ಹಾವೇರಿ : ಮುಖ್ಯಮಂತ್ರಿಡಿ. ಕೆ.ಶಿವಕುಮಾರ್ ನಾಯಕತ್ವವನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಪ್ಪಿಕೊಂಡಿಲ್ಲ. ಅದರ ಪರಿಣಾಮ ಈ ಎಲ್ಲ ಬೆಳವಣಿಗೆಗಳು ಆಗುತ್ತಿವೆ. ಬರುವಂತಹ ದಿನಗಳಲ್ಲಿ ಅವರು ತೆಗೆದುಕೊಳ್ಳುವಂತಹ ನಿರ್ಣಯಗಳ ಮೇಲೆ ಅವರಿಗೆ ಸವಾಲುಗಳು ಎದುರಾಗುತ್ತವೆ. ಅವರನ್ನು ಟ್ರಬಲ್ ಶೂಟರ್ ಅನ್ನುತ್ತಾರೆ. ಅವರಿಗೆ ಟ್ರಬಲ್ ಶೂಟರ್ ಯಾರೂ ಇಲ್ಲ. ಈಗ ಅವರ ನಿರ್ಣಯಗಳೇ ಅಂತಿಮ, ಅವರು ಇನ್ನೂ ವಿಶ್ವಾಸಾರ್ಹತೆ ಗಳಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವಾಟ್ಸ್ ಆಪ್ ಯುನಿವರ್ಸಿಟಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಮ್ಮದು ಸಂಘಟಿತ ಹೋರಾಟ ಇರುತ್ತದೆ ಎಂದು ಗುಡುಗಿದ್ದಾರೆ.
ಜೆಡಿಎಸ್ ಬಿಜೆಪಿ ಮೈತ್ರಿ ಸಮಸ್ಯೆಯಾಗಿದೆ ಅಂತ ನನಗೆ ಆ ರೀತಿ ಅನಿಸಿಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನು ತೀರ್ಮಾನ ಮಾಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ಆಗಿಲ್ಲ. ನಾವು ಪಕ್ಷದ ಸಂಘಟನೆ ಮಾಡಿ ವಿಶೇಷವಾಗಿ ಒಬಿಸಿ, ಎಸ್ಸಿ ಎಸ್ಟಿ ಸಂಘಟಿಸಬೇಕು ಎನ್ನುವ ತೀರ್ಮಾನ ಎಲ್ಲರೂ ಮಾಡಿದ್ದೇವೆ. ನಾಯಕತ್ವ ಬದಲಾವಣೆ ಚರ್ಚೆ ಮೇಲೆಯೂ ಇಲ್ಲ. ಕೆಳಗಡೆಯೂ ಇಲ್ಲ ಎಂದು ಸ್ಪಷ್ಟಪರಿಸಿದ್ದಾರೆ.
ಇದನ್ನೂ ಓದಿ : ID ಇಲ್ಲದಿದ್ರೆ ಬಾರ್-ಕ್ಲಬ್‌ಗೆ ನೋ ಎಂಟ್ರಿ : ಏನಿದು ಸರ್ಕಾರದ ಹೊಸ ರೂಲ್ಸ್..?
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ನಾಯಕತ್ವದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ನಾಯಕತ್ವವನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಪ್ಪಿಕೊಂಡಿಲ್ಲ. ಅದರ ಪರಿಣಾಮ ಈ ಎಲ್ಲ ಬೆಳವಣಿಗಳು ಆಗುತ್ತಿವೆ. ಸಿದ್ದರಾಮಯ್ಯ ಅವರ ನಾಯಕತ್ವವನ್ನು ಹೇಗೆ ಒಪ್ಪಿಕೊಂಡಿದ್ದರೋ ಹಾಗೆ ಇವರನ್ನು ಒಪ್ಪಿಕೊಂಡಿಲ್ಲ. ಬರುವ ದಿನಗಳಲ್ಲಿ ಅವರು ತೆಗೆದುಕೊಳ್ಳುವಂತಹ ನಿರ್ಣಯಗಳ ಮೇಲೆ ಅವರಿಗೆ ಸವಾಲುಗಳು ಎದುರಾಗುತ್ತವೆ. ಅವರನ್ನು ಟಬಲ್ ಶೂಟರ್ ಎನ್ನುತ್ತಾರೆ. ಅವರಿಗೆ ಟ್ರಬಲ್ ಶೂಟರ್ ಯಾರೂ ಇಲ್ಲ. ಈಗ ಅವರ ನಿರ್ಣಯಗಳೇ ಅಂತಿಮ, ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರಾ ಎಂಬ ಪ್ರಶ್ನೆಯೂ ಇದೆ. ಅವರು ಇನ್ನೂ ವಿಶ್ವಾಸಾರ್ಹತೆ ಗಳಿಸಿಕೊಳ್ಳಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಹಾವೇರಿಗೆ ಸಚಿವ ಸ್ಥಾನ..
ಹಾವೇರಿಯಲ್ಲಿ ತಮ್ಮಿಂದ ಕಿರುಕುಳ ಆಗುತ್ತಿದೆ ಎಂಬ ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ಸಚಿವರಾಗುವುದಕ್ಕೂ ನಮಗೂ ಏನೂ ಸಂಬಂಧ ಇಲ್ಲ. ನಾನು ಯಾರಿಗೂ ಕಿರುಕುಳ ನೀಡುವುದಿಲ್ಲ. ನಮ್ಮ ರಾಜಕಾರಣ ಎಲ್ಲರಿಗೂ ಗೊತ್ತಿದೆ. ನನ್ನ ಹೆಸರು ಬಳಸಿಕೊಂಡು ಏನಾದರೂ ಸ್ಥಾನ ಗಿಟ್ಟಿಸುವ ಪಯತ್ನ. ನಡೆಯುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು. ಆಗ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದನೆ ಆಗುತ್ತದೆ. ಕಳೆದ ಬಾರಿ ಜಿಲ್ಲೆ ವಂಚಿತ ಆಗಿದೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಗ್ಯಾಸ್ ಸಿಲೆಂಡರ್ ಸರಬರಾಜಿಗೆ ಬಹಳ ತೊಂದರೆ ಇದೆ. ಗ್ಯಾಸನ್ನು ಮಧ್ಯ ಪಾಚ್ಯ ದೇಶಗಳಿಂದಲೇ ತರಬೇಕು. ಇಡೀ ವಿಶ್ವದಲ್ಲಿ ಗ್ಯಾಸ್ ಬೆಲೆ ನಮ್ಮ ದೇಶದಲ್ಲಿಯೇ ಕಡಿಮೆ ಇದೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಪಯತ್ನ ಮಾಡುತ್ತಿದೆ. ಗೃಹ ಬಳಕೆಯ ಅನಿಲ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಜಾಗತಿಕವಾಗಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿದೆ. ರಸಗೊಬ್ಬರಕ್ಕೂ ಯುದ್ಧವೆ ಕಾರಣವಾಗಿದೆ. ರಸಗೊಬ್ಬರ ಪೆಟ್ರೋಲಿಯಂ ಉಪ ಉತ್ಪನ್ನವಾಗಿದೆ. ವಿಶೇಷವಾಗಿ ಯೂರಿಯಾ ಮತ್ತು ಡಿಎಪಿಗೆ ಬೇಕಾದಂತಹ ಉಪ ಉತ್ಪನ್ನ ಮಧ್ಯಪಾಚ್ಯ ಮತ್ತು ರಷ್ಯಾಗಳಿಂದ ಬರಬೇಕು. ಹೀಗಾಗಿ ಅದು ಕೂಡ ಸಮಸ್ಯೆಯಾಗಿದೆ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.






