• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.. ಕುಮಾರಸ್ವಾಮಿಗೆ ನೇರ ಸವಾಲು..

ಪ್ರತಿಧ್ವನಿ by ಪ್ರತಿಧ್ವನಿ
April 17, 2025
in Top Story, ಕರ್ನಾಟಕ, ರಾಜಕೀಯ
0
ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.. ಕುಮಾರಸ್ವಾಮಿಗೆ ನೇರ ಸವಾಲು..
Share on WhatsAppShare on FacebookShare on Telegram

ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್​ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ನಿನ್ನ ಗೊಡ್ಡು ಬೆದರಿಕೆಗೆ, ಬಿಜೆಪಿ ಗೊಡ್ಡು ಬೆದರಿಕೆ ಹೆದರುವ ಮಗ ನಾನಲ್ಲ. ಅದೇನೋ ಟನ್ ಗಟ್ಟಲೆ ಆಸ್ತಿ ದಾಖಲೆಗಳಿವೆ ಅಂತಿದ್ದಲ್ಲ. ನಮ್ಮ ಹುಡುಗರನ್ನು ಕಳುಹಿಸಿಕೊಟ್ಟಿದ್ನಲ್ಲ, ಅದರಲ್ಲಿ ಕಳುಹಿಸಿಕೊಡಬೇಕಿತ್ತು..! ನಾವು ಏನೋ ನಮ್ಮ ಶ್ರಮದಿಂದ ಅಧಿಕಾರ ಹಿಡಿದಿದ್ದೇವೆ. ಬಿಜೆಪಿಯವ ಯಾವನೋ ಒಬ್ಬ ಚಂಗ್ಲೂ ಗವರ್ನರ್​ಗೆ ದೂರು ಕೊಟ್ಟವ್ನೇ, ಅವನದ್ದು ಏನೇನು ಅಂತಾ ಈಗಾಗಲೇ ಎಲ್ಲವೂ ಬಹಿರಂಗ ಆಗಿದೆಯಲ್ಲ ಅಂತಾ ಹೆಸರು ಹೇಳದೆ ಬಿಜೆಪಿ ಶಾಸಕ ಮುನಿರತ್ನಗೂ ಟಾಂಗ್ ಕೊಟ್ಟಿದ್ದಾರೆ.

ADVERTISEMENT

ಕುಮಾರಸ್ವಾಮಿ ಚರಿತ್ರೆಯನ್ನು ನಾನು ಇನ್ನೂ ಬಿಚ್ಚಿಟ್ಟಿಲ್ಲ, ನಿನ್ನದು, ನಿಮ್ಮ ಸಹೋದರ ಆಸ್ತಿ ಬಿಚ್ಚಿಡಬೇಕಾಗುತ್ತದೆ ಹುಷಾರ್ ಎಂದು ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್​ ಎಚ್ಚರಿಕೆ ನೀಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಹಾಜರಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಸಚಿವರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಸಾಕಪ್ಪ ಸಾಕು ಬಿಜೆಪಿ ಸಾಕು ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ ಇಳಿಸಲೇಬೇಕೆಂದು  ಆಗ್ರಹ ಮಾಡಿದ್ದಾರೆ.

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬಿಜೆಪಿಯಿಂದ ಬಡವರು ಬಡವರಾಗ್ತಿದ್ದಾರೆ. ಶ್ರೀಮಂತರು ಕುಬೇರರಾಗ್ತಿದ್ದಾರೆ. ದಿನೇ ದಿನೇ ಶ್ರೀಮಂತರ ಸಂಖ್ಯೆ ಹೆಚ್ಚಾಗ್ತಿದೆ. ರಾಹುಲ್, ಸೋನಿಯಾ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಸ್ವಿಸ್ ಬ್ಯಾಂಕ್ ಹಣ ತರ್ತೇವೆ ಅಂದ್ರು. ಎಲ್ಲಿ ನಿಮ್ಮ ಅಕೌಂಟಿಗೆ 15 ಲಕ್ಷ ಹಾಕಿದ್ರಾ..? ನೀರವ್ ಮೋದಿ, ಚೋಕ್ಸಿ ವಿದೇಶದಲ್ಲಿದ್ದಾರೆ. ಅವರ ಮೇಲೆ ಯಾವುದೇ ಕ್ರಮವಿಲ್ಲ. ನಮ್ಮ ಹೋರಾಟ ಬೆಂಗಳೂರಿಗೆ ಸೀಮಿತವಲ್ಲ. ನಮ್ಮ ಹೋರಾಟ ಜಿಲ್ಲೆ, ತಾಲೂಕು ತಲುಪಲಿದೆ. ಪ್ರತಿ ಹಳ್ಳಿಹಳ್ಳಿಗೆ ಹೋರಾಟ ಕೊಂಡೊಯ್ತೇವೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಸಚಿವ ಎಂಬಿ ಪಾಟೀಲ್ ಮಾತನಾಡಿ, ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ಕ್ರೂಡ್ ಆಯಿಲ್ ಬೆಲೆ ಹೆಚ್ಚಿದ್ದಾಗ ನಮ್ಮಲ್ಲಿ ಪೆಟ್ರೋಲ್ ದರ 60 ರೂಪಾಯಿ ಇತ್ತು. ಎಲ್‌ಪಿ‌ಜಿ ದರ 400 ರೂಪಾಯಿ ಇತ್ತು. ಅಡಿಗೆ ಎಣ್ಣೆ 60 ರೂಪಾಯಿ ಇತ್ತು. 2014ರಲ್ಲಿ ಅಚ್ಚೇದಿನ್ ಬರುತ್ತೆ ಎಂದು ಅಧಿಕಾರಕ್ಕೆ ಬಂದ್ರು. ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದ್ದರೂ ದರ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ಹೀಗಿದ್ದರೂ ರಾಜ್ಯದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ. ಜನರಿಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಒಳ್ಳೆದ್ ಮಾಡಿದ್ದೇವೆ. ತಾವೇ ಬೆಲೆ ‌ಏರಿಕೆ ಮಾಡಿ ನಮ್ಮ ವಿರುದ್ಧ ಇವರು ಹೋರಾಟ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಚಿವ ಎಂಸಿ ಸುಧಾಕರ್ ಮಾತನಾಡಿ, 11 ವರ್ಷದ ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಆಗ್ತಿದೆ. ಆದರೆ ಅದರ ಬಗ್ಗೆ ಬಿಜೆಪಿಯವರು ಮಾತಾಡ್ತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಚಾರ ಪ್ರಸ್ತಾಪಿಸುವ ಕೆಲಸವಾಗ್ತಿದೆ. ಬಡವರ ಜೀವನದ ಬಗ್ಗೆ ಮಾತಾಡ್ತಿಲ್ಲ. ಜನಾಕ್ರೋಶ ಯಾತ್ರೆ ಮಾಡ್ತಿದ್ದಾರೆ. ಬಡವರ ಬಗ್ಗೆ ಕಾಳಜಿ ಇದ್ರೆ, ನಿಮ್ಮ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹೋರಾಡಿ. ನಮ್ಮ ಸರ್ಕಾರವನ್ನ ಅಸ್ಥಿರ ಮಾಡುವ ಕೆಲಸ ಮಾಡ್ತಿದ್ದಾರೆ. ನಮ್ಮಲ್ಲೇ ಗೊಂದಲ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ. ನಾವೂ ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

Tags: amitshahbjpprotestCMSiddaramaiahcongressprotestDKShivakumarGasHdKumaraswamyHikeKarnatakakhmuniyappaModisiddaramaiah
Previous Post

ಲಕ್ಷ್ಮೀ ಹೆಬ್ಬಾಳ್ಕರ್​ ಕಾರಿಗೆ ಟಚ್​ ಮಾಡಿದ್ಯಾರು ಗೊತ್ತಾ..?

Next Post

ನಾಳೆಯಿಂದ ಲಾರಿ ಮುಷ್ಕರ ತೀವ್ರ.. ಸರ್ಕಾರದಿಂದ ಸಂಧಾನಕ್ಕೆ ಆಹ್ವಾನ

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ನಾಳೆಯಿಂದ ಲಾರಿ ಮುಷ್ಕರ ತೀವ್ರ.. ಸರ್ಕಾರದಿಂದ ಸಂಧಾನಕ್ಕೆ ಆಹ್ವಾನ

ನಾಳೆಯಿಂದ ಲಾರಿ ಮುಷ್ಕರ ತೀವ್ರ.. ಸರ್ಕಾರದಿಂದ ಸಂಧಾನಕ್ಕೆ ಆಹ್ವಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada