ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ (Pahalgam terror attack) ಬಳಿಕ, ಸಿಂಧೂ ನದಿ (Sindhu river) ನೀರಿನ ಒಪ್ಪಂದವನ್ನು ಮೊಟಕುಗೊಳಿಸಲು ಭಾರತ ಮುಂದಾಗಿದ್ದು, ಇದು ಪಾಕಿಸ್ತಾನಕ್ಕೆ (Pakistan) ಮರ್ಮಾಘಾತ ನೀಡಿದೆ.ಈ ಕುರಿತು ಇದೇ ಮೊದಲ ಬಾರಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Sehabaz sharif) ಪ್ರತಿಕ್ರಿಯಿಸಿದ್ದಾನೆ.

ಈಗಾಗಲೇ ಭಾರತ ಘೋಷಣೆ ಮಾಡಿರುವಂತೆ ಒಂದುವೇಳೆ ಸಿಂಧೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಹರಿಬಿಡದೇ, ತಡೆಯುವ ಪ್ರಯತ್ನ ಮಾಡಿದಲ್ಲಿ, ಆಗ ಪಾಕಿಸ್ತಾನ, ಭಾರತಕ್ಕೆ ಸೇನೆಯ ಮೂಲಕ ತಕ್ಕ ಉತ್ತರ ನೀಡಲಿದ್ದೇವೆ ಎಂದಿದ್ದಾನೆ.

ಸಿಂಧೂ ನದಿ ಪಾಕಿಸ್ತಾನಕ್ಕೆ ಜೀವನಾಡಿ ಇದ್ದಂತೆ. ಹೀಗಾಗಿ ಸಿಂಧೂ ನದಿಯ ನೀರು ಅನ್ನು ಡೈವರ್ಟ್ ಮಾಡಿದರೇ, ಸೇನೆಯನ್ನು ಬಳಸಿ ಭಾರತಕ್ಕೆ ಉತ್ತರ ನೀಡುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ್ದಾನೆ.