ಬೆಂಗಳೂರಿನಲ್ಲಿ ಶನಿವಾರ (ಆಗಸ್ಟ್ 20)ರಂದು ನಡೆಯಬೇಕಿದ್ದ ಸ್ಟಾಂಡ್ ಅಫ್ ಕಾಮಿಡಿಯನ್ ಮುನ್ನಾವರ್ ಫಾರೂಕಿ ಕಾರ್ಯಕ್ರಮ ಡೋಂಗಿ ಟು ನೋ ವೇರ್ ಕಾರ್ಯಕ್ರ,ಮಕ್ಕೆ ಬೆಂಗಳೂರು ಪೊಲೀಸರು ಮತ್ತೊಮ್ಮೆ ಅನುಮತಿ ನಿರಾಕರಿಸಿದ್ದಾರೆ.
ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವನ್ನ ನಗರದಲ್ಲಿ ಆಯೋಜನೆ ಮಾಡಲು ಆಯೋಜಕರು ಯಾವುದೇ ಅನುಮತಿ ಪಡೆಯದ ಕಾರಣ ಕಾರ್ಯಕ್ರಮವನ್ನ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂ ಪರ ಸಂಘಟನೆ ಶ್ರೀ ರಾಮ ಸೇನೆಯು ಕಾರ್ಯಕ್ರಮ ನಡೆಸುವುದಕ್ಕೆ ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸಂಘಟನೆಯ ಸದಸ್ಯರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಮುನ್ನಾವರ್ ಫಾರೂಕಿ ತಮ್ಮ ಕಾರ್ಯಕ್ರಮಗಳಲ್ಲಿ ರಾಮ ಹಾಗೂ ಸೀತೆಯನ್ನು ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಶ್ರೀ ರಾಮ ಸೇನೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.