ದಾವಣಗೆರೆ : ಹಸುಗಳನ್ನು ಕಡಿಯೋದ್ರಲ್ಲಿ ತಪ್ಪೇನಿದೆ ಅಂತಾ ಕೆಲವು ದಿನಗಳ ಹಿಂದಷ್ಟೇ ಪಶುಸಂಗೋಪನಾ ಸಚಿವ ವೆಂಕಟೇಶ್ ಪ್ರಶ್ನೆ ಮಾಡಿದ್ದರು. ಕೆ.ವೆಂಕಟೇಶ್ ನೀಡಿದ್ದ ಈ ಹೇಳಿಕೆ ರಾಜ್ಯದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಈ ಬೆನ್ನಲ್ಲೇ ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಂತೆ ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮಾತನಾಡಿದ್ದಾರೆ.
12 ವರ್ಷ ಮೇಲ್ಪಟ್ಟ ಹಸುಗಳನ್ನು ಹತ್ಯೆ ಮಾಡಲು ಕಾನೂನಿನಲ್ಲಿಯೇ ಅವಕಾಶವಿದೆ, 1964ರ ಕಾಯ್ದೆಯ ಅಡಿಯಲ್ಲಿ 12 ವರ್ಷ ತುಂಬಿದ ಹಸುಗಳು, ವ್ಯವಸಾಯಕ್ಕೆ ಯೋಗ್ಯವಿಲ್ಲದ ಹಸುಗಳು ಹಾಗೂ ಬರಡು ಹಸುಗಳನ್ನು ಹತ್ಯೆ ಮಾಡಬಹುದು ಎಂದು ವಿವರವಾಗಿ ತಿಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.