ಪಾಕಿಸ್ತಾನದ ಬಲೂಚಿಸ್ತಾನ (Balochistam) ಪ್ರದೇಶದಿಂದ ಪಾಕಿಸ್ತಾನದ ಸೇನೆ ಭಾರತದ ಗಡಿಯತ್ತ (India border) ಸಾಗಿಬಂದಿದೆ. ಪಾಕ್ ಮತ್ತು ಭಾರತದ ಗಡಿ ಭಾಗಕ್ಕೆ ಪಾಕ್ ಸೇನೆಯನ್ನು (Pakistan army) ಸ್ಥಳಾಂತರ ಮಾಡಲಾಗಿದೆ.

ಈಗಾಗಲೇ ಭಾರತದ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ, ಅತ್ತ ಪಾಕಿಸ್ತಾನ ಕೂಡ ಹೆಚ್ಚಿನ ಸೇನೆ ಜಮಾವಣೆ ಮಾಡಲು ಮಾಡಲು ಮುಂದಾಗಿದೆ.ಹೀಗಾಗಿ ಪಿಓಕೆಯ 540 ಕಿಲೋ ಮೀಟರ್ ಗಡಿಯ ಉದ್ದಕ್ಕೂ ಹೆಚ್ಚಿನ ಸೇನೆ ನಿಯೋಜನೆ ಮಾಡಲಾಗಿದೆ.
ಸದ್ಯ ಈ ಬೆಳವಣಿಗೆ ಗಮನಿಸಿದ್ರೆ ಪಾಕಿಸ್ತಾನ ಯುದ್ದಕ್ಕೆ ಸಕಲ ಸಿದ್ದತೆ ನಡೆಸುತ್ತಿರುವಂತೆ ಬಾಸವಾಗುತ್ತಿದೆ.ಇಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಮಹತ್ವದ ಸಭೆ ನಡೆಸಲಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಸಿಂಧೂ ನದಿ ನೀರು ಒಪ್ಪಂದಕ್ಕೆ ಎಳ್ಳು ನೀರು ಬಿಟ್ಟಿದ್ದು, ಈ ಬಗ್ಗೆ ಪಾಕಿಸ್ತಾನ ತನ್ನ ಮುಂದಿನ ನಿರ್ಧಾರ ಮಾಡಲು ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.