ತೆಂಗಿನ ಎಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಬಳಸುತ್ತಾರೆ. ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕಪ್ಪು ಕೂದಲು ದಟ್ಟವಾದ ಕೂದಲು ಹಾಗೂ ಕೂದಲು ಉದುರುತ್ತಿದ್ದರೆ ಅದು ಕಡಿಮೆ ಆಗುತ್ತದೆ.
ಹಾಗೂ ಕೆಲವರು ಮನೆಯಲ್ಲಿ ಅಡುಗೆಗೆ ತೆಂಗಿನ ಎಣ್ಣೆಯನ್ನು ಬಳಸ್ತಾರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ..ಇದೆಲ್ಲದರ ಜೊತೆಗೆ ತೆಂಗಿನ ಎಣ್ಣೆಯಿಂದ ನಮ್ಮ ತ್ವಜೆಗೆ ಎಷ್ಟು ಬೆನಿಫಿಟ್ಸ್ ಇದೆ ಗೊತ್ತಾ.!
ಮಾಯಿಶ್ಚರೈಸ್
ತೆಂಗಿನ ಎಣ್ಣೆಯನ್ನು ತ್ವಚೆಗೆ ಹಚ್ಚುವುದರಿಂದ ನಮ್ಮ ಸ್ಕಿನ್ ಅನ್ನು ಮಾಯಿಶ್ಚರೈಸ್ ಮಾಡುತ್ತದೆ ಜೊತೆಗೆ ಹೈಡ್ರೇಟ್ ಆಗಿ ಇಡಲು ತುಂಬಾನೇ ಸಹಾಯಕಾರಿ ಮುಖದಲ್ಲಿರುವಂತ ಡ್ರೈನೇಸ್ ಅನ್ನ ಕಡಿಮೆ ಮಾಡಿ ಹೊಳಪಿನ ತ್ವಚೆ ನಮ್ಮದಾಗುತ್ತದೆ.
ಆಂಟಿ ಇನ್ಫ್ಲಮೆಟರಿ
ತೆಂಗಿನ ಎಣ್ಣೆ ಉರಿಯುತ ಗುಣಲಕ್ಷಣಗಳನ್ನ ಶಮನ ಮಾಡುತ್ತದೆ ಹಾಗೂ ತ್ವಜೆಯಲ್ಲುಂಟಾಗುವ ಕಿರಿಕಿರಿಯನ್ನ ದೂರ ಮಾಡುತ್ತದೆ. ಕೆಂಪು ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ಡಾರ್ಕ್ ಸರ್ಕಲ್
ಹೆಚ್ಚು ಜನಕ್ಕೆ ಕಣ್ಣಿನ ಸುತ್ತ ಕಪ್ಪು ಕಲೆ ಇರುತ್ತದೆ ಅದನ್ನ ನಿವಾರಣೆ ಮಾಡೋದಿಕ್ಕೆ ತೆಂಗಿನ ಎಣ್ಣೆ ಬೆಸ್ಟ್ ರಾತ್ರಿ ಮಲಗುವ ಮುಂಚೆ ತಂಗಿನ ಎಣ್ಣೆ ಜೊತೆಗೆ ವಿಟಮಿನ್ ಇ ಕ್ಯಾಪ್ಸುಲನ್ನ ಬೆರೆಸಿ ಕಣ್ಣಿನ ಸುತ್ತ ಹಚ್ಚಿ ಬೆಳಗ್ಗೆದ್ದು ವಾಶ್ ಮಾಡುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಸುಕ್ಕು
ತೆಂಗಿನ ಎಣ್ಣೆಯು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ ಅದು ಚರ್ಮದ ಪುನರುತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ನೋಟವನ್ನು ಕಡಿಮೆ ಮಾಡುತ್ತದೆ.