ಭಾರತದ ಪ್ರಿಯಾಂಕಾ ಗೋಸ್ವಾಮಿ ಕಾಮನ್ ವೆಲ್ತ್ ಕ್ರೀಡಾಕೂಟದ ಮಹಿಳೆಯರ 10 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದ 9ನೇ ದಿನವಾದ ಶನಿವಾರ ಪ್ರಿಯಾಂಕಾ ಗೋಸ್ವಾಮಿ 43.38 ನಿಮಿಷಗಳಲ್ಲಿ ಗುರಿ ಮುಟ್ಟಿ ವೈಯಕ್ತಿಕ ಗರಿಷ್ಠ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು.
ಆಸ್ಟ್ರೇಲಿಯಾದ ಜೆಮಿಯಾ ಮಾಂಟಂಗ್ 42.24 ನಿಮಿಷಗಳಲ್ಲಿ ಮೊದಲಿಗರಾಗಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ಕೀನ್ಯಾದ ಎಮಿಲಿ ವಾಮುಸಿ ನಿಗಿ (43.40 ನಿಮಿಷ) ಕಂಚಿನ ಪದಕಕ್ಕೆ ತೃಪ್ತರಾದರು.
ಈ ಮೂಲಕ ಭಾರತ ಅಥ್ಲೆಟಿಕ್ಸ್ ನಲ್ಲಿ 3 ಪದಕ ಗೆದ್ದ ಸಾಧನೆ ಮಾಡಿತು. ಇದಕ್ಕೂ ಮುನ್ನ ತೇಜಸ್ವಿನ್ ಶಂಕರ್ (ಹೈಜಂಪ್ ನಲ್ಲಿ ಕಂಚು, ಮುರಳೀಧರನ್ ಶ್ರೀಶಂಕರ್ (ಲಾಂಗ್ ಜಂಪ್ ನಲ್ಲಿ ಬೆಳ್ಳಿ) ಎರಡು ಪದಕ ತಂದುಕೊಟ್ಟಿದ್ದರು.