• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೋದಿ, ಯೋಗಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ : ಉತ್ತರ ಪ್ರದೇಶ ವಿಧಾನಸೌಧಕ್ಕೆ ಮುತ್ತಿಗೆ ಯತ್ನ..

ನಮ್ಮನ್ನು ಜೈಲಿಗೆ ಹಾಕಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದ ಅಜಯ್‌ ರೈ..!

ಪ್ರತಿಧ್ವನಿ by ಪ್ರತಿಧ್ವನಿ
February 17, 2026
in Top Story, ಇದೀಗ, ದೇಶ, ರಾಜಕೀಯ
0
ಮೋದಿ, ಯೋಗಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ : ಉತ್ತರ ಪ್ರದೇಶ ವಿಧಾನಸೌಧಕ್ಕೆ ಮುತ್ತಿಗೆ ಯತ್ನ..
Share on WhatsAppShare on FacebookShare on Telegram

ಬೆಂಗಳೂರು : ಕೇಂದ್ರ ಸರ್ಕಾರದ ಕರಾಳ ಕಾರ್ಮಿಕ ಮಸೂದೆಗಳು ಹಾಗೂ ಮನ್ರೇಗಾ ರದ್ಧತಿಯನ್ನು ಖಂಡಿಸಿ ಉತ್ತರ ಪ್ರದೇಶದಲ್ಲಿ ಯೂಥ್‌ ಕಾಂಗ್ರೆಸ್‌ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದೆ. ಪ್ರತಿಭಟನೆಯಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ADVERTISEMENT
YouTube player

ಪ್ರತಿಭಟನೆಗೂ ಮುನ್ನವೇ ಕಾಂಗ್ರೆಸ್‌ನ ಹಲವು ನಾಯಕರನ್ನು ಯೋಗಿ ಸರ್ಕಾರ ಗೃಹಬಂಧನದಲ್ಲಿರಿಸಿದ್ದು, ಬಳಿಕ ಇದರಿಂದ ಕೆರಳಿದ ಯೂಥ್‌ ಕಾಂಗ್ರೆಸ್‌ ಸಾವಿರಾರು ಕಾರ್ಯಕರ್ತರು ವಿಧಾನಸೌಧದ ಮುತ್ತಿಗೆ ಹಾಕಲು ಮುಂದಾದರು. ಆದರೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆದರು. ಇದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೋಲಾಹಲಕ್ಕೆ ಕಾರಣವಾಯಿತು. ಈ ವೇಳೆ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಅಲ್ಲದೆ ಯೋಗಿ ಸರ್ಕಾರದ ನೀತಿಯನ್ನು ಖಂಡಿಸಿ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆದಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆಗೆ ಕಾಂಗ್ರೆಸ್‌ ಮುಂದಾಗಿತ್ತು.

ಇನ್ನೂ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವು ವಿಧಾನಸೌಧದ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಿತ್ತು. ಆದರೆ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ, ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು.

ಇದನ್ನೂ ಓದಿ : BREAKING: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

ಈ ವೇಳೆ ಮಾತನಾಡಿದ ಅಜಯ್‌ ರೈ, ಇಂದು ಹಾಕಲಾಗಿರುವ ಬ್ಯಾರಿಕೇಡ್‌ಗಳು ಮತ್ತು ಪೊಲೀಸ್ ಬಂದೂಕುಗಳು ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿವೆ. ಪ್ರಜಾಪ್ರಭುತ್ವದಲ್ಲಿ, ಬೆದರಿಕೆ ಮತ್ತು ಬಲ ಪ್ರಯೋಗಿಸಿ ಆಡಳಿತ ನಡೆಸುವುದನ್ನು ಆಡಳಿತ ಅಂತ ಕರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸರ್ಕಾರಗಳು ಬುಲ್ಡೋಜರ್‌ಗಳಂತೆ ಮತ್ತು ಭಯ ಸೃಷ್ಟಿಸುವಂತೆ ವರ್ತನೆ ಮಾಡಬಾರದು. ಬದಲಿಗೆ ಪ್ರೀತಿ ಮತ್ತು ವಿಶ್ವಾಸದಿಂದ ನಡೆಯಬೇಕು. ದೇಶದಲ್ಲಿ ಯುವಕರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಎಲ್ಲೆಡೆ ಭಯದ ವಾತಾವರಣವಿದೆ. ಆದರೆ ನೆನಪಿಡಿ, ನಮಗೆ ಗಾಂಧೀಜಿಯವರ ಆಶೀರ್ವಾದ ಮತ್ತು ಜನರ ಬೆಂಬಲ ಇರುವವರೆಗೆ, ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಅಲ್ಲದೆ ನಿಮ್ಮ ಕುತಂತ್ರ ರಾಜಕೀಯಕ್ಕೆ ತಲೆಬಾಗುವುದಿಲ್ಲ. ಇದು ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ, ಮತ್ತು ನಾವು ಕೊನೆಯ ಉಸಿರಿನವರೆಗೆ ಹೋರಾಡುತ್ತೇವೆ ಎಂದು ಅಜಯ್‌ ರೈ ಕೇಂದ್ರ ಹಾಗೂ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ 11-12 ತಿಂಗಳುಗಳಿಂದ ಸರ್ಕಾರ ತಡೆಹಿಡಿದಿರುವ ಕಾರ್ಮಿಕರ ವೇತನ, ಮನ್ರೇಗಾ ರದ್ದುಗೊಳಿಸುವ ಸರ್ಕಾರದ ನಿರ್ಧಾರವು, ಮಹಿಳೆಯರು, ಕಾರ್ಮಿಕರು, ಶಂಕರಾಚಾರ್ಯ ಮತ್ತು ಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.

ದೇಶದಲ್ಲಿನ ಮಾರುಕಟ್ಟೆಗಳನ್ನು ಕೆಡವುವುದು, ಬೇಳೆ ಕಾಳುಗಳಂತಹ ಮಾರುಕಟ್ಟೆಗಳನ್ನು ಹಾಳುಮಾಡುವುದು, ಅಲ್ಲದೆ ಗುಜರಾತ್‌ನ ಜನರಿಗೆ ಎಲ್ಲಾ ಭೂಮಿಯನ್ನು ಧಾರೆ ಎರಯುವುದನ್ನು ನಾವು ವಿರೋಧಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಗುಡುಗಿದ್ದಾರೆ.

Tags: Ajay RaiCM Yogi AdityanathCongress leadercongress protestcongress vs bjpkannada newskarnataka newsMassive ProtestMNREGAPratidhvaniPrime Minister Narendra Moditrending newsUP AssemblyUP Policeuttara Pradesh Governmentvbg ramji bill
Previous Post

BREAKING: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

Next Post

ರಾಜ್ಯ ಸರ್ಕಾರವೇ ಬಡವರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ- ಛಲವಾದಿ ನಾರಾಯಣಸ್ವಾಮಿ ಆರೋಪ

Related Posts

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”
Top Story

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

by ಪ್ರತಿಧ್ವನಿ
May 16, 2026
0

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಮೂರನೇ ಮಗುವಿನ ಜನನಕ್ಕೆ ₹30 ಸಾವಿರ ಹಾಗೂ...

Read moreDetails
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
Next Post
ರಾಜ್ಯ ಸರ್ಕಾರವೇ ಬಡವರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ- ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯ ಸರ್ಕಾರವೇ ಬಡವರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ- ಛಲವಾದಿ ನಾರಾಯಣಸ್ವಾಮಿ ಆರೋಪ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada