ಕರ್ನಾಟಕ ವಿಧಾನಸಭೆಯಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ.. ಲೋಕಸಭೆ ಚುನಾವಣೆಯಲ್ಲಿ ಕರ್ನಾಟದಲ್ಲಿ ಅತೀ ಹೆಚ್ಚು ಲೋಕಸಭೆ ಸ್ಥಾನ ಗೆಲ್ಲುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚುರುಕಾಗಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಕೂಡ ಲೋಕಸಭೆ ಚುನಾವಣೆಯಲ್ಲಿ ಪೂರ್ತಿ ಜವಾಬ್ದಾರಿಯನ್ನ ಸಿಎಂ ಸಿದ್ದು, ಮತ್ತು ಡಿಸಿಎಂ ಡಿಕೆಶಿಗೆ ನೀಡಿದೆ. ಇನ್ನು ಲೋಕಸಭೆ ಚುನಾವಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರ ಸಂಭ್ಯಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ.
ಲೋಕಸಭೆ ಚುನಾವಣೆಯ ಜವಾಬ್ದಾರಿಯನ್ನ ಇವರಿಗೆ ನೀಡಲಾಗಿದೆ.

ಶಿವಮೊಗ್ಗ – ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ, ಮಂಗಳೂರು – ಮಿಥುನ್ ರೈ ಅಥವಾ ಅಶೋಕ್ ರೈ, ಬೆಳಗಾವಿ – ಸತೀಶ್ ಜಾರಕಿಹೊಳಿ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್, ಹುಬ್ಬಳ್ಳಿ – ಧಾರವಾಡ – ಜಗದೀಶ್ ಶೆಟ್ಟರ್ ಅಥವಾ ವಿನಯ್ ಕುಲಕರ್ಣಿ, ಕೋಲಾರ – ರಾಮಲಿಂಗರೆಡ್ಡಿ ಅಥವಾ ಮಂಜುನಾಥ್, ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್, ಉತ್ತರ ಕನ್ನಡ – ದೇಶಪಾಂಡೆ, ಮೈಸೂರು – ಎಚ್. ಸಿ.ಮಹಾದೇವಪ್ಪ ಅಥವಾ ಯತೀಂದ್ರ, ಮಡಿಕೇರಿ, ಚಿಕ್ಕಮಗಳೂರು – ಉಡುಪಿ – ಬಿಕೆ ಹರಿಪ್ರಸಾದ್, ಕೊಡುಗು – ಪೊನ್ನಣ್ಣ, ಬಳ್ಳಾರಿ – ವಿ.ಎಸ್.ಉಗ್ರಪ್ಪ, ನಾಗೇಂದ್ರ ಹಾಸನ – ಶಿವಲಿಂಗೇಗೌಡರಿಗೆ, ತುಮಕೂರಿನಿಂದ – ಡಾ. ಜಿ.ಪರಮೇಶ್ವರ್, ಚಿತ್ರದುರ್ಗ – ಟಿ.ಬಿ.ಜಯಚಂದ್ರ, ಇಂದಿನಿಂದಲೇ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳಿಲ್ಲ ; ಡಿಸಿಎಂ ಡಿ.ಕೆ.ಶಿವಕುಮಾರ್
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ. ಎಐಸಿಸಿ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಆದಷ್ಟು ಬೇಗ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚಿಸಬೇಕಿದೆ. ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾ ಹೇಳಿದ್ದಾರೆ.