ಮೈಸೂರಿನಲ್ಲಿ (mysuru) ಹಸ್ತ ಆಪರೇಷನ್ಗೆ (congress) ಬಿಜೆಪಿ ರಿವರ್ಸ್ ಆಪರೇಷನ್ (Reverse operation) ಮಾಡಿದೆ. ಮೈಸೂರು-ಕೊಡಗು (mysuru-kodagu)ಲೋಕ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಫುಲ್ ಆ್ಯಕ್ಟಿವ್ ಆಗಿದ್ದಾರೆ. ಇಂದು ಕಾಂಗ್ರೆಸ್ಗೆ ಸೇರ್ಪಡೆ ಯಾಗಬೇಕಿದ್ದ ವರುಣಾ ಭಾಗದ ಬಿಜೆಪಿ ಮುಖಂಡ ಸದಾನಂದ್ (BJP Leader sadanand) ರನ್ನ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಬಿವೈ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ಆ ಮೂಲಕ ಮುಖ್ಯಮಂತ್ರಿಗಳ (CHIEF MINISTER) ತವರು ಕ್ಷೇತ್ರದಲ್ಲೇ ಕಾಂಗ್ರೇಸ್ಗೆ ಶಾಕ್ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ ಇದು ಇನ್ನೂ ಆರಂಭ. ಇನ್ನೂ 4 ದಿನಗಳಲ್ಲಿ ಮ್ಯಾಜಿಕ್ ನಡೆಯಲಿದೆ ನೋಡ್ತಾಯಿರಿ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ರು .ನಮ್ಮ ಶಿವಮೊಗ್ಗ ಸೇರಿ ಎಲ್ಲಾ ಬಂಡಾಯವೂ ಕೇಚಲ 4 ದಿನದಲ್ಲಿ ಅಸಮಾಧಾನಗಳು ಬಗೆಹರಿಯುತ್ತೆ, ಬಿಜೆಪಿ ದಿಗ್ವಿಜಯ ಸಾಧಿಸುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದ ಸಿಎಂ ಸಿದ್ದರಾಮಯ್ಯ (cm siddharaniah) ನವರಿಗೆ ಕೂಡ ಇದ್ರಿಂದ ಹಿನ್ನಡೆಯಾಗಿದ್ದು, ಇದೀಗ ಬೇರೆ ತಂತ್ರಗಾರಿಕೆಯನ್ನ ರೂಪಿಸಬೇಕಿದೆ. ಯಾಕಂದ್ರೆ ಶತಯಾ- ಗತಾಯ ಮೈಸೂರು ಮತ್ತು ಚಾ.ನಗರ ಅಭ್ಯರ್ಥಗಳನ್ನ ಗೆಲ್ಲಿಸಬೇಕಾದ ಹೊಣೆ ಸಿಎಂ ಸಿದ್ದು ಹೆಗಲಿಗೆ ಇರೋದ್ರಿಂದ, ಆ ನಿಟ್ಟಿನಲ್ಲಿ ಬಿಎಸ್ವೈ ಆಪ್ತ ಸದಾನಂದ್ರನ್ನ ಪಕ್ಕಷಕ್ಕೆ ಸೆಳೆದ್ರೆ ಮತ ಧ್ರುವೀಕರಣ ಸುಲಭ ಎಂಬ ಸಿದ್ದು ಲೆಕ್ಕಾಚಾರ ಈಗ ತಲೆಕೆಳಗಾಗಿದ್ದು, ಮತ್ತೆ ಕಾಂಗ್ರೇಸ್ ಹೊಸ ತಂತ್ರ ರೂಪಿಸಬೇಕಿದೆ.