ಕೋವಿಡ್-19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತ ಲಸಿಕೆ ಅಭಿಯಾನದಲ್ಲು ಸಹ ಪ್ರಪಂಚದಾದ್ಯಂತ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಮಧ್ಯೆ 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಈ ವರ್ಷ ಜನವರಿಯಿಂದ ಪ್ರಾರಂಭಿಸಲಾಗಿದ್ದು ತುರ್ತು ಬಳಕೆಗಾಗಿ Corbevax ಲಸಿಕೆಯನ್ನು ಕೇಂದ್ರ ಅನುಮೋದನೆ ನೀಡಿದೆ.
ಈ ಮಧ್ಯೆ ಭಾರತೀಯ ಮೂಲದ ಲಸಿಕೆ ತಯಾರಕ ಕಂಪನಿ Biological-E-Limited ಕಂಪನಿಯೂ ನೂತನವಾಗಿ ತಯಾರಿಸಿರುವ Corbevax Covid-19 ಲಸಿಕೆ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಇದು ಒಟ್ಟಾರೆ ಬಳಕೆಗೆ ಕೊಟ್ಟ ಮೂರನೇ ಅನುಮೋದನೆಯಾಗಿದೆ. Zydus Cadilla, Zycov-D ಮತ್ತು Covaxin ಲಸಿಕೆಗಳಿಗೆ ಈ ಹಿಂದೆ ತುರ್ತು ಬಳಕೆಗೆ ಅನುಮೋದನೆಯನ್ನು ನೀಡಲಾಗಿತ್ತು. ದೇಶಾದ್ಯಂತ ಇಲ್ಲಿಯವರೆಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿತ್ತು.
ದೇಶಾದ್ಯಂತ ಇಲ್ಲಿಯವರೆಗೂ ಒಟ್ಟು 1.76ಬಿಲಿಯನ್ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.