ಲಿಂಗಾಯತರಿಂದಲೇ ಭ್ರಷ್ಟಾಚಾರ ನಡೀತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ. ಈ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಯನ್ನ ಖಂಡಿಸಿ, ವೀರಶೈವ ಲಿಂಗಾಯತ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಯಾವುದೇ ಸಮುದಾಯ ಹಾಗೂ ಧರ್ಮದ ಬಗ್ಗೆ ಟೀಕೆ ಮಾಡಬಾರದೆಂಬ ನಿಯಮವನ್ನ ಚುನಾವಣಾ ಆಯೋಗ ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿನ್ನೆ ಮೈಸೂರಿನಲ್ಲಿ ʻಲಿಂಗಾಯತ ಮುಖ್ಯಮಂತ್ರಿಗಳು ಭಷ್ಟರಾಗಿದ್ದು, ಅವರು ರಾಜ್ಯವನ್ನ ಹಾಳು ಮಾಡ್ತಿದ್ದಾರೆʼ ಅನ್ನೋ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನಿಜಕ್ಕೂ ಖಂಡನೀಯ.. ಅವರ ಈ ಹೇಳಿಕೆ ಲಿಂಗಾಯತ ಸಮುದಾಯವರು ಭ್ರಷ್ಟರು ಎನ್ನುವಂತಿದೆ. ಸಿದ್ದರಾಮ್ಯನವರಿಗೆ ಪ್ರಚಾರ ಮಾಡುವ ಹಕ್ಕಿದೆ. ಆದರೆ ನಮ್ಮ ಸಮುದಾಯವನ್ನು ಟೀಕಿಸುವ ಹಕ್ಕು ಅವರಿಗಿಲ್ಲ ಅಂತ ದೂರಿನ ಪ್ರತಿಯಲ್ಲಿ ಉಲ್ಲೇಖವಾಗಿದೆ. ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಸಿದ್ದರಾಮಯ್ಯನವರು ನಮ್ಮ ಸಮುದಾಯವರ ಬಳಿ ಕ್ಷಮೆ ಕೇಳಬೇಕು ಅಂತ ಚುನಾವಣಾ ಆಯೋಗಕ್ಕೆ ಲಿಂಗಾಯತ ಮುಖಂಡ ಬಸವರಾಜ್ ಹಳ್ಳದ್ ದೂರು ಸಲ್ಲಿಸಿದ್ದಾರೆ.
ನಾಳಿನ ರಿಸಲ್ಟ್ ಮೂರು ಕ್ಷೇತ್ರದಲ್ಲಿ ಗೆಲುವು ಸೋಲು ಯಾರಿಗೆ.
https://youtu.be/RnzktBndGJk
Read moreDetails