ಕಳೆದ ಹಲವು ದಿನಗಳಿಂದ ರಾಜ್ಯ ರಾಜಕಾರಣ ಮತ್ತು ತಮ್ಮ ಮೇಲಿನ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮಾಧ್ಯಮಗಳು ಮತ್ತು ಆರೋಪಗಳಿಂದ ದೂರ ಉಳಿದಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಕಳೆದ ವಾರ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಿಮ್ಮ ಭ್ರಷ್ಟಾಚಾರದ ಸಂಪೂರ್ಣ ದಾಖಲೆಗಳು ನನ್ನ ಬಳಿಯಿದೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ವಾರ್ನಿಂಗ್ ಕೊಟ್ಟಿದ್ದರು.ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಕುರಿತು ತಮ್ಮ ಬಳಿ ಟನ್ ಗಟ್ಟಲೆ ದಾಖಲೆಗಳಿವೆ. ನಾನು ಅದನ್ನು ಸದ್ಯದಲ್ಲೇ ರಿಲೀಸ್ ಮಾಡ್ತಿನಿ ಎಂದಿದ್ದರು. ಆದ್ರೆ ಇದುವರೆಗೂ ಯಾವುದೇ ದಾಖಲೆಗಳು ರಿಲೀಸ್ ಆಗಿಲ್ಲ.

ಹೀಗಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಕೇಳ್ವಳ ಹಿಟ್ & ರನ್ ಮಾಡ್ತಾರೆ. ಅವರು ಯಾವಾಗಲೂ ದಾಖಲೆಗಳಿವೆ ಎಂದು ಆರೋಪ ಮಾಡ್ತಾರೆ, ಆದ್ರೆ ಇದುವರೆಗೂ ಯಾವುದೇ ದಾಖಲೆಗಳನ್ನು ರಿಲೀಸ್ ಮಾಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಕುಮಾರಸ್ವಾಮಿ ಕುರಿತು ಅಣಕು ಪ್ರದರ್ಶನ ಮಾಡುವ ಮೂಲಕ ಕುಮಾರಸ್ವಾಮಿ ಹೇಳಿಕೆಯನ್ನು ಟೀಕಿಸಿದ್ದಾರೆ. ಥೇಟ್ ಕುಮಾರಸ್ವಾಮಿ ಅವರಂತೆ ವೇಷ ತೊಟ್ಟು ಮುಖವಾಡ ಹಾಕಿ ಕೈಯಲ್ಲಿ ದಾಖಲೆಗಳ ಬ್ರೀಫ್ ಕೇಸ್ ಹಿಡಿದು ವ್ಯಕ್ತಿಯೊಬ್ಬ ನಿಂತಿದ್ದು, ನನ್ನ ಬಳಿ ದಾಖಲೆಗಳಿವೆ ಆದ್ರೆ ರಿಲೀಸ್ ಮಾಡಲ್ಲ ಅಂತ ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಒಂದು ಮಿನಿ ಲಾರಿ ವಾಹನವನ್ನು ನಿಲ್ಲಿಸ್ಕೊಂಡಿದ್ದು, ಅದರ ಮೇಲೂ ಕೂಡ ಕುಮಾರಸ್ವಾಮಿ ವಿರುದ್ಧ ಬರಹಗಳನ್ನು ಬರೆದು ಹೆಚ್.ಡಿ.ಕೆ ಯನ್ನು ಪ್ರಶ್ನೆ ಮಾಡಿದ್ದಾರೆ. ಟನ್ ಗಟ್ಟಲೆ ದಾಖಲೆ ಇದೆ. ಆದ್ರೆ ಅದನ್ನು ಸಾಗಿಸವು ವಾಹನ ಇಲ್ಲವೋ ಏನೋ ಎಂಬಂತೆ ಟೀಕಿಸಿರುವ ಸಾಲುಗಳನ್ನು ಕಾಣಬಹುದಾಗಿದೆ. ಇದರ ಜೊತೆಗೆ ಮೊದಲು ನಿಮ್ಮ ಮೇಲಿರುವ ಒತ್ತುವರಿ ಆರೋಪಗಳ ಬಗ್ಗೆ ಉತ್ತರಕೊಡಿ, ಅದನ್ನು ಹೊರತುಪಡಿಸಿ ಸುಮ್ಮನೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದು ಹೆಚ್.ಡಿ.ಕೆ ಟಾಂಗ್ ಕೊಟ್ಟಿದ್ದಾರೆ.