ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದಾರೆ . ಮೈಸೂರಲ್ಲಿ ಆಪರೇಷನ್ ಹಸ್ತಕ್ಕೆ ಸಕ್ಸಸ್ ಆಗಿದ್ದು, ಕಮಲಪಡೆಗೆ ಶಾಕ್ ಕೊಟ್ಟಿದ್ದಾರೆ. ಈ ನಡುವೆ ಕಾರ್ಯಕ್ರಮದಲ್ಲಿ ಸಿಎಂ ಸಕತ್ ಟಾಂಗ್ ನೀಡಿದ್ದಾರೆ.
ಮೈಸೂರಿನ ಪ್ರತಾಪ್ ಸಿಂಹ ಅವನು ಪ್ರತಾಪ್ ಸಿಂಹ ಅಲ್ಲ ಪ್ರಲಾಪ ಸಿಂಹ. ನಾವು ಮಾಡಿದ ಕೆಲಸವನ್ನು ತಾನೂ ಮಾಡಿದ್ದು ಅಂತಾ ಓಡಾಡಿದ. ಸಂಸದ ಪ್ರತಾಪ್ ಸಿಂಹ ಮಾಡಿದ ಕೆಲಸ ಯಾವುದಿದೇ ಹೇಳಲಿ…? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತ್ನಾಡಿ, ನಮ್ಮ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯನ್ನ ಮಾತ್ರ ನೋಡುವ ಪಕ್ಷ. ನಮ್ಮ ಯೋಜನೆಗಳು ಎಲ್ಲಾ ಪಕ್ಷಗಳ ಜನರಿಗೂ ತಲುಪಿದೆ. ಆದ್ರೆ, ಪ್ರಧಾನಿ ನರೇಂದ್ರ ಮೋದಿಯವ್ರು ಬಾಯಿಯಲ್ಲಿ ಮಾತ್ರ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅಂತಾರೆ. ಇನ್ನೊಂದು ಕಡೆ ಗಡ್ಡ ಬುಟ್ಟವ್ರು, ಬುರ್ಕಾ ಹಾಕಿದವ್ರು, ಶಿಲುಬೆ ಹಾಕಿದವ್ರು ಬರಬೇಡಿ ಅಂತಾರೆ. ಈ ದೇಶದಲ್ಲಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದ್ರೂ ಬಂದಿದ್ರೆ ಅದು ಶ್ರೀಮಾನ್ ನರೇಂದ್ರ ಮೋದಿ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ಗೆ ಸಿಎಂ ಸವಾಲ್ ಹಾಕಿದ್ರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ಒಂದು ಪೈಸೆ ಕೊಡಬೇಡಮ್ಮ. ನಮ್ಮ ಹಕ್ಕಿನ ಹಣ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ಬನ್ನಿ ಚರ್ಚೆಗೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡಿಬೇಡಿ. ಮೊನ್ನೆ ಮೈಸೂರಿಗೆ ನಿರ್ಮಲಾ ಸೀತಾರಾಮ್ ಬಂದು ಸುಳ್ಳು ಹೇಳಿ ಹೋಗಿದ್ದಾರೆ.
ಮುಂದಿನ ವರ್ಷದ ಗ್ಯಾರಂಟಿಗೂ ನಾವು ಈಗಾಗಲೇ ಹಣ ಇಟ್ಟಿದ್ದೇವೆ. ಗ್ಯಾರಂಟಿ ಯೋಜನೆಗೆ ನಿಮ್ಮ ಹಣ ಬಳಸುತ್ತೇವೆ ಎಂಬುದು ಸುಳ್ಳು. ನಮಗೆ ಬರಗಾಲದ ಒಂದು ರೂಪಾಯಿ ಬಿಡುಗಡೆ ಮಾಡಿದ್ಯಾ ತಾಯಿ..? ನಿರ್ಮಲಾ ಸೀತಾರಾಮ್ ತಾಯಿ ಯಾಕಮ್ಮ ಸುಳ್ಳು ಹೇಳುತ್ತಿದ್ದೀರಿ. ರಾಜ್ಯದ ಏಳು ಕೋಟಿ ಜನರಿಗೆ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ. ಹೀಗಾಗಿ ನಾವು ಕೋರ್ಟ್ಗೆ ಹೋಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು.