• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, November 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಮೂರನೇ ವಾರಕ್ಕೆ ಕಾಲಿಟ್ಟ “BAD” ಚಿತ್ರ .

ಪ್ರತಿಧ್ವನಿ by ಪ್ರತಿಧ್ವನಿ
April 12, 2025
in ಇತರೆ / Others, ಇದೀಗ, ಕರ್ನಾಟಕ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ಇದು ಪಿ.ಸಿ.ಶೇಖರ್ ನಿರ್ದೇಶನದ ಹಾಗು ನಕುಲ್ ಗೌಡ – ಮಾನ್ವಿತ ಹರೀಶ್ ಅಭಿನಯದ ಈ ಚಿತ್ರಕ್ಕೆ ಮನಸೋತ ಕನ್ನಡಿಗರು

ADVERTISEMENT

ಪಿ.ಸಿ.ಶೇಖರ್ ನಿರ್ದೇಶನದ,
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ “BAD” ಚಿತ್ರ ಬಿಡುಗಡೆಯಾಗಿ ಎರಡು ವಾರಗಳಾಗಿ ಮೂರನೇ ವಾರ ಆರಂಭವಾಗಿದೆ. ವಿಭಿನ್ನ ಜಾನರ್ ನ ಈ ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಚಿತ್ರ ಯಶಸ್ವಿಯಾಗಿರುವುದಕ್ಕೆ ಚಿತ್ರತಂಡ ಸಂತಸಗೊಂಡಿದೆ‌.

ನನ್ನ ನಿರ್ದೇಶನದ “ರೋಮಿಯೋ”, ” ರಾಗ”, “ಚಡ್ಡಿದೋಸ್ತ್”, ” ಅರ್ಜುನ”, “ಲವ್ ಬರ್ಡ್ಸ್” ಚಿತ್ರಗಳನ್ನು ಕನ್ನಡ ಕಲಾಭಿಮಾನಿಗಳು ಯಶಸ್ವಿ ಮಾಡಿ ಪ್ರೋತ್ಸಾಹ ನೀಡಿದ್ದರು‌. ಈಗ ಆ ಸಾಲಿಗೆ “ಬ್ಯಾಡ್” ಚಿತ್ರ ಸೇರ್ಪಡೆಯಾಗಿದೆ. ಪರಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ಕನ್ನಡ ಚಿತ್ರವೊಂದು ಮೂರನೇ ವಾರದಲ್ಲಿ ಪ್ರದರ್ಶನ ಕಾಣುತ್ತಿರುವುದು ಹೆಮ್ಮೆಯಾಗಿದೆ‌. “ಪ್ರೀತಿಯ ರಾಯಭಾರಿ” ಚಿತ್ರದ ನಕುಲ್ ಗೌಡ ಅಭಿನಯಕ್ಕೆ ಫಿದಾ ಆಗಿದ್ದ ಅಭಿಮಾನಿಗಳು ಈ ಚಿತ್ರದ ಅವರ ನಟನೆಗೂ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ವೆಂಕಟೇಶ್ ಗೌಡ ಅವರಿಗೆ, ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.

“ಬ್ಯಾಡ್” ನನ್ನ ಅಭಿನಯದ ಎರಡನೇ ಚಿತ್ರ. ನನ್ನ ಎರಡನೇ ಚಿತ್ರ ಮೂರನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಬಹಳ ಖುಷಿಯಾಗಿದೆ. ಲವ್, ಆಕ್ಷನ್ ಅಂತಹ ಮಾಮೂಲಿ ಜಾನರ್ ನ ಕಥಾಹಂದರವಲ್ಲದೆ, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ನನಗೆ ತಿಳಿದ ಹಾಗೆ “ಉಳಿದವರು ಕಂಡಂತೆ” ಚಿತ್ರದ ನಂತರ ಈ ರೀತಿಯ ಕಥಾಹಂದರ ಹೊಂದಿರುವ ಚಿತ್ರ ಬಂದಿರಲಿಲ್ಲ. ನಮ್ಮ ಈ ಪ್ರಯತ್ನವನ್ನು ಇಷ್ಟ ಪಟ್ಟಿದ್ದಾರೆ. ಪರಭಾಷೆ ಚಿತ್ರಗಳ ನಡುವೆಯೂ ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌. ಗಳಿಕೆ(ಕಲೆಕ್ಷನ್) ಕೂಡ ಉತ್ತಮವಾಗಿದೆ. ಹೊಸಬರ ಚಿತ್ರವೊಂದು ಎರಡು ವಾರಗಳಲ್ಲಿ 46 ಲಕ್ಷಗಳಷ್ಟು ಕಲೆಕ್ಷನ್ ಮಾಡಿದೆ. ಇದೆಲ್ಲಾ ಸಾಧ್ಯವಾಗಿದ್ದು ಕನ್ನಡ ಕಲಾಭಿಮಾನಿಗಳಿಂದ. ಅವರಿಗೆ ಹಾಗೂ ನಮ್ಮ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ತುಂಬು ಹೃದಯದ ಧನ್ಯವಾದ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ನಾಯಕ ನಕುಲ್ ಗೌಡ ತಿಳಿಸಿದ್ದಾರೆ.

