ಪಹಲ್ಗಾಮ್ ದಾಳಿಯ (Pahalgam terror attack) ವಿಚಾರವಾಗಿ ದೇಶದಲ್ಲಿ ನಿಧಾನವಾಗಿ ರಾಜಕೀಯ ಪಕ್ಷಗಳು ರಾಜಕಾರಣ ಆರಂಭಿಸಿದ್ದು, ಬೇರೆ ಬೇರೆ ರೀತಿಯ ಟೀಕೆಗಳು ಕೇಳಿಬರುತ್ತಿವೆ.

ಇದೀಗ ಪ್ರಧಾನಿ ನರೇಂದ್ರ ಮೋದಿ (Pm modi) ಪೋಟೋದಲ್ಲಿ ತಲೆಯೇ ಇಲ್ಲದ ಪೋಟೋ ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಜವಾಬ್ದಾರಿ, ಹೊಣೆಯ ಸಮಯದಲ್ಲಿ ತಲೆಯೇ ನಾಪತ್ತೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹೀಗಾಗಿ ಇದು ರಾಜಕೀಯ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದ್ದು,ಕಾಂಗ್ರೆಸ್ ಟ್ವೀಟ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿರನ್ನು ಗುರಿಯಾಗಿಸಿಕೊಂಡು ಈ ಪೋಟೋ ಪೋಸ್ಟ್ ಮಾಡಲಾಗಿದೆ.ಈ ರೀತಿ ಪ್ರಧಾನಿ ಮೋದಿ ಪೋಟೋದಲ್ಲಿ ತಲೆ ಇಲ್ಲದಂತೆ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ರೀತಿಯ ಚಿಂತನೆಗಳು, ಪೋಸ್ಟ್ ಗಳು ಇದು ಉಗ್ರಗಾಮಿಗಳ ಭಾಷೆ ಎಂದು ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿಯಿಂದ ಆಕ್ರೋಶ ವ್ಯಕ್ತಪಡಿಸಿದೆ.