ಹೆಣ್ಣು ಮಕ್ಕಳಿಗೆ ಉಗುರುಗಳನ್ನು ಉದ್ದ ಇರ್ಬೇಕು ಎನ್ನುವ ಆಸೆ ತುಂಬಾನೆ ಇರುತ್ತದೆ..ಆದರೆ ಉಗುರು ಬಿಟ್ಟರೆ ಯಾವ ಕೆಲಸವನ್ನು ಸರಿಯಾಗಿ ಮಾಡಲು ಆಗುವುದಿಲ್ಲಾ..ಅದರಲ್ಲು ಬಲಗೈಯಲ್ಲಿ ಉಗುರು ಸ್ವಲ್ಪ ಉದ್ದವಿದ್ದರು ಅಡುಗೆ ಮಾಡಲು ಅಸಾಧ್ಯ..ಇನ್ನೂ ಅಡುಗೆ ನಂತರ ಉಗುರುಗಳು ಹಳದಿಯಾಗಿರುತ್ತದೆ.. ಕಾರಣ ಬಳಸುವಂತೆ ಮಸಾಲ ಅಥವ ಅರಿಶಿಣಪುಡಿಯಿಂದ.. ಅರಿಶಿಣ ಬಣ್ಣ ಉಗುರುಗಳಿಗೆ ಆದರೆ ಅದು ನೀರಿನಿಂದ ತೊಳೆದರೆ ಹೋಗುವುದಿಲ್ಲ.ಉಗುರುಗಳು ಹಳದಿಯಾಗುತ್ತದೆ..ಹೀಗಾದಗ ನಮ್ಮ ಉಗುರನ್ನು ನಾವು ನೋಡಲು ಹಿಂಸೆ ಮತ್ತು ಮುಜುಗರ..ಹಾಗಾದ್ರೆ ತಕ್ಷಣವೆ ಆ ಬಣವನ್ನು ಉಗುರಿನಿಂದ ಶಮನ ಗೊಳಿಸಲು ಈ ಮನೆಮದ್ದುಗಳನ್ನು ಬಳಸಿ..

ಲಿಂಬೆರಸ
ಒಂದು ನಿಂಬೆ ಹಣ್ಣನ್ನು ಎರಡು ಹೋಳಾಗಿ ಮಾಡಿ ,ನಂತ್ರ ಒಂದು ಹೋಳಿನಿಂದ ಉಗುರನ್ನು ಚನ್ನಾಗಿ ಉಜ್ಜಿ..ಕೆಲ ನಿಮಿಷ ಹಾಗೆ ಬಿಟ್ಟಿ ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ, ತಕ್ಷಣವೆ ನಿಮಗೆ ರಿಸಲ್ಟ್ ಸಿಗುತ್ತದೆ..ನಿಂಬೆ ರಸದಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಕಲೆಗಳು ಶಮನವಾಗುತ್ತದೆ..

ಅಡುಗೆ ಸೋಡ
ಕಲೆಗಳನ್ನು ತೊಡೆದು ಹಾಕಲು ಉತ್ತಮ ಮನೆ ಮದ್ದು ಇದು,ಅರ್ಧ ಟೇಬಲ್ ಸ್ಪೂನ್ ಅಷ್ಟು ಅಡುಗೆ ಸೋಡಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಆ ಮಿಶ್ರಣವನ್ನು ಒಂದು ಕಾಟನ್ ಬಳಸಿ ನಿಮ್ಮ ಉಗುರುಗಳನ್ನು ಉಜ್ಜಿ ಬೆಚ್ಚಗಿನಿ ನೀರಿನಿಂದ ಕೈ ತೊಳೆಯಿರಿ..ಇದರಿಂದ ಉಗುರುಗಳು ಸ್ವಚ್ಛವಾಗುತ್ತವೆ..

ಟೂತ್ ಪೇಸ್ಟ್
ಟೂತ್ ಪೇಸ್ಟ್ ಯಾವುದೆ ಕಲೆಗಳನ್ನು ತಕ್ಷಣಗೆ ನಿವಾರಣೆ ಮಾಡುತ್ತದೆ..ಕಾಟನ್ ಗೆ ಸ್ವಲ್ಪ ಟೂತ್ ಪೇಸ್ಟ್‌ನ ಹಾಕಿ,ಅಡುಗೆ ಬಳಿಕ ನಿಮ್ಮ ಉಗುರುಗಳನ್ನು ಉಜ್ಜಿದರೆ, ಹಳದಿ ಬಣ್ಣ ನಿವಾರಣೆಯಾಗುತ್ತದೆ..