ನಿರ್ಮಾಪಕ ವೆಂಕಟೇಶ್ ಗೌಡ ಹಾಗೂ ನಟಿ ಅಪೂರ್ವ ಭಾರದ್ವಾಜ್ ಸಹ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ “BAD” ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ “BAD” ಚಿತ್ರಕ್ಕೆ ಸಚಿನ್ ಜಗದೀಶ್ವರ್ ಎಸ್ ಬಿ ಸಂಭಾಷಣೆ ಬರೆದಿದ್ದಾರೆ.

ನಕುಲ್ ಗೌಡ “BAD” ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Tags: actor nakul gowdaactor nakul gowda interviewbad kannada moviebad kannada movie interviewbad moviebad movie hero nakul gowdabad movie hero nakul gowda interviewbad movie nakul gowdabad nakul gowda interviewkannada movie badnakulnakul gowdanakul gowda bad movie actornakul gowda bad movie public reviewnakul gowda exclusive interviewnakul gowda in bad movienakul gowda interviewnakul gowda movie
Previous Post

‘ಬ್ರದರ್ ಕುಮಾರಣ್ಣಂಗೆ’ ಕಾಂಗ್ರೆಸ್ ಸಖತ್ ಕೌಂಟರ್ .. ಟನ್ ಗಟ್ಟಲೆ ಆಸ್ತಿ ಎಲ್ಲೋಯ್ತು HDK..? : ವೇಷ ತೊಟ್ಟು ನಿಂತ ಕಾರ್ಯಕರ್ತ ! 

Next Post

ಸ್ವಿಸ್‌ ವ್ಯವಹಾರ ನಿಯೋಗದೊಂದಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ

Related Posts

Communist Unity—Priority and Obligation
Top Story

ಕಮ್ಯುನಿಸ್ಟ್ ಐಕ್ಯತೆ-ಆದ್ಯತೆ ಮತ್ತು ಬಾಧ್ಯತೆ

by Shivakumar
November 14, 2026
0

ಶಿಕ್ಷಣ ಪಡೆದ ವ್ಯಕ್ತಿ ಎಂದರೆ ಪರಿಸ್ಥಿತಿಗೆ ಹೊಂದಿಕೊಂಡಿರುವ ವ್ಯಕ್ತಿ; ಏಕೆಂದರೆ ಆತ ಅಥವಾ ಆಕೆ ಈ ಜಗತ್ತಿಗೆ ಹೆಚ್ಚು ‘ಹೊಂದಿಕೊಳ್ಳಬಲ್ಲ’ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಪ್ರಾಯೋಗಿಕವಾಗಿ ಹೇಳುವುದಾದರೆ, ಈ...

Read moreDetails
RashiPhala

ಇಂದಿನ ದಿನ ಭವಿಷ್ಯ: 14 ನವೆಂಬರ್ 2026 (ಶನಿವಾರ) – ದ್ವಾದಶ ರಾಶಿಗಳ ಸಂಪೂರ್ಣ ಫಲಾಫಲ

November 14, 2026
ದಶಕಗಳ ಹಿಂದಿನ ಆಸ್ತಿ ಪತ್ರ ಈಗ ವಿವಾದಕ್ಕೆ ಕಾರಣ; ಅಮಿತಾಭ್ ಬಚ್ಚನ್ ಅವರ ಜಲ್ಸಾ ಬಂಗಲೆ ಯಾರದ್ದು?

ದಶಕಗಳ ಹಿಂದಿನ ಆಸ್ತಿ ಪತ್ರ ಈಗ ವಿವಾದಕ್ಕೆ ಕಾರಣ; ಅಮಿತಾಭ್ ಬಚ್ಚನ್ ಅವರ ಜಲ್ಸಾ ಬಂಗಲೆ ಯಾರದ್ದು?

November 13, 2026
ಪಿಂಕ್‌ ಲೈನ್‌ ಸಿದ್ಧ, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ; ರೈಲು ಸಮಯ ಮತ್ತು ಟಿಕೆಟ್‌ ದರ ಎಷ್ಟು?

ಪಿಂಕ್‌ ಲೈನ್‌ ಸಿದ್ಧ, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ; ರೈಲು ಸಮಯ ಮತ್ತು ಟಿಕೆಟ್‌ ದರ ಎಷ್ಟು?

November 13, 2026
ಮೈಸೂರಿನಲ್ಲಿ ಭಾರತದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟಿಸಿದ ಮೋದಿ; ಕಾಸ್ಮೋಸ್‌ನ ವಿಶೇಷತೆಗಳೇನು?

ಮೈಸೂರಿನಲ್ಲಿ ಭಾರತದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟಿಸಿದ ಮೋದಿ; ಕಾಸ್ಮೋಸ್‌ನ ವಿಶೇಷತೆಗಳೇನು?

November 13, 2026
Next Post

ಸ್ವಿಸ್‌ ವ್ಯವಹಾರ ನಿಯೋಗದೊಂದಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada