
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ (Television celebrity) ನಿರ್ದೇಶಕ( Director)Vinodವಿನೋದ್ ದೊಂಡಲೆ ಅವರು ಜುಲೈ 20 ರ ಶನಿವಾರದಂದು ನಾಗರಭಾವಿಯಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ ಎಂದು ವರದಿಯಾಗಿದೆ. ಕನ್ನಡದ ಜನಪ್ರಿಯ ಧಾರಾವಾಹಿಗಳಾದ ‘ಕರಿಮಣಿ,’ Karimani‘ಮೌನ ರಾಗ,’ (muvna raga)ಮತ್ತು‘ಶಾಂತಂ ಪಾಪಂ’ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಲೆ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಿ ನಡೆಸಿದ್ದರು. ಅವರು ಸತೀಶ್ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್’ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದರು. ಚಿತ್ರದ ಶೂಟಿಂಗ್ ಮುಂದಿನ ವಾರ ಆರಂಭವಾಗಬೇಕಿತ್ತು.
ಜುಲೈ 19ರ ಶುಕ್ರವಾರವಷ್ಟೇ ವಿನೋದ್ ಚಿತ್ರತಂಡದೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನಿರ್ದೇಶಕರ ಜೊತೆಗೆ ನಿರ್ಮಾಪಕರಾಗಿಯೂ ವಿನೋದ್ ಗುರುತಿಸಿಕೊಂಡಿದ್ದರು. ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದರು ಎಂದು ವರದಿಗಳು ತಿಳಿಸಿವೆ.