
ಪ್ರವಾಸಿ ಕೇಂದ್ರ ಕೊಡಗಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ, ಬಹಳಷ್ಟು ಪ್ರವಾಸಿಗಳು ಕುಶಾಲನಗರ ವ್ಯಾಪ್ತಿಯಲ್ಲಿ ತಂಗುತ್ತಾರೆ. ಅದರಲ್ಲೂ ಕಾವೇರಿ ಹೊಳೆ ಹರಿಯುವ ಪ್ರದೇಶದಲ್ಲಿ ಇರುವ ಹೋಂ ಸ್ಟೇ ರೆಸಾರ್ಟ್ ಗಳಲ್ಲಿ ಹೆಚ್ಚಿನವರು ತಂಗುತ್ತಾರೆ. ಆದ್ದರಿಂದಲೇ ಕಾವೇರಿ ನದಿ ಹರಿಯುವ ಪ್ರದೇಶದ ಎರಡು ಕಡೆ ಇರುವ ಜಾಗಗಳೆಲ್ಲವೂ ಕೂಡ ಅತಿ ದುಬಾರಿ ದರಕ್ಕೆ ಮಾರಾಟವಾಗುತ್ತಿದೆ.
ಜಾಗ ಪಡೆದುಕೊಂಡ ಕೆಲವರು ಹೊಳೆಯ ಬದಿಯನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ಹೋಂ ಸ್ಟೇ ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕುಶಾಲನಗರದ ಕಾವೇರಿ ನದಿ ಬಫರ್ ಜೋನ್ ನಲ್ಲಿ ವ್ಯಾಪಕವಾಗಿ ಕಟ್ಟಡ ಗಳು ಅಣಬೆಕೊಡೆ ಗಳಂತೆ ತಲೆ ಎತ್ತುತಿದ್ದು ರಾಷ್ಟ್ರೀಯ ಹಸಿರು ಪೀಠದ ಆದೇಶಕ್ಕೆ ವಿರುದ್ಧವಾಗಿ ನದಿ ತಟದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಯಾಗುತಿದೆ.
ರಾಜ್ಯ ಸರಕಾರವು ಬಫರ್ ಜೋನ್ ನಲ್ಲಿ ರುವ ಕಟ್ಟಡ ಗಳನ್ನು 2021 ರಲ್ಲೇ ತೆರವು ಮಾಡಲು ಆದೇಶ ನೀಡಿದೆ ಆದರೆ ಇದು ವಾಣಿಜ್ಯ ವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಉದ್ಯಮಿಗಳು ಮತ್ತು ರಾಜಕಾರಣಿಗಳ ಪ್ರಭಾವದಿಂದ ಇದರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯ ವಾಗುತ್ತಿಲ್ಲ ಮೊನ್ನೆ ಮೊನ್ನೆಯಾಗಿ 4 ಎಕ್ರೆ ಜಾಗ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಯಾಗಿದೆ.
ಕಟ್ಟಡ ನಿರ್ಮಿಸಲು ಪಟ್ಟಣ ಪಂಚಾಯತ್ ಮತ್ತು ಗುಡ್ಡೆ ಹೊಸೂರು ಗ್ರಾಮ ಪಂಚಾಯತ್ ಕಾನೂನು ಬಾಹಿರ ವಾಗಿ ಅನುಮತಿ ನೀಡುತಿದೆ ಎಂದು ಹಲವರು ದೂರಿಕೊಂಡಿದ್ದಾರೆ.
ಈ ಭಾಗದಲ್ಲಿ ಹಲವು ಅಕ್ರಮ ಬಡಾವಣೆ ಗಳು ನಿರ್ಮಾಣ ವಾಗಿದೆ. ಕೈಗಾರಿಕ ಉದ್ದೇಶಕ್ಕು ನದಿ ದಡ ಭೂ ಪರಿವರ್ತನೆ ಯಾಗುತ್ತಿದೆ.
ಕುಶಾಲನಗರ ಭಾಗದಲ್ಲಿ ಹರಿದು ಹೋಗುವ ಕಾವೇರಿ ನದಿಯ ಎರಡು ಕಡೆಯೂ ಕೂಡ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಈ ಬಡಾವಣೆಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗುತ್ತಿದೆ.
ಆದರೂ ಕೂಡ ಯಾವುದೇ ಕ್ರಮ ಜಿಲ್ಲಾಡಳಿತ ಕೈಗೊಂಡಿಲ್ಲ ಎಂದು ಹಲವು ಸಾರ್ವಜನಿಕರು ಅಭಿಪ್ರಾಯಸಿದ್ದಾರೆ. ವಿಪರ್ಯಾಸ ವೆಂದರೆ ಭೂ ಪರಿವರ್ತನೆ ಮಾಡಿದ ಅಧಿಕಾರಿಗಳು ಒತ್ತಡ ಹೇರಿದ ಜನಪ್ರತಿನಿದಿಗಳು ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಅವಧಿಯಲ್ಲಿ ಈ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅಲ್ಲಿರುವವರಿಗೆ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡುತಾರೆ.
ಪ್ರತಿವರ್ಷ ಮಳೆಗಾಲ ಬಂದಾಗ ಕಾವೇರಿ ನೀರು ಉಕ್ಕಿ ಹರಿದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಪೈಪೋಟಿಯಲ್ಲಿ ಭೇಟಿ ನೀಡಿ ಸ್ವಲ್ಪ ಪರಿಹಾರವನ್ನು ಘೋಷಿಸಿ , ಕೈ ತೊಳೆದುಕೊಳ್ಳುತ್ತಿದ್ದಾರೆ. ಇಂಥ ಬಡಾವಣೆಯ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದರಿಂದ ಕಾನೂನನ್ನು ಮೆಟ್ಟಿ ನಿಂತು ಇನ್ನಷ್ಟು ಬಡಾವಣೆಗಳು ಈ ಭಾಗದಲ್ಲಿ ನಿರ್ಮಾಣವಾಗುತ್ತಿದೆ.









