• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಂಜಾಬ್‌ ನಲ್ಲಿ ಮತ್ತೆ ಕೈ ಕಲಹ: ಕ್ಯಾಪ್ಟನ್‌ ಭೇಟಿ ಮಾಡಿದ ಸಿಎಂ ಚನ್ನಿ: ಸಿಧು ಟಾರ್ಗೆಟ್

ಕರ್ಣ by ಕರ್ಣ
October 15, 2021
in ದೇಶ, ರಾಜಕೀಯ
0
ಪಂಜಾಬ್‌ ನಲ್ಲಿ ಮತ್ತೆ ಕೈ ಕಲಹ: ಕ್ಯಾಪ್ಟನ್‌ ಭೇಟಿ ಮಾಡಿದ ಸಿಎಂ ಚನ್ನಿ: ಸಿಧು ಟಾರ್ಗೆಟ್
Share on WhatsAppShare on FacebookShare on Telegram

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗಿನ ಮನಸ್ತಾಪದ ಬಳಿಕ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ ಅವರ ನಡೆ ಹಲವು ಅನುಮಾನಗಳಗೆ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಎಂ ಜೊತೆ ಅವರ ಪತ್ನಿ ಮತ್ತು ಮಗ-ಸೊಸೆ ಸಹ ಉಪಸ್ಥಿತರಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಸಿಎಂ ಚನ್ನಿ ಪ್ರಮಾಣವಚನ ಸ್ವೀಕರಿಸಿದ ದಿನದಂದು ಕ್ಯಾಪ್ಟನ್ ಔತಣಕೂಟಕ್ಕೆ ಆಹ್ವಾನಿಸಿದ್ದರು. ಆದ್ರೆ ಕೆಲಸದ ಕಾರಣ ನೀಡಿ ಸಿಎಂ ಚನ್ನಿ ಔತಣಕೂಟಕ್ಕೆ ಕ್ಯಾಪ್ಟನ್‌ ಗೈರಾಗಿದ್ದರು.

ADVERTISEMENT

ತೋಟದ ಮನೆಯಲ್ಲಿ ಮಾಜಿ – ಹಾಲಿ ಸಿಎಂ ಭೇಟಿ !

ಕ್ಯಾಪ್ಟನ್ ತೋಟದ ಮನೆಯಲ್ಲಿ ಇಬ್ಬರು ನಾಯಕರ ಭೇಟಿಯಾಗಿದೆ. ಆದ್ರೆ ಈ ವೇಳೆ ಏನು ಚರ್ಚೆಯಾಗಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ. ಪಂಜಾಬ್ ಕಾಂಗ್ರೆಸ್‍ನಲ್ಲಿ ಅಮರಿಂದರ್ ಸಿಂಗ್ ಅನುಭವಿ ನಾಯಕರಾಗಿದ್ದು, ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಸಿಎಂ ಚನ್ನಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕ್ಯಾಪ್ಟನ್ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಮೂಲಕ ನವಜೋತ್ ಸಿಂಗ್ ಸಿಧುಗೆ ತಿರುಗೇಟು ನೀಡಲು ಚನ್ನಿ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬುವುದು ಪಂಜಾಬ್‌ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ.

ಕಳೆದ ತಿಂಗಳು ಪಂಜಾಬ್ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಶಮನಕ್ಕೆ ಹೈಕಮಾಂಡ್, ಹರೀಶ್ ರಾವತ್ ಅವರನ್ನು ಚಂಡೀಗಢಕ್ಕೆ ಕಳಿಸಲಾಗಿತ್ತು. ಹರೀಶ್ ರಾವತ್ ಮೊದಲಿಗೆ ನವಜೋತ್ ಸಿಂಗ್ ಸಿಧು ಜೊತೆಗೆ ನಾಲ್ವರು ಕಾರ್ಯಕರ್ತರ ಜೊತೆ ಮಾತನಾಡಿದ್ದರು. ಇತ್ತ ಕ್ಯಾಪ್ಟನ್ ಜೊತೆಗಿನ ಭೇಟಿ ದಿನವೇ ಸಿಧು ದೆಹಲಿಗೆ ತೆರಳಿದ್ದರು. ಮೊದಲಿಗೆ ಭೇಟಿಗೆ ಅವಕಾಶ ನೀಡದ ಹೈಕಮಾಂಡ್ ನಂತರ ಸಿಧು ಜೊತೆ ಚರ್ಚೆ ನಡೆಸಿತ್ತು. ಕೊನೆಗೆ ಅಮರಿಂದರ್ ಸಿಂಗ್ ಅವರನ್ನು ಕೆಳಗಿಳಿಸುವಲ್ಲಿ ಸಿಧು ಯಶಸ್ವಿಯಾಗಿದ್ದರು. ಸಿಧು ದೆಹಲಿಯಲ್ಲಿರುವಾಗ ಇತ್ತ ಸಿಎಂ ಚನ್ನಿ ಹೊಸ ನಡೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವ ಮೂಲಕ ಸಿಧುಗೆ ತಿರುಗೇಟು ಕೊಡ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ನವಜೋತ್ ಸಿಂಗ್ ಸಿಧು ವರ್ಸಸ್ ಸಿಎಂ ಚನ್ನಿ!

ಒಂದೇ ಪಕ್ಷದಲ್ಲಿದ್ದರೂ ಚರಣ್‍ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಿರುವ ವಿಚಾರ. ಸಿಧು ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ಸಿಎಂ ಚನ್ನಿಯವರನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ಡಿಜಿಪಿ ಮತ್ತು ಅಡ್ವೋಕೇಟ್ ಜನರಲ್ ನೇಮಕಾತಿ ವಿಷಯದಲ್ಲಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಲವೊಮ್ಮೆ ಹೈಕಮಾಂಡ್ ಅಜೆಂಡಾ ಪಾಲಿಸುತ್ತಿಲ್ಲ ಎಂದು ನೇರವಾಗಿ ಸಿಎಂ ವಿರುದ್ಧವೇ ಕಿಡಿಕಾರಿದ್ದರು. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಆದ್ರೆ ಹೈಕಮಾಂಡ್ ಇಬ್ಬರ ಶೀತಲ ಸಮರ ಕೊನೆಗೊಳಿಸಲು ವೇದಿಕೆ ನಿರ್ಮಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಸಿಧು ವಿರುದ್ಧ ಹೈಕಮಾಂಡ್ ಬೇಸರ !

ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರೋಧದ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿತ್ತು. ಜೊತೆಗೆ ಸಿಧು ಬೇಡಿಕೆಗಳನ್ನು ಹೈಕಮಾಂಡ್ ಪೂರ್ಣ ಮಾಡಿತ್ತು. ಹಲವು ಬಾರಿ ಸಿಧು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸಿತ್ತು. ಇದಾಗಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆ ಹೈಕಮಾಂಡ್ ಬೇಸರ ಹೊರಹಾಕಿದೆ ಎಂದು ತಿಳಿದು ಬಂದಿದೆ.

Tags: Amarinder SinghBJPCharanjit Singh Channi to be Punjab chief ministerCongress PartyCovid 19navjot singh sidhuPunjabಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಮೇಲಿರುವ ಪೋಷಕರ ಜವಾಬ್ದಾರಿ ಕುರಿತು ಲಾವಣ್ಯ ಬಲ್ಲಾಳ್‌ ಮಾತು

Next Post

ಹಾನಗಲ್-ಸಿಂದಗಿ ಉಪಚುನಾವಣೆ; ಎರಡು ಕ್ಷೇತ್ರಗಳಲ್ಲೂ ಗೆಲುವು ಕಾಂಗ್ರೆಸ್ಸಿನದ್ದೇ; ಯಾಕೆ ಗೊತ್ತಾ?

Related Posts

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ
ರಾಜಕೀಯ

ದೆಹಲಿ ಬುಲಾವ್ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ಇಲ್ಲಿದೆ: ಏನಿದೆ ಕಾಂಗ್ರೆಸ್ ಲೆಕ್ಕಾಚಾರ?

by ಪ್ರತಿಧ್ವನಿ
May 25, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೆಹಲಿ ಬುಲಾವ್ ಬಂದಿರುವ ವಿಚಾರಕ್ಕೆ ಇದೀಗ ಸ್ವತಃ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ದೆಹಲಿಗೆ ಬರಲು...

Read moreDetails
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ಹಾನಗಲ್-ಸಿಂದಗಿ ಉಪಚುನಾವಣೆ; ಎರಡು ಕ್ಷೇತ್ರಗಳಲ್ಲೂ ಗೆಲುವು ಕಾಂಗ್ರೆಸ್ಸಿನದ್ದೇ; ಯಾಕೆ ಗೊತ್ತಾ?

ಹಾನಗಲ್-ಸಿಂದಗಿ ಉಪಚುನಾವಣೆ; ಎರಡು ಕ್ಷೇತ್ರಗಳಲ್ಲೂ ಗೆಲುವು ಕಾಂಗ್ರೆಸ್ಸಿನದ್ದೇ; ಯಾಕೆ ಗೊತ್ತಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada