ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ (Micro finances) ಸಂಸ್ಥೆಗಳ ಹಾವಳಿ ಮಿತಿ ಮೀರಿದ್ದು, ಕಿರುಕುಳ ಹೆಚ್ಚಾಗಿರುವ ಹಿನ್ನೆಲೆ ಈ ರೀತಿಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸಿಎಂ ಸಿದ್ದರಾಮಯ್ಯ (Cm siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಮೈಕ್ರೋ ಫೈನಾನ್ಸ್ ನಿಂದ ಯಾರಿಗೆ ತೊಂದರೆ ಆಗಿದೆಯೋ ಅವರು ದೂರು ಕೊಡಲಿ.ತಕ್ಷಣವೇ ನಿಶ್ಚಿತವಾಗಿಯೂ ಕ್ರಮ ತೆಗೆದುಕೊಳ್ತೇವೆ.ಮೈಕ್ರೋ ಫೈನಾನ್ಸ್ ಅಥವಾ ಯಾರೇ ತೊಂದರೆ ಕೊಟ್ರೂ ಕ್ರಮಕೈಗೊಳ್ತೇವೆ ಎಂದು ಹೇಳಿದ್ದಾರೆ.
ಇನ್ನು ಈಗಾಗಲೇ ಸಹಾಯವಾಣಿ (Helpline) ತೆರೆಯಲು ಕೂಡ ಸೂಚನೆ ನೀಡಿದ್ದೇವೆ. ಒಂದುವೇಳೆ ದೂರು ಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.