• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಭ್ರಷ್ಟಾಚಾರದ ವಿರುದ್ಧ ಕರೆ ನೀಡಿದ್ದ ಬಂದ್​ ವಾಪಸ್​ ಪಡೆದ ಕಾಂಗ್ರೆಸ್​

ಪ್ರತಿಧ್ವನಿ by ಪ್ರತಿಧ್ವನಿ
March 8, 2023
in ಇದೀಗ, ಕರ್ನಾಟಕ
0
ಭ್ರಷ್ಟಾಚಾರದ ವಿರುದ್ಧ ಕರೆ ನೀಡಿದ್ದ ಬಂದ್​ ವಾಪಸ್​ ಪಡೆದ ಕಾಂಗ್ರೆಸ್​
Share on WhatsAppShare on FacebookShare on Telegram

ಬೆಂಗಳೂರು : ಕೆಎಸ್​ಡಿಎಲ್​ ಟೆಂಡರ್​ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಪ್ರಶಾಂತ್​​ ಮಾಡಾಳು ವಿರುದ್ಧ ಕಾಂಗ್ರೆಸ್​ ಸಮರ ಸಾರಿತ್ತು. ರಾಜ್ಯ ಬಿಜೆಪಿ ಸರ್ಕಾರವು ಭ್ರಷ್ಟಾಚಾರಕ್ಕೆ ನೀರೆರೆಯುತ್ತಿದೆ ಎಂದು ಆರೋಪಿಸಿದ್ದ ರಾಜ್ಯ ನಾಯಕರು ನಾಳೆ ರಾಜ್ಯಾದ್ಯಂತ ಎರಡು ಗಂಟೆಗಳ ಕಾಲ ಬಂದ್​ಗೆ ಕರೆ ನೀಡಿದ್ದರು. ಆದರೆ ನಾಳೆ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬಂದ್​ ನಿರ್ಧಾರದಿಂದ ಕಾಂಗ್ರೆಸ್​ ಹಿಂದೆ ಸರಿದಿದೆ.

ADVERTISEMENT

ಈ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಖಂಡಿಸಿ ನಾಳೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರಿಗೆ ಬಂದ್​ಗೆ ಕರೆ ನೀಡಿದ್ದೆವು. ಆದರೆ ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ನಾಳೆ ನಡೆಯಬೇಕಿದ್ದ ಬಂದ್​ ಹಿಂಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರನ್ನು ಪಕ್ಷದಿಂದ ಉಚ್ಛಾಟಿಸಬೇಕು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್​ ನಾಯಕರು ನಾಳೆ ರಾಜ್ಯಾದ್ಯಂತ ಬಂದ್​ ಕರೆ ನೀಡಿದ್ದರು. ಆದರೆ ಕಾಂಗ್ರೆಸ್​ ಬಂದ್​ನಿಂದ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿಗೆ ಏನಾದರೂ ಅಡಚಣೆ ಉಂಟಾದರೆ ತಮ್ಮ ಪಕ್ಷಕ್ಕೆ ಡ್ಯಾಮೇಜ್​ ಉಂಟಾಗಬಹುದೆಂದು ಹೆದರಿ ಕಾಂಗ್ರೆಸ್​ ಈ ನಿರ್ಧಾರಕ್ಕೆ ಬಂದಿದೆ ಎಂದು ಅಂದಾಜಿಸಲಾಗಿದೆ .

ಭ್ರಷ್ಟಾಚಾರ ಆರೋಪ ಎದುರಾದ ಬಳಿಕ ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಡಾಳು ವಿರೂಪಾಕ್ಷಪ್ಪ ಬಳಿಕ ತಲೆಮರೆಸಿಕೊಂಡಿದ್ದರು. ಆದರೆ ನಿನ್ನೆ ರಾಜ್ಯ ಹೈಕೋರ್ಟ್​ನಲ್ಲಿ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಷೇತ್ರದಲ್ಲಿ ದಿಢೀರ್​ ಪ್ರತ್ಯಕ್ಷರಾಗಿದ್ದರು. ಭ್ರಷ್ಟಾಚಾರ ಪ್ರಕರಣದ ಆರೋಪಿ ವಿರೂಪಾಕ್ಷಪ್ಪರಿಗೆ ಬೆಂಬಲಿಗರು ನೀಡಿದ್ದ ಅದ್ಧೂರಿ ಸ್ವಾಗತ ಭಾರೀ ವಿವಾದವನ್ನು ಸೃಷ್ಟಿಸಿತ್ತು.

Tags: BJPKarnataka bandhMadalu Virupakshappa
Previous Post

‘ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು’ : ‘ಕೈ’ ನಾಯಕ ಮಿಥುನ್​ ರೈ ಹೊಸ ವಿವಾದ

Next Post

ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ: ಸಚಿವ ವಿ.ಸೋಮಣ್ಣ

Related Posts

ದೇವಾಲಯಗಳ ಹುಂಡಿ ಎಣಿಸುವ ಜಾಗದಲ್ಲಿ ಸಿಸಿಟಿವಿ ಕಡ್ಡಾಯ: ಸಿಎಂ ಖಡಕ್‌ ಸೂಚನೆ
Top Story

ಬಂದ್ ವಾಪಸ್ ಪಡೆದ ಸಂಘಟನೆಗಳಿಗೆ ಸಿಎಂ ಡಿ.ಕೆ ಶಿವಕುಮಾರ್  ಕೃತಜ್ಞತೆ

by ಪ್ರತಿಧ್ವನಿ
August 13, 2026
0

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಬಳಿಕ ಕೆಲವು ಪ್ರಮುಖ ಹೋರಾಟಗಾರರ ತಂಡ ಮುಖ್ಯಮಂತ್ರಿ ಡಿ.ಕೆ....

Read moreDetails
ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

ರಿಹಾಬ್ ಕೇಂದ್ರದ ರೋಗಿಗಳನ್ನು SIR ಪ್ರಕ್ರಿಯೆಯಲ್ಲಿ ಸೇರಿಸಿ: ಮೋಹನ್ ಕುಮಾರ್ ದಾನಪ್ಪ ಆಗ್ರಹ

August 13, 2026
ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

August 13, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

August 13, 2026
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

August 13, 2026
Next Post
ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ: ಸಚಿವ ವಿ.ಸೋಮಣ್ಣ

ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ: ಸಚಿವ ವಿ.ಸೋಮಣ್ಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada