• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪಾದಯಾತ್ರೆಯಿಂದ ನೀರು ಹಂಚಲ್ಲ, ರಾಜ್ಯಕ್ಕೆ ಕೋವಿಡ್‌ ಹಂಚ್ತಾರೆ : ಸಚಿವ ಈಶ್ವರಪ್ಪ

ಸಾಗರ by ಸಾಗರ
January 10, 2022
in ಕರ್ನಾಟಕ, ರಾಜಕೀಯ, ವಿಡಿಯೋ
0
Share on WhatsAppShare on FacebookShare on Telegram

ಕಾಂಗ್ರೆಸ್ ನವರ ಈ ಪಾದಯಾತ್ರೆಯಿಂದ ಜನರಿಗೆ ಒಳ್ಳೆಯದಾಗುವುದಿಲ್ಲ. ನೀರು ಸಿಗಲ್ಲ ಆದರೆ ಕೋವಿಡ್ ಸಿಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ADVERTISEMENT

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ತಾನು ಚಾಂಪಿಯನ್ ಆಗಬೇಕು, ಸಿಎಂ ಅಗಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಕೋವಿಡ್ ಹಚ್ಚುವ ಅಧಿಕಾರವನ್ನು ಸೋನಿಯಾ ಗಾಂಧಿ ಕೊಟ್ರಾ? ನೀವು ಸಿಎಂ ಆಗುವ ಭ್ರಮೆಯಲ್ಲಿ ರಾಜ್ಯದ ಜನರಿಗೆ ಕೋವಿಡ್ ಹರಡುವ ಪ್ರಯತ್ನ ಒಳ್ಳೆಯದಲ್ಲ. ಮೊದಲನೆಯದಾಗಿ ನೀವು ಸಿಎಂ ಆಗುವುದೇ ಕನಸು ಎಂದು ವ್ಯಂಗ್ಯವಾಡಿದರು.

ಯಾವುದೇ ಪಕ್ಷದವರಿರಬಹುದು ಆರೋಗ್ಯ ಮುಖ್ಯ. ನನಗೆ ತುಂಬಾ ಸಂತೋಷ ಅನಿಸಿದ್ದು ನಟ ಶಿವರಾಜ್‌ ಕುಮಾರ್‌ ಪಾದಯಾತ್ರೆಗೆ ಭಾಗವಹಿಸಲಿಲ್ಲ. ಅವರು ಮೇಕೆದಾಟು ಹೆಸರಲ್ಲಿ ಮಾಡುತ್ತಿರುವ ರಾಜಕಾರಣದಲ್ಲಿ ಜನ ಜಾತ್ರೆಯಾಗುತ್ತಿದೆ. ಏಳು – ಎಂಟು ಸಾವಿರ ಜನರು ಒಟ್ಟಿಗೆ ಮೆರವಣಿಗೆ ಹೋಗುತ್ತಿದ್ದಾರೆ. ಯಾಕಂದ್ರೆ ನಾಳೆ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ಬರ್ತಾ ಇದೆ. ಮುಂದೆ ವಿಧಾನ ಸಭಾ ಚುನಾವಣೆ ಬರುತ್ತೆ. ಇಂತಹ ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್‌ ಎದುರು ಶೋ ತೋರಿಸಿದರೆ ರಾಜಕೀಯದಲ್ಲಿ ಲಾಭವಾಗಬಹುದು ಎಂಬುದು ಅವರ ಲೆಕ್ಕಾಚಾರ. ಅಲ್ಲಿಗೆ ಹೋದವರು ಇಡೀ ರಾಜ್ಯಕ್ಕೆ ಕೋವಿಡ್‌ ಹಚ್ಚುತ್ತಾರೆ. ಮೊದಲು ಕೋವಿಡ್‌ ನಿಯಮಗಳನ್ನ ಪಾಲಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಒಂದು ಲಕ್ಷ ಮಾಸ್ಕ್‌ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪಾದಯಾತ್ರೆಯಲ್ಲಿ ಸ್ವತಃ ಮಾಸ್ಕ್‌ ಹಾಕಿಕೊಂಡಿಲ್ಲ. ಯಾವ ರೀತಿಯ ನಿಯಮ ಪಾಲನೆ..? ಸಾಮಾಜಿಕ ಅಂತರವೂ ಇಲ್ಲ.! ಜೊತೆಗೆ ಏನು ಮಾಡ್ಕೋತ್ತಿರಾ ಎಂದು ಬೆದರಿಕೆ ಹಾಕ್ತಾರೆ. ಅಲ್ಲಿ ಏಳೆಂಟು ಸಾವಿರ ಜನರು ಸೇರಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲಿದ್ದವರೆಲ್ಲಾ ಒಂದೇ ಊರಿನವರಲ್ಲ. ಬೇರೆ ಬೇರೆ ಕಡೆಯಿಂದ ಬಂದವರು. ಉಚಿತ ಪೆಟ್ರೋಲ್‌ ಬೇರೆ ವಿತರಣೆ ಮಾಡಿದ್ದಾರೆ. ಅದು ಅವರ ಆಂತರಿಕ ವಿಚಾರ ಆದರೆ ಕೋವಿಡ್‌ ಹರಡಲು ಪೂರಕ ಕೆಲಸ ಮಾಡುತ್ತಿದ್ದಾರೆ.

ಕೋವಿಡ್‌ ಹಂಚಲು ಯಾರು ಅಧಿಕಾರ ಕೊಟ್ಟವರು? ಸೋನಿಯಾ ಗಾಂಧಿ ಕೊಟ್ಟರಾ..? ನಿಮ್ಮ ಪಾದಯಾತ್ರೆಯಿಂದ ನೀರು ಸಿಗಲ್ಲ, ಕೋವಿಡ್‌ ಬರುತ್ತೆ. ರಾಜ್ಯದ ಕಾಂಗ್ರೆಸ್‌ ಕಾರ್ಯಕರ್ತರನ್ನ ಬೆಂಗಳೂರಿಗೆ ಕರೆಸಿಕೊಂಡು ಕೋವಿಡ್‌ ಹಂಚುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಜ್ವರದಿಂದ ಬಳಲುತ್ತಿದ್ದಾರೆ. ಅವರು ಪುನಃ ಹೋದರೋ ಬಿಟ್ಟರೋ ನನಗೆ ಗೊತ್ತಿಲ್ಲ. ಡಿಕೆ ಶಿವಕುಮಾರ್‍ ಮಾತ್ರ ತಾವು ಚಾಂಪಿಯನ್‌ ಆಗಬೇಕು, ಮುಂದಿನ ಸಿಎಂ ಆಗಬೇಕು ಎಂಬ ಹಗಲುಗನಸಿನಲ್ಲಿ ಜನರಿಗೆ ಸೋಂಕು ತರುತ್ತಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡ್ತಾರೆ ಎಂದು ಈಶ್ವರಪ್ಪ ಹೇಳಿದರು.

ಕೋವಿಡ್‌ ಪರೀಕ್ಷೆ ಮಾಡಲೆಂದು ಬಂದ ಅಧಿಕಾರಿಗಳನ್ನ ಗದರಿಸಿದ್ದ ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ ಡಿಕೆ ಶಿವಕುಮಾರ್‌ ಗೂಂಡಾಗಿರಿ ಮಾಡ್ತಾರೆ ಎಂದು ಕೇಳಿದ್ದೆ ಈಗ ಕಣ್ಣಾರೆ ನೋಡುತ್ತಿದ್ದೇನೆ. ಆರೋಗ್ಯ ಇಲಾಖೆ ಅಧಿಕಾರಿಗಳು ನಿಮ್ಮ ಆರೋಗ್ಯ ತಪಾಸಣೆ ಮಾಡಲು ಬಂದರೆ ಗದರಿಸಿದ್ದೀರಿ ಹಾಗಾಗಿ ಅವರು ಡಿಕೆ ಶಿವಕುಮಾರ್‍ ಅಲ್ಲ ಕೆಡಿ ಶಿವಕುಮಾರ್‌ ಎಂದು ಈಶ್ವರಪ್ಪ ಹೇಳಿದರು.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಬಿಜೆಪಿಸಚಿವ ಈಶ್ವರಪ್ಪಸಿದ್ದರಾಮಯ್ಯ
Previous Post

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೋವಿಡ್ ಪಾಸಿಟಿವ್

Next Post

ಪ್ರಿಯಾಂಕ ಗಾಂಧಿ ಸತತ ಪರಿಶ್ರಮದ  ಫಲವಾಗಿ ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಕಮಲನಾಥ್ ಭವಿಷ್ಯ

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
ಪ್ರಿಯಾಂಕ ಗಾಂಧಿ ಸತತ ಪರಿಶ್ರಮದ  ಫಲವಾಗಿ ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಕಮಲನಾಥ್ ಭವಿಷ್ಯ

ಪ್ರಿಯಾಂಕ ಗಾಂಧಿ ಸತತ ಪರಿಶ್ರಮದ  ಫಲವಾಗಿ ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಕಮಲನಾಥ್ ಭವಿಷ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada