ಬೆಂಗಳೂರು : ಜುಲೈ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿರುವ ಗೃಹಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಇಂದು ಮಾನದಂಡ ಬಿಡುಗಡೆ ಮಾಡಿದೆ . ಸರ್ಕಾರದಿಂದ ನೀಡಲಾಗುವ 200 ಯುನಿಟ್ ಉಚಿತ ಕರೆಂಟ್ ಸೌಕರ್ಯವನ್ನು ಪಡೆದುಕೊಳ್ಳಲು ಈ ಕೆಳಗಿನ ಮಾನದಂಡಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಈ ಯೋಜನೆ ಪಡೆಯಲು ಬಯಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
ಗೃಹ ಬಳಕೆಗೆ ಮಾತ್ರ ಗೃಹಜ್ಯೋತಿ ಯೋಜನೆಯ ಮಾನ್ಯವಾಗುತ್ತದೆ .
200 ಯುನಿಟ್ಗಿಂತ ಹೆಚ್ಚಿನ ಯುನಿಟ್ ಖಾಲಿಯಾದರೆ ಹೆಚ್ಚುವರಿ ಬಿಲ್ನ್ನು ಗ್ರಾಹಕ ತುಂಬಬೇಕು.
200ಯುನಿಟ್ ಬಳಕೆ ಮಾಡುವವರಿಗೂ ಮಾಸಿಕ ಬಿಲ್ ಕಡ್ಡಾಯ, ಆದರೆ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ.
ಕಸ್ಟಮರ್ ಐಡಿಯನ್ನು ಆಧಾರ್ ನಂಬರ್ಗೆ ಜೋಡಣೆ ಮಾಡಿರಬೇಕು
ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮರಜ್ಯೋತಿ ಯೋಜನೆಗಳು ಗೃಹಜ್ಯೋತಿ ಯೋಜನೆಯೊಂದಿಗೆ ವಿಲೀನ
ಜೂನ್ ತಿಂಗಳವರೆಗೆ ಬಾಕಿ ಮೊತ್ತವನ್ನು 3 ತಿಂಗಳ ಒಳಗಾಗಿ ಪಾವತಿಸಬೇಕು.
200 ಯೂನಿಟ್ ಪಡೆಯುವ ಫಲಾನುಭವಿಗಳ ಮೀಟರ್ ರೀಡಿಂಗ್ ಕಡ್ಡಾಯ
ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್ ಗೆ ಮಾತ್ರ ಈ ಯೋಜನೆ ಅನ್ವಯ