ಮೈಸೂರಿನ (Mysuru) ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ವಿರುದ್ಧ ದೂರು ದಾಖಲಾಗಿದೆ.

ಈ ಬಗ್ಗೆ ಯುವ ಕಾಂಗ್ರೆಸ್ ಮುಖಂಡರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಜೊತೆ ಮಾಜಿ ಸಂಸದ ಪ್ರತಾಪ್ ಸಿಂಹ ರನ್ನು ತನಿಖೆ ಮಾಡುವಂತೆ ದೂರು ನೀಡಲಾಗಿದೆ.

ಈ ಪ್ರಕರಣದ ಪ್ರಮುಖ ರೂವಾರಿಯೇ ಪ್ರತಾಪ್ ಸಿಂಹ.ಆರೋಪಿ ಸುರೇಶ್, ಪ್ರತಾಪ್ ಸಿಂಹನ ಭಂಟನಾಗಿದ್ದಾನೆ. ಮೈಸೂರಿನ ಶಾಂತಿ ನೆಮ್ಮದಿ ಕೆಡಿಸುವುದರಲ್ಲಿ ಪ್ರತಾಪ್ ಸಿಂಹ ಕೈವಾಡವಿದೆ.
ಹೀಗಾಗಿ ಈ ಇಬ್ಬರನ್ನು ತನಿಖೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಂಶ ಹೊರ ಬರುತ್ತದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಶಿವಣ್ಣ ಹೇಳಿದ್ದಾರೆ.





