ್ರಗಳಲ್ಲಿಯೂ ಪತ್ತೆಯಾಗಿತ್ತು. 

ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಹೊತ್ತಿಗೆ, ಸಾಮಾನ್ಯ COVID19 ವಿರುದ್ದ ಕೊವ್ಯಾಕ್ಸಿನ್ 77.8 ಶೇಕಡಾ ಪರಿಣಾಮಕಾರಿ ಹಾಗೂ ಡೆಲ್ಟಾ ಮಾದರಿಯ ವಿರುದ್ದ 65.2 ಶೆಕಡಾದಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತನ್ನ ವರದಿಯಲ್ಲಿ ಹೇಳಿತ್ತು. 

Tags: bharath bioteccovaccineDelta PlusIndiaಕರೋನಾಕೋವಿಡ್-19
Previous Post

RSS ನಾಯಕರಿಗಲ್ಲದೇ ನಾಲ್ವರು ವಲಸಿಗರಿಗೆ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನ ನೀಡಿದ್ಯಾಕೇ?

Next Post

ಸಾಹಿತ್ಯ ಪರಿಚಾರಕರೋ ಸಂಘ ಪ್ರಚಾರಕರೋ?

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಸಾಹಿತ್ಯ ಪರಿಚಾರಕರೋ ಸಂಘ ಪ್ರಚಾರಕರೋ?

ಸಾಹಿತ್ಯ ಪರಿಚಾರಕರೋ ಸಂಘ ಪ್ರಚಾರಕರೋ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada