ಮೈಸೂರು (Mysuru): ಸರ್ಕಾರದ ಬೊಕ್ಕಸ ಖಾಲಿ ಆಗಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನ ಸರ್ಕಾರ ಕೊಡುತ್ತಿಲ್ಲ.
ಸರ್ಕಾರ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿಗೆ ಬಂದಿದೆ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ. ಶ್ರೀಮಂತ ದೇವಾಲಯಕ್ಕೆ ಸರ್ಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದೆ:
ನಾಡಗೀತೆ ವಿಚಾರವಾಗಿ ಮಾತನಾಡಿದ ಅವರು ಸರಕಾರದ ಅಜೆಂಡಾ ಏನೂ ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತೆ.
ಸರಕಾರ ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು – ನುಡಿಗೆ ಸಿಎಂ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದೆ ಎಂದು ಕೊಂಡರೆ ಅದು ಭ್ರಮೆ. ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ರಾಜ್ಯದಲ್ಲಿ ಬರದ ಸ್ಥಿತಿ ಇಲ್ಲ ಎಂಬ ಭ್ರಮೆಯಲ್ಲಿ ಸಿಎಂ ಇದ್ದಾರೆ ಎಂದರು.
ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್
ಆತಂಕದಲ್ಲಿದೆ. ಆತಂಕದಲ್ಲೇ ದೆಹಲಿ ಚಲೋ ನಾಟಕ ಮಾಡಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡ್ತಿದೆ ಎಂದು ಹೇಳಿದರು.
ಕುಮಾರಸ್ವಾಮಿ (HDKumarswamy) ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಕೆಲವರನ್ನು ಕಾಂಗ್ರೆಸ್ ಗೆ ಸೆಳೆಯುವ ವಿಚಾರವೂ ನನಗೆ ಗೊತ್ತಿಲ್ಲ. ಊಹಾಪೋಹಕ್ಕೆ ಉತ್ತರ ಕೊಡಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.
#karnataka #mysuru #byvijayendra #bjp #congress #stategovernment #congressgovernment