ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ಎರಡು ದಿನಗಳ ನವದೆಹಲಿ ಭೇಟಿಗೆ ಮುಂಚಿತವಾಗಿ, ಯುಎಸ್ ರಾಷ್ಟ್ರೀಯ ಆರ್ಥಿಕ ಭದ್ರತಾ ಉಪ ಸಲಹೆಗಾರ ದಲೀಪ್ ಸಿಂಗ್ ಅವರು ರಷ್ಯಾ ವಿರುದ್ಧ ಯುಎಸ್ ಹೇರಿರುವ ನಿರ್ಬಂಧಗಳನ್ನು ತಪ್ಪಿಸಲು ನೋಡುತ್ತಿರುವ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಉಕ್ರೇನ್ ಮೇಲಿನ ರಷ್ಯಾದ ದಾಳಿಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು ಎಂದು ಭಾರತಕ್ಕೆ ಅಮೆರಿಕ ಕಳುಹಿಸಿದ ಸಂದೇಶವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದಲೀಪ್ ಸಿಂಗ್, ‘ಪರಿಣಾಮಗಳು’ ಏನಾಗಬಹುದು ಎಂಬುದನ್ನು ನಿಖರವಾಗಿ ನಿರ್ದಿಷ್ಟಪಡಿಸಲಿಲ್ಲ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಮ್ಮ ನಿರ್ಬಂಧಗಳ ಕಾರ್ಯವಿಧಾನ ಮತ್ತು ಹಂಚಿಕೆಯ ಬಗ್ಗೆ ಮಾತಾಡಲು ಸ್ನೇಹದ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇನೆ. ಮತ್ತು ರಷ್ಯಾಗೆ ಹೇರಿರುವ ನಿರ್ಬಂಧಗಳನ್ನು ತಪ್ಪಿಸಲು ಪ್ರಯತ್ನಿಸುವ ದೇಶಗಳು ಪರಿಣಾಮಗಳನ್ನು ಎದುರಿಸಲಿವೆ”. ಬಂಧನ ಭೀತಿ ಇಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿರುವ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ಆಕ್ಷೇಪಿಸಿದರು ಎಂದು ಅರ್ಜಿದಾದರ ವಕೀಲರು ವಾದಿಸಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ ಭಾರತಕ್ಕೆ ಯುಎಸ್ ಯಾವುದೇ ‘ಕೆಂಪು ಗೆರೆ’ಗಳನ್ನು ಎಳೆಯುವುದಿಲ್ಲ ಎಂದು ಅವರು ಹೇಳಿದರು. “ಸ್ನೇಹಿತರು ಕೆಂಪು ಗೆರೆಗಳನ್ನು ಎಳೆಯುವುದಿಲ್ಲ. ನಮ್ಮ ಚರ್ಚೆಗಳು ಯುರೋಪ್ ಮತ್ತು ಏಷ್ಯಾದಲ್ಲಿ ನಮ್ಮ ಇತರ ಪಾಲುದಾರರೊಂದಿಗಿನ ಚರ್ಚೆಯಂತೆಯೇ ಇರುತ್ತದೆ. ಕಾಲಾನಂತರದಲ್ಲಿ ನಾವು ವಿಶ್ವಾಸಾರ್ಹವಲ್ಲದ ಇಂಧನ ಪೂರೈಕೆದಾರರ ಮೇಲೆ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಮತ್ತು ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದರೂ, ಇಂಧನ ಶಕ್ತಿಯ ಪೂರೈಕೆಯನ್ನು ತ್ವರಿತವಾಗಿ ಹೆಚ್ಚಿಸಲು ಪರಿಸ್ಥಿತಿಯ ಲಾಭವನ್ನು ಪಡೆಯುವ ನಾವು ಯಾವುದೇ ಪ್ರಯತ್ನವನ್ನು ನೋಡಲು ನಾವು ಬಯಸುವುದಿಲ್ಲ” ಎಂದಿದ್ದಾರೆ.
ರಷ್ಯಾವು ಭಾರಿ ರಿಯಾಯಿತಿಗಳನ್ನು ನೀಡುವುದರೊಂದಿಗೆ, ಇಂಡಿಯನ್ ಆಯಿಲ್ ಮೂರು ಮಿಲಿಯನ್ ಬ್ಯಾರೆಲ್ಗಳ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ವರದಿಯಾಗಿದೆ. ಅಲ್ಲದೆ ಈ ವರ್ಷ ಭಾರತವು ರಷ್ಯಾದಿಂದ 15 ಮಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬಹುದು ಎಂಬ ವರದಿಗಳೂ ಇವೆ. ಈ ಹಿನ್ನಲೆಯಲ್ಲಿ ರಷ್ಯಾವು ಕಡಿಮೆ ಬೆಲೆಗೆ ಒದಗಿಸುತ್ತಿರುವ ತೈಲವನ್ನು ಖರೀದಿಸುತ್ತಿರುವ ಭಾರತವನ್ನು ‘ಇತಿಹಾಸ ತಪ್ಪು ಭಾಗದಲ್ಲಿ ಇರಿಸುತ್ತದೆ’ ಎಂದು ಯುಎಸ್ ಮೊದಲು ಹೇಳಿತ್ತು. ಇದಕ್ಕೆ ಭಾರತೀಯ ಅಧಿಕಾರಿಗಳು ರಷ್ಯಾದ ತೈಲ ರಫ್ತಿನ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದು ತಿರುಗೇಟು ನೀಡಿದ್ದರು. ಅಲ್ಲದೆ ಯುಎಸ್ನ ಯುರೋಪಿಯನ್ ಮಿತ್ರರಾಷ್ಟ್ರಗಳು ಇನ್ನೂ ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿವೆ ಎಂದೂ ಅವರು ಹೇಳಿದ್ದರು. ತೈಲ ಸ್ವಾವಲಂಬನೆ ಹೊಂದಿರುವ ದೇಶಗಳು ‘ನಿರ್ಬಂಧಿತ ವ್ಯಾಪಾರವನ್ನು ವಿಶ್ವಾಸಾರ್ಹವಾಗಿ ಸಮರ್ಥಿಸಲು ಸಾಧ್ಯವಿಲ್ಲ’ ಎಂಬುದು ಭಾರತ ನಿಲುವಾಗಿತ್ತು.

ರಷ್ಯಾದ ಮೇಲೆ ಯುಎಸ್ ನಿರ್ಬಂಧಗಳ ಬಗ್ಗೆ ಮಾತನಾಡಿರುವ ಸಿಂಗ್, ಎಲ್ಲಾ ದೇಶಗಳು, ವಿಶೇಷವಾಗಿ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು, ರಷ್ಯಾದ ಕರೆನ್ಸಿಯನ್ನು ಬೆಂಬಲಿಸುವ ಮತ್ತು ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾರ್ಯವಿಧಾನಗಳನ್ನು ರಚಿಸಬಾರದು ಎಂದು ಹೇಳಿದ್ದಾರೆ.
ಅಲ್ಲದೆ CNN-News18 ಗೆ ನೀಡಿದ ಸಂದರ್ಶನದಲ್ಲಿ, ಪ್ರಪಂಚದಾದ್ಯಂತ ಶಾಂತಿ ಮತ್ತು ಭದ್ರತೆಯ ಆಧಾರವಾಗಿರುವ ಮೂಲ ತತ್ವಗಳು ಅಪಾಯದಲ್ಲಿದೆ ಎಂದು ಸಿಂಗ್ ಹೇಳಿದ್ದಾರೆ. “ಅದಕ್ಕಾಗಿಯೇ ನಾವು ರಷ್ಯಾದ ಮೇಲೆ ಈ ನಿರ್ಬಂಧವನ್ನು ಹೇರುತ್ತಿದ್ದೇವೆ ಮತ್ತು ಅದಕ್ಕಾಗಿಯೇ ನಾವು ಉಕ್ರೇನ್ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಹಾಯ ಮಾಡುತ್ತಿದ್ದೇವೆ” ಎಂದು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ಸರ್ವಾಧಿಕಾರಿ ವಿರುದ್ಧ ನಿರ್ಬಂಧಗಳನ್ನು ಹೇರದಿದ್ದರೆ, ರಷ್ಯಾದ ಅತಿಕ್ರಮಣವನ್ನು ಎಲ್ಲಾ ಪ್ರಜಾಪ್ರಭುತ್ವಗಳು ಭರಿಸಬೇಕಾಗುತ್ತವೆ ಎಂದು ಅವರು ಹೇಳಿದರು. “ಅವರು ಬಹುಶಃ ಭಾರತದ ಗಡಿಗಳಲ್ಲಿ ಪ್ರಭಾವದ ಕ್ಷೇತ್ರವನ್ನು ಬೀರಲು ಬಯಸಬಹುದು. ಆದರೆ ಅವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ” ಎಂದೂ ಅವರು ಹೇಳಿದ್ದಾರೆ.
ಭಾರತದ ಭದ್ರತಾ ವಿಷಯಗಳ ಬಗ್ಗೆಯೂ ಮಾತನಾಡಿದ ಅವರು “ರಷ್ಯಾವು ಚೀನಾದ ಪಾಲುದಾರರಾಗುತ್ತಿದೆ. ಚೀನಾವು ರಷ್ಯಾದ ಮೇಲೆ ಹೆಚ್ಚು ಹತೋಟಿ ಸಾಧಿಸುತ್ತದೆ ಇದು ಭಾರತಕ್ಕೆ ಕಡಿಮೆ ಅನುಕೂಲಕರವಾಗಿದೆ. ಚೀನಾವು ವಾಸ್ತವ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದರೆ, ರಷ್ಯಾ ಭಾರತದ ರಕ್ಷಣೆಗೆ ಬರುತ್ತದೆ ಎಂದು ಯಾರಾದರೂ ಯೋಚಿಸಿದ್ದೀರಾ? ನಾನು ಎಂದಿಗೂ ಹಾಗೆ ಯೋಚಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಯುಎಸ್ ಮತ್ತು ಭಾರತದ ನಡುವಿನ ಆರ್ಥಿಕ ಸಂಬಂಧವು ತಪ್ಪಿದ ಅವಕಾಶಗಳು ಮತ್ತು ತಪ್ಪು ತಿಳುವಳಿಕೆಗಳ ಕಥೆಯಾಗಿದೆ, ಆದರೆ ಈಗ ಅದು ಬದಲಾಗುತ್ತಿದೆ ಎಂದೂ ಸಿಂಗ್ ಹೇಳಿದ್ದಾರೆ. “ಯುಎಸ್ ಭಾರತದ ಅಗ್ರ ವ್ಯಾಪಾರ ಪಾಲುದಾರರಾಗಿದ್ದು, ಇದು ರಷ್ಯಾಕ್ಕಿಂತ ಹತ್ತು ಪಟ್ಟು ಹೆಚ್ಚು. ಅಮೆರಿಕ ಭಾರತದಲ FDI ಯ ಎರಡನೇ ಅತಿದೊಡ್ಡ ಮೂಲವಾಗಿದೆ. ನಾವು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಎರಡರಲ್ಲೂ ನಾಲ್ಕನೇ ಅತಿದೊಡ್ಡ ಇಂಧನ ಪೂರೈಕೆದಾರರಾಗಿದ್ದೇವೆ, ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ರಷ್ಯಾ ಭಾರತಕ್ಕೆ ರಫ್ತು ಮಾಡುವ ನಾಲ್ಕು ಪಟ್ಟು ಹೆಚ್ಚು ನಾವು ರಪ್ತು ಮಾಡುತ್ತೇವೆ” ಎಂದಿದ್ದಾರೆ.
ರಷ್ಯಾದ ಮೇಲೆ ಯುಎಸ್ ಹೇರಿರುವ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಹಿಂತೆಗೆದುಕೊಳ್ಳುವುದಾಗಿ ವಾಗ್ದಾನ ಮಾಡಿದ ನಂತರವೂ ರಷ್ಯಾ ಮಾರ್ಚ್ 30 ಬುಧವಾರದಂದು ಕೈವ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಂಬ್ ದಾಳಿಯನ್ನು ಮುಂದುವರೆಸಿದೆ ಎಂದಿದ್ದಾರೆ. “ಸತ್ಯವೇನೆಂದರೆ ರಷ್ಯಾವು ಅದರ ಉದ್ದೇಶಗಳ ಬಗ್ಗೆ ಆರು ತಿಂಗಳಿಗಿಂತ ಹೆಚ್ಚು ಕಾಲದಿಂದಲೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಸುಳ್ಳು ಹೇಳುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.