ನೈಜೀರಿಯಾ ಪ್ರಜೆಯೊಬ್ಬ ತನ್ನ ಹೊಟ್ಟೆಯೊಳಗೆ 2 ಕೆ. ಜಿ. ತೂಕದ ಮಾದಕ ವಸ್ತು ಕೊಕೇನ್ ತುಂಬಿಕೊಂಡು ಬಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದಿದ್ದಾನೆ.
ಇಥಿಯೋಪಿಯಾದ ಅದ್ದೀಸ್ ಅಬಾದಾ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದ ನೈಜೀರಿಯಾ ಪ್ರಜೆಯ ಹೊಟ್ಟೆಯಲ್ಲಿ ಕೊಕೇನ್ ತುಂಬಿದ್ದ 99 ಕ್ಯಾಪ್ಸೂಲ್ಗಳು ಪತ್ತೆಯಾಗಿವೆ. ಇದರ ಮೌಲ್ಯ ಸುಮಾರು 20 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ಕಂದಾಯ ವಿಚಕ್ಷಣಾ ನಿರ್ದೇಶನಾಲಯ (ಡಿಆರ್ಐ) ತಪಾಸಣೆ ನಡೆಸಿತು.
ಆರೋಪಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಕೂಡಲೇ ಆತನನ್ನು ವಶಕ್ಕೆ ಪಡೆದ ಡಿಆರ್ಐ, ಆತನ ಹೊಟ್ಟೆಯಲ್ಲಿ ಕೊಕೇನ್ ಇರೋದನ್ನ ಖಚಿತಪಡಿಸಿಕೊಂಡು. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆಸ್ಪತ್ರೆಯಲ್ಲಿ ಆರೋಪಿಯನ್ನು 5 ದಿನಗಳ ಕಾಲ ಇರಿಸಿಕೊಂಡು ಆತನ ಹೊಟ್ಟೆಯಲ್ಲಿದ್ದ ಮಾದಕ ವಸ್ತುಗಳನ್ನು ಹಂತ ಹಂತವಾಗಿ ಹೊರಗೆ ತೆಗೆಯಲಾಗಿದೆ.

2023ರ ಡಿಸೆಂಬರ್ 11 ರಂದು ಆರೋಪಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಡಿಆರ್ಐ ಈತನನ್ನು ತನ್ನ ವಶಕ್ಕೆ ಪಡೆಯಿತು.