ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ವೀರಶೈವ ಲಿಂಗಾಯರ ಪ್ರತ್ಯೇಕ ಧರ್ಮದ ಕುರಿತು ಕೂಗು ಕೇಳಿ ಬರುತ್ತಿದ್ದು ಈ ಬಗ್ಗೆ ಕಾಂಗ್ರೆಸ್‌ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ್ ಆಗ್ರಹಿಸಿದ್ದಾರೆ.
ಧರ್ಮ ಒಡೆಯೋಕೆ ಹೋಗಿ ತಪ್ಪು ಮಾಡಿದ್ದೇನೆ ಅಂತಾ ಸಿದ್ದರಾಮಯ್ಯ ಹೇಳಿದರು ಗದಗ ಜಿಲ್ಲೆಯಲ್ಲಿ ಕಾರ್ಯಕ್ರಮದಲ್ಲಿ ಡಿಕೆಶಿ ನಾವು ಮಾಡಿದ್ದು ದೊಡ್ಡ ತಪ್ಪು ಅಂತಾ ಹೇಳಿದರು. ಸಿದ್ದರಾಮಯ್ಯ ಅವರು ಪೂಜ್ಯ ರಂಭಾಪುರಿ ಶ್ರೀಗಳ ಹತ್ತಿರ ಹೋಗಿ ಧರ್ಮ ಒಡೆಯೋಕೆ ಹೋಗಿ ತಪ್ಪು ಮಾಡಿ, ಕೈ ಸುಟಗೊಂಡೆವು ಎನ್ನುವ ಅರ್ಥದೊಳಗೆ ಮಾಧ್ಯಮದಲ್ಲಿ ಹೇಳಿಕೆಗಳು ಬಂದವು.
ಇವತ್ತು ಮತ್ತೆ ನಾನು ಆ ರೀರಿ ಹೇಳಿಲ್ಲ. ಶ್ರೀಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಯು ಟರ್ನ ಹೊಡೆದಿದ್ದಾರೆ ಎಂದು ಲೊಕೊಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಮತ್ತೆ ವಿ ಟರ್ನ್ ಯಾವಾಗ ಬರತ್ತದೊ ನೋಡೋಣ ಇವತ್ತು ಯು ಟರ್ನ ಅಂತಾ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಮತ್ತೆ ವಿ ಟರ್ನ್ ಯಾವಾಗ ಬರತ್ತದೋ ನೋಡೋಣ. ಇನ್ನು ಹೇಳಿ 12ತಾಸ ಆಗಿಲ್ಲ. ಇವತ್ತು ನಾನು ಹೇಳಿಲ್ಲ ಅಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಕಾಂಗ್ರೆಸ್ ಪಕ್ಷದ ನೀತಿ ಏನು ಅನ್ನೋದನ್ನು ಸ್ಪಷ್ಟ ಮಾಡಿರಿ. ಧರ್ಮ ವಿಭಜನೆ ಆಗಬೇಕು ಅಂತೀರೋ ಹಿಂಗೆ ಇರಬೇಕು ಅಂತೀರೋ? ಎನ್ನುವ ಬಗ್ಗೆ ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ಸ್ಪಷ್ಠನೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಧರ್ಮ ಒಡೆಯೋ ಹೇಳಿಕೆ ಕಾಂಗ್ರೆಸ್ ಗೆ ಮುಳುವಾದ ವಿಚಾರ ಪ್ರಾಸ್ತಾಪಿಸಿ 2018ರಲ್ಲಿ ಏನಾಯಿತೋ, ಈಗಲು ಅದೇ ಆಗುತ್ತದೆ. ಅಂತಾ 2023ರಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
ವಯೋವೃದ್ಧ ರಾಜಕಾರಣಿ ಶಾಮನೂರು ಶಿವಶಂಕ್ರಪ್ಪ ಹೆಸರು ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ತಂದರು ಶಾಮನೂರ ಅವರು ಏನು ಹೇಳುತ್ತಾರೋ ನೋಡೋಣ. ಅವರು ಯು ಟರ್ನ ವಿ ಟರ್ನ ಹೊಡೆಯೋದಿಲ್ಲ ಅಂತಾ ಸಿ.ಸಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.