• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಅಬ್ಬರದ ಪ್ರಚಾರ : ಹೀಗಿತ್ತು ಮೊದಲ ದಿನದ ಕಂಪ್ಲೀಟ್​ ಡಿಟೈಲ್ಸ್​

ಪ್ರತಿಧ್ವನಿ by ಪ್ರತಿಧ್ವನಿ
April 23, 2023
in ರಾಜಕೀಯ
0
ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಅಬ್ಬರದ ಪ್ರಚಾರ : ಹೀಗಿತ್ತು ಮೊದಲ ದಿನದ ಕಂಪ್ಲೀಟ್​ ಡಿಟೈಲ್ಸ್​
Share on WhatsAppShare on FacebookShare on Telegram

ಮೈಸೂರು : ಹೈವೋಲ್ಟೇಜ್ ಕ್ಷೇತ್ರ ವರುಣದಲ್ಲಿ ಸಿದ್ದರಾಮಯ್ಯ ಚಕ್ರವ್ಯೂಹ ಬೇಧಿಸಲು ಸೋಮಣ್ಣ ರಣತಂತ್ರ ರೂಪಿಸಿದ್ದಾರೆ. ವರುಣ ಕ್ಷೇತ್ರದಲ್ಲಿ ಗೆಲುವು ಸುಲಭ ಎನ್ನುತ್ತಿದ್ದ ಸಿದ್ದರಾಮಯ್ಯರ ನಿದ್ದೆಯನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೆಡಿಸಿದ್ದಾರೆ. ಮಿಂಚಿನ ಸಂಚಾರ ಮೂಲಕ ವರುಣ ‌ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಸೋಮಣ್ಣ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ತವರು ಕ್ಷೇತ್ರದಲ್ಲಿಯೇ ಅವರನ್ನ ಮಣಿಸಲು ವಿಪಕ್ಷಗಳು ಪ್ಲ್ಯಾನ್ ನಡೆಸಿವೆ. ಸೋಮಣ್ಣ ಹಾಗೂ ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ADVERTISEMENT

ಕ್ಯಾಂಪೇನ್ ವೇಳೆ ಹೈಡ್ರಾಮಾ..!
ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡ್ತಿದ್ದಾರೆ . ಭಾನುವಾರ ಪ್ರಚಾರಕ್ಕೆ ತೆರಳಿದ್ದ ಸಚಿವ ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿದ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಇಲ್ಲಿಗೆ ಯಾಕೆ ಪ್ರಚಾರಕ್ಕೆ ಬಂದಿರಿ..? ನಮ್ಮ ವೋಟ್ ಸಿದ್ದರಾಮಯ್ಯ ಅವರಿಗೆ ಎಂದು ಘೇರಾವ್ ಹಾಕುವ ಯತ್ನ ಮಾಡಿದ್ದಾರೆ. ಈ ಘಟನೆ ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದಲ್ಲಿ ನಡೆದಿದೆ. ಎಲ್ಲಾ ಗೊಂದಲದ ಮಧ್ಯೆ ಅರ್ಧಗಂಟೆಗೂ ಹೆಚ್ಚು ಕಾಲ ಪ್ರಚಾರ ನಡೆಸಿ ಸೋಮಣ್ಣ ಸ್ಥಳದಿಂದ ಹೊರಟರು.

ಅಷ್ಟಕ್ಕೂ ಆಗಿದ್ದೇನು..?
ಭುಗತಗಳ್ಳಿ ಗ್ರಾಮದಲ್ಲಿ ವಿ.ಸೋಮಣ್ಣ ಪ್ರಚಾರವನ್ನು ತಡೆಯಲು ಯುವಕರು ಯತ್ನಿಸಿದ್ದಾರೆ. ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಚ್ಪಾರ್ಚನೆ ಮಾಡಿ ಸೋಮಣ್ಣ ಭಾಷಣ ಮಾಡುವ ಮಧ್ಯೆ ಯುವಕನೋರ್ವ ಪ್ರಶ್ನೆ ಮಾಡಲು ಮುಂದಾಗಿದ್ದ. ಈ ವೇಳೆ ಭಾಷಣ ಮುಗಿಯುವ ತನಕ ಕಾಯುವಂತೆ ಸೋಮಣ್ಣ ಮನವಿ ಮಾಡಿದ್ರು. ಇನ್ನ ಭಾಷಣ ಮುಗಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಯುವಕರು ಸೋಮಣ್ಣಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು. ಮತ್ತೊಂದು ಯುವಕರ ಗುಂಪು ಸೋಮಣ್ಣ ಮತ್ತು ಬಿಜೆಪಿ ಪರ ಘೋಷಣೆ ಕೂಗಿದ್ರು. ಇದ್ರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದರು.

