ಇತ್ತೀಚೆಗೆ ನಡೆದ ಹಾನಗಲ್ ಉಪಸಮರದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ಗೆ ಈ ಗೆಲುವು ಮುಂಬರುವ ಚುನಾವಣೆ ದೃಷ್ಟಿಯಿಂದ ಟಾನಿಕ್ ಕೊಟ್ಟಂತಾಗಿದೆ. ಕಳೆದುಕೊಳ್ಳುವಂತದ್ದು ಏನೂ ಇಲ್ಲದ ಕ್ಷೇತ್ರದಲ್ಲಿ ಅದೂ ತವರು ಜಿಲ್ಲೆಯಲ್ಲೇ ಸಿಎಂ ಪ್ರತಿಷ್ಠೆಯನ್ನ ಕೈ ಪಡೆ ಮುರಿದುಬಿಟ್ಟಿದೆ. ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ಉತ್ಸಾಹದಲ್ಲಿದೆ.
2 ಉಪಕದನದಲ್ಲೂ ಕಾಂಗ್ರೆಸ್ಗೆ ಕಳೆದುಕೊಳ್ಳುವಂತದ್ದು ಏನೂ ಇರಲಿಲ್ಲ. ಆ ನಡುವೆಯೂ ಸಿಎಂ ತವರಲ್ಲಿ ಗೆದ್ದು ಬೀಗಿರೋ ಕೈ ಪಡೆ, ಸಿಎಂ ಪ್ರತಿಷ್ಠೆ ಮುರಿದು, ದಳಕ್ಕೆ ಪೆಟ್ಟು ಕೊಟ್ಟುಬಿಟ್ಟಿದೆ. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದು ಹೊಸ ಟಾನಿಕ್ ಪಡೆದು ಉತ್ಸಾಹದಲ್ಲಿದೆ.
ಸಾಕಷ್ಟೂ ಕುತೂಹಲ ಕೆರಳಿಸಿದ್ದ ಬೈ ಎಲೆಕ್ಷನ್ನಲ್ಲಿ ಸಮರದಲ್ಲಿ ಮತದಾರ ರಾಷ್ಟ್ರೀಯ ಪಕ್ಷಗಳಿಗೆ ಸಿಹಿ ಕಹಿ ಎರಡನ್ನೂ ಉಣಿಸಿದ್ದಾನೆ. ಕೈಗೊಂದು ಕಮಲಕ್ಕೊಂದು ಕ್ಷೇತ್ರ ದಕ್ಕಿದೆ. ಆದ್ರೆ ಸಿಎಂ ತವರು ಜಿಲ್ಲೆಯ ಕ್ಷೇತ್ರದಲ್ಲಿ, ಅದೂ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರೋದು ಕೈ ಪಡೆಗೆ ಹೊಸ ಟಾನಿಕ್ ಸಿಕ್ಕಂತಾಗಿದೆ.
ಜಿದ್ದಾಜಿದ್ದಿನ ಕಣವಾಗಿದ್ದ ಹಾನಗಲ್ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಹೊಸ ಬಲ ನೀಡಿದೆ. ಅದೂ ಕೂಡ ಸಿಎಂ ತವರು ಜಿಲ್ಲೆಯಲ್ಲಿ ಗೆಲ್ತಿದ್ದಂತೆ ಕಾಂಗ್ರೆಸ್ಗೆ ಉತ್ಸಾಹ ನೂರ್ಮಡಿಕೊಂಡಿದೆ. ಈ ಗೆಲುವಿನೊಂದಿಗೆ ಕೈ ಪಡೆ ಹೊಸ ಸಂದೇಶ ರವಾನಿಸಿದೆ. ಈ ಗೆಲುವೇ ಕಾಂಗ್ರೆಸ್ ಟಾನಿಕ್ ಆಗಿದೆ.
ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಗೆಲುವು ಸಿಕ್ಕಿದೆ. ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದ ಬಸವರಾಜ್ ಬೊಮ್ಮಾಯಿಗೆ ಈ ಮೂಲಕ ಕೈ ಠಕ್ಕರ್ ಕೊಟ್ಟಿದೆ.
ಬೊಮ್ಮಾಯಿ ಕ್ಷೇತ್ರ ಶಿಗ್ಗಾಂವಿಗೆ ಹಾನಗಲ್ ಹೊಂದಿಕೊಂಡಂತಿದೆ. ಇನ್ನು ತವರು ಕ್ಷೇತ್ರದಂತೆ ಹಾನಗಲ್ನಲ್ಲಿ ಬೊಮ್ಮಾಯಿ ಪ್ರಚಾರ ಮಾಡಿದ್ದರು. ಹಾನಗಲ್ನ ಅಕ್ಕಿ ಆಲೂರಿನ ಅಳಿಯ ಎಂದಿದ್ದ ಸಿಎಂ ಬೊಮ್ಮಾಯಿ ಪ್ರತಿಷ್ಠೆಗೆ ಭಂಗ ತಂದಿರುವುದು ಕಾಂಗ್ರೆಸ್ಗೆ ಮಹಾ ಬಲ ನೀಡಿದೆ.
ಇನ್ನು ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಕಾಂಗ್ರೆಸ್ ಮತ ಒಡೆಯಲು ದಳಪತಿಗಳು ಪ್ಲಾನ್ ಮಾಡಿದ್ದರು. ಆ ಮೂಲಕ ‘ಕೈ’ಗೆ ಪೆಟ್ಟು ಕೊಟ್ಟು ಬಿಜೆಪಿ ಗೆಲ್ಲಿಸುವ ಉದ್ದೇಶ ಹೊಂದಿದ್ದ ಜೆಡಿಎಸ್ಗೆ ಕಾಂಗ್ರೆಸ್ ಹಾನಗಲ್ ಗೆದ್ದು ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಿದೆ.
ಬಹಳ ಮುಖ್ಯವಾಗಿ 2023ರ ಚುನಾವಣೆಗೆ ಸೆಮಿಫೈನಲ್ನಂತೆ ಇದ್ದ ಈ ಬೈಎಲೆಕ್ಷನ್ ಸಮರದಲ್ಲಿ 1 ಕ್ಷೇತ್ರವನ್ನ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಫೈನಲ್ಗೆ ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲು ಟಾನಿಕ್ ನೀಡಿದಂತಾಗಿದೆ.
ತೈಲ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ವೈಫಲ್ಯದ ಬಗ್ಗೆ ಸರ್ಕಾರದ ವಿರುದ್ಧ ನಡೆಸಿದ್ದ ಹೋರಾಟ ಮುಂದಿಟ್ಟು ಪ್ರಚಾರ ಮಾಡಿದ ಕೈ ನಾಯಕರಿಗೆ ಬಿಜೆಪಿ ಅಧಿಕಾರದಲ್ಲಿದ್ರೂ ಗೆಲುವು ಸಿಕ್ಕಿದೆ. ಈ ಗೆಲುವು ಆಡಳಿತ ವಿರೋಧಿ ಅಲೆಗೆ ಸಾಕ್ಷಿ ಎಂಬ ಸಂದೇಶ ಕೂಡ ಕೊಟ್ಟಂತಾಗಿದೆ.
ಹೀಗೆ ಕಾಂಗ್ರೆಸ್ ಹಾನಗಲ್ ಗೆದ್ದು ಮುಂಬರುವ ವಿಧಾನಪರಿಷತ್ ಹಾಗೂ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಉತ್ಸಾಹದ ಟಾನಿಕ್ ಪಡೆದುಕೊಂಡಿದೆ. ಅಲ್ಲದೆ ಬಹುಮುಖ್ಯವಾಗಿ ಸಿಎಂ ಪ್ರತಿಷ್ಠೆ ಮುರಿದು, ದಳಪತಿಗಳಿಗೆ ಠಕ್ಕರ್ ಕೊಟ್ಟ ಖುಷಿ ಕೈ ಪಾಳಯದಲ್ಲಿ ಮನೆಮಾಡಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಇತ್ತೀಚೆಗೆ ನಡೆದ ರಾಜ್ಯ ಉಪಚುನಾವಣೆ ದಿಕ್ಸೂಚಿ ಎನ್ನಲಾಗುತ್ತಿದೆ.