ಬೆಂಗಳೂರು : ರಾಹುಲ್ ಗಾಂಧಿಯವರನ್ನು’ರಾವಣ’ನಂತೆ ಬಿಂಬಿಸಿ ಬಿಜೆಪಿ ಪೋಸ್ಟರ್ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ, ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೈಲಾಗದವರ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು. ಅವರಲ್ಲಿ ವಾಟ್ಸ್ ಆಪ್ ಯೂನಿವರ್ಸಿಟಿ ಚೇರ್ಮನ್ ಯಾರು? ರಾಜ್ಯದಲ್ಲಿ 700 ಜನರು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡ್ತಿದಾರೆ. ಸುಳ್ಳನ್ನು ನಿಜ ಎಂದು ಬಿಂಬಿಸೋದೆ ಇವರ ಕೆಲಸ. ನಮ್ಮ ನಾಯಕರನ್ನು ರಾವಣನಿಗೆ ಹೋಲಿಸಿದ್ರೆ, ಅವರನ್ನು ಶಕುನಿಗೆ, ಕೀಚಕನಿಗೆ, ದುರ್ಯೋಧನನಿಗೆ ಹೋಲಿಸಬಹುದು. ಹೋಲಿಸೋದೇನು, ಅವರು ಇರೋದೆ ಹಾಗೆ. ಬಿಜೆಪಿ ನಾಯಕರು ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಮಾತನಾಡ್ತಾರೆ. ಇದು ಹರಿಶ್ಚಂದ್ರ ರೀತಿನಾ? ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.