ಉತ್ತಮ ರೆಸ್ಪಾನ್ಸ್ ಎಂದ ಸೋಮಣ್ಣ..
ವರುಣ ಕ್ಷೇತ್ರದಲ್ಲಿ ಆರಂಭದಲ್ಲಿದ್ದ ಉತ್ಸಾಹ ಇದೀಗ ಇಮ್ಮಡಿಯಾಗಿದೆ. ಈ ಬಾರಿ ವರುಣ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ನಾವು ಹೋದೆಡೆಯೆಲ್ಲಾ ಜನ ಬದಲಾವಣೆ ಬಯಸಿರುವುದು ಗೊತ್ತಾಗ್ತಿದೆ. ವರುಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ರು. ಅಲ್ದೇ ಲಿಂಗಾಯತರು ಭ್ರಷ್ಟರು ಎಂದು ಹೇಳಿಕೆ ಕೊಟ್ಟಿರೋ ಸಿದ್ದರಾಮಯ್ಯ ಆತುರದಲ್ಲಿ ಹೇಳಿಕೆಕೊಟ್ಟು ನಂತರ ನುಣುಚಿಕೊಳ್ತಾರೆ . ಈ ವಿಚಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ.ಆವೇಶದಲ್ಲಿ ಮಾತ್ನಾಡಿ ಕ್ಷಣಾರ್ಧದಲ್ಲಿ ಆ ರೀತಿ ಹೇಳಿಲ್ಲ ಎಂದಿದ್ದಾರೆ
ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ .ಇದೆಲ್ಲದ್ದಕ್ಕೆ ಮೇ.10ರಂದು ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು. ವರುಣಕ್ಕೆ ಸೋಮಣ್ಣ ಕೊಡುಗೆ ಏನು ಎಂಬ ಸಿದ್ದು ಹೇಳಿಕೆಗೂ ಸೋಮಣ್ಣ ಪ್ರತಿಕ್ರಿಯೆ ನೀಡಿದ್ರು .ಸಿದ್ದರಾಮಯ್ಯ ಕೊಪ್ಪಳಕ್ಕೆ ಹೋಗಿ ಚುನಾವಣೆಗೆ ನಿಂತಿದ್ದರು.ಕಳೆದ ಬಾರಿ ಚಾಮುಂಡೇಶ್ವರಿ ಜೊತೆ ಬಾದಾಮಿಯಲ್ಲೂ ಸ್ಪರ್ಧಿಸಿದ್ರು.ನನ್ನನ್ನ ಹೊರಗಿನವನು ಎನ್ನುತ್ತಿರುವ ಅವರು ವಿವೇಚನೆಯಿಂದ ಮಾತ್ನಾಡಲಿ ಎಂದು ತಿಳಿಸಿದ್ರು.

Tags: BJPJDSMysoresiddaramaiahV. SomannaVarunaಕಾಂಗ್ರೆಸ್​ಜೆಡಿಎಸ್​ಬಿಜೆಪಿಮೈಸೂರುವರುಣವಿ.ಸೋಮಣ್ಣಸಿದ್ದರಾಮಯ್ಯ
Previous Post

ಅನಾರೋಗ್ಯದ ನಡುವೆಯೂ ಹೆಚ್​ಡಿಕೆ ಫುಲ್ ಆ್ಯಕ್ಟಿವ್​ : ಆಸ್ಪತ್ರೆ ಬೆಡ್​ ಮೇಲೆಯೇ ಕುಳಿತು ಚುನಾವಣಾ ರಣತಂತ್ರ

Next Post

ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ವೀರಶೈವ ಲಿಂಗಾಯತ ಮುಖಂಡರಿಂದ ದೂರು‌

Related Posts

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?
ರಾಜಕೀಯ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

by ಪ್ರತಿಧ್ವನಿ
May 28, 2026
0

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಎರಡು ವರ್ಷಗಳ...

Read moreDetails
ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

May 28, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
Next Post
ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ವೀರಶೈವ ಲಿಂಗಾಯತ ಮುಖಂಡರಿಂದ ದೂರು‌

ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ವೀರಶೈವ ಲಿಂಗಾಯತ ಮುಖಂಡರಿಂದ ದೂರು‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada