• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ನೂತನ ಸಚಿವರಿಗೆ ಟಾರ್ಗೆಟ್​ ಫಿಕ್ಸ್​ ಮಾಡಿದ ಸಿಎಂ ಸಿದ್ದರಾಮಯ್ಯ

Any Mind by Any Mind
May 28, 2023
in ರಾಜಕೀಯ
0
ನೂತನ ಸಚಿವರಿಗೆ ಟಾರ್ಗೆಟ್​ ಫಿಕ್ಸ್​ ಮಾಡಿದ ಸಿಎಂ ಸಿದ್ದರಾಮಯ್ಯ
Share on WhatsAppShare on FacebookShare on Telegram

ಬೆಂಗಳೂರು: ಮೇ28: ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗೆ ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೂ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

ADVERTISEMENT

ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೆ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸೂಚಿಸಿದ್ದಾರೆ.

ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ದೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಎಲ್ಲಾ ಸಚಿವರಿಗೂ ಮನವರಿಕೆ ಮಾಡಿಸಿದ್ದಾರೆ.

ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಿಂದಿನ ಬಾರಿಯ ತಪ್ಪುಗಳು ಈ ಬಾರಿ ಮರುಕಳಿಸಬಾರದು.

ಖಾತೆ ಹಂಚಿಕೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನೀವೆಲ್ಲಾ ಸಕ್ರಿಯರಾಗಿ. ವಿರೋಧಪಕ್ಷದಲ್ಲಿದ್ದಾಗ ನಾವು ನಡೆಸಿದ ಹೋರಾಟದ ಫಲವಾಗಿ ಜನತೆ ಬಿಜೆಪಿಯ ದುರಾಡಳಿತವನ್ನು ತಿರಸ್ಕರಿಸಿ ನಮ್ಮ ಕೈ ಹಿಡಿದಿದ್ದಾರೆ. ಈಗ ನಾವು ಸರ್ಕಾರವನ್ನು, ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಜನಪರ ನಿಷ್ಠೆ ಮತ್ತು ಕೆಲಸಗಳ ಮೂಲಕ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ದಾಖಲಿಸಬೇಕಿದೆ ಎಂದು ಸಚಿವರಿಗೆ ಸೂಚಿಸಿದ್ದಾರೆ.

ಕೇಂದ್ರದ ದುರಾಡಳಿತವನ್ನು ಕರ್ನಾಟಕದ ಮೂಲಕ ಕೊನೆಗೊಳಿಸಲು ಪರಿಸ್ಥಿತಿ ಹದವಾಗಿದೆ. ಇದನ್ನು ನಾವು ಮರೆಯಬಾರದು. ಹೀಗಾಗಿ ಸಚಿವರು ತಮಗೆ ಉಸ್ತುವಾರಿ ವಹಿಸಲಾಗುವ ಜಿಲ್ಲೆಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡಬೇಕು. ಜಿಲ್ಲೆ, ತಾಲ್ಲೂಕು ಮಟ್ಟದಲ್ಲೇ ಸಮಸ್ಯೆಗಳನ್ನು ಬಗೆಹರಿಸಬೇಕು. ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ನಿಗಾ ಇಟ್ಟು ಭ್ರಷ್ಟಾಚಾರಕ್ಕೆ ಬರೆ ಎಳೆಯಬೇಕು ಎಂದು ಮುಖ್ಯಮಂತ್ರಿಗಳು ಎಲ್ಲಾ ಸಚಿವರಿಗೂ ಟಾರ್ಗೆಟ್ ನೀಡಿ ಶುಭ ಹಾರೈಸಿದ್ದಾರೆ.

ಎಲ್ಲಾ ಕುಸ್ತಿಪಟುಗಳನ್ನು ಮತ್ತು ವಯಸ್ಸಾದ ತಾಯಂದಿರನ್ನು ಬಂಧಿಸಿದ ನಂತರ, ಪೊಲೀಸರು ಈಗ ಜಂತರ್ ಮಂತರ್‌ನಲ್ಲಿ ನಮ್ಮ ಮೆರವಣಿಗೆಯನ್ನು ವಿಸರ್ಜಿಸಲು ಪ್ರಾರಂಭಿಸಿದ್ದಾರೆ. ನಮ್ಮ ಸಾಮಾನುಗಳನ್ನು ಎತ್ತಿಕೊಂಡು ಹೋಗಲಾಗುತ್ತಿದೆ. ಇದು ಯಾವ ಗೂಂಡಾಗಿರಿ?

ಹಲವಾರು ಮಹಿಳಾ ಗ್ರಾಪ್ಲರ್​ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ Wrestling ಫೆಡರೇಶನ್​ ಆಫ್​ ಇಂಡಿಯಾದ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಇಂದು ಪ್ರಧಾನಿ ಮೋದಿ ನೂತನ ಸಂಸತ್​ ಭವನವನ್ನು ಉದ್ಘಾಟಿಸಿದ್ದು ಇದೇ ದಿನದಂದು ಕುಸ್ತಿಪಟುಗಳು ಹೊಸ ಸಂಸತ್​ ಭವನದ ಎದುರು ಮಹಿಳಾ ಮಹಾಪಂಚಾಯತ್​​ಗೆ ಕರೆ ಶನಿವಾರ ಸಂಜೆ ಕರೆ ನೀಡಿದ್ದರು.
ಸಂಸತ್​ ಭವನದ ಎದುರು ಮಹಾ ಪಂಚಾಯತ್​ ನಡೆಸದಂತೆ ಸಾಕಷ್ಟು ಒತ್ತಾಯದ ನಡುವೆಯೂ ಶಾಂತಿಯುತವಾಗಿ ಕುಸ್ತಿಪಟಗಳು ಶಾಂತಿಯುತ ಮೆರವಣಿಗೆ ನಡೆಸಿದ್ದಾರೆ.
ಏಷಿಯನ್​ ಗೇಮ್ಸ್​ನ ಚಿನ್ನದ ಪದಕ ವಿಜೇತೆ ವಿನೇಶ್​ ಪೋಗಟ್​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು , ನಾಳೆ ಏನಾಗುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ಇಡೀ ದೇಶ ನಮ್ಮ ಜೊತೆಗೆ ಇದೆ ಎಂಬ ನಂಬಿಕೆ ಇದೆ. ಕಳೆದೊಂದು ತಿಂಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ ಮಹಿಳಾ ಕುಸ್ತಿಪಟುಗಳನ್ನೇ ಅಪರಾಧಿಗಳು ಎಂಬಂತೆ ನೋಡಲಾಗುತ್ತಿದ್ದು ಬ್ರಿಜ್​ ಭೂಷಣ್​ ಸಿಂಗ್​ನನ್ನು ದೇವರಂತೆ ಕಾಣಲಾಗ್ತಿದೆ. ನಾವು ಕುಸ್ತಿಪಟುಗಳು ,ಸೋಲೋದನ್ನು ನಾವು ಕಲಿತಿಲ್ಲ. ಹೋರಾಡುತ್ತೇವೆ ಖಂಡಿತವಾಗಿಯೂ ಈ ಯುದ್ಧದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.
ಇತ್ತ ಒಲಂಪಿಕ್ ಪದಕ ವಿಜೇತ ಬಜರಂಗ್​ ಪುನಿಯಾ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಇಂದು ಮಹಾಪಂಚಾಯತ್​ ಖಂಡಿತವಾಗಿಯೂ ನಡೆಯುತ್ತೆ. ನಾವು ನಮ್ಮ ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದೇವೆ. ಇದು ಹೊಸ ಸಂಸತ್​ ಭವನದ ಉದ್ಘಾಟನೆಯಾಗಿದೆ. ಆದರೆ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ. ಪೊಲೀಸರು ಈಗಾಗಲೇ ಬಂಧಿಸಿರುವ ನಮ್ಮ ಜನರನ್ನು ಬಿಡುಗಡೆ ಮಾಡುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.

Tags: guarantee cardLok Sabha ElectionNew Ministersiddaramaiahಕಾಂಗ್ರೆಸ್​ಗ್ಯಾರಂಟಿ ಕಾರ್ಡ್ನೂತನ ಸಚಿವರುಲೋಕಸಭಾ ಚುನಾವಣೆಸಿದ್ದರಾಮಯ್ಯ
Previous Post

New Minister Dr.MC Sudhakar Temple Run : ನೂತನ ಸಚಿವ ಡಾ.ಎಂ.ಸಿ.ಸುಧಾಕರ್ ಟೆಂಪಲ್ ರನ್..!

Next Post

ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​

Related Posts

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
0

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಈಗಾಗಲೇ ಆರಂಭವಾಗಿದ್ದು, ಸದ್ಯ ಬಿಜೆಪಿ 38, ಜೆಡಿಯು 35, ಆರ್‌ಜೆಡಿ 33, ಕಾಂಗ್ರೆಸ್ 9, ಜನ್ ಸುರಾಜ್ 2...

Read moreDetails
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

November 14, 2025
ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ- ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ- ಸಚಿವ ಪ್ರಿಯಾಂಕ್‌ ಖರ್ಗೆ

November 13, 2025
N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

N Chaluvarayaswamy: ಕೃಷಿ ಸಬಲೀಕರಣಕ್ಕೆ ನೆರವಾಗಿ: ಎನ್.ಚಲುವರಾಯಸ್ವಾಮಿ ಕರೆ

November 13, 2025
ಪೋಕ್ಸೋ ಕೇಸ್‌: ಬಿ.ಎಸ್‌ ಯಡಿಯೂರಪ್ಪಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್‌

ಪೋಕ್ಸೋ ಕೇಸ್‌: ಬಿ.ಎಸ್‌ ಯಡಿಯೂರಪ್ಪಗೆ ಬಿಗ್‌ ಶಾಕ್‌ ನೀಡಿದ ಹೈಕೋರ್ಟ್‌

November 13, 2025
Next Post
ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​

ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​

Please login to join discussion

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ
Top Story

ಇಂದು ಬಿಹಾರ ಚುನಾವಣಾ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ ಢವ

by ಪ್ರತಿಧ್ವನಿ
November 14, 2025
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು
Top Story

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!