Tag: Amarinder Singh

ಪಂಜಾಬ್ ಕಾಂಗ್ರೆಸ್ ಸಾರಥಿಯಾಗಿ ರಾಜಾ ಅಮರಿಂದರ್ ಸಿಂಗ್ ಪದಗ್ರಹಣ

ಪಂಜಾಬ್ ಕಾಂಗ್ರೆಸ್ ಸಾರಥಿಯಾಗಿ ರಾಜಾ ಅಮರಿಂದರ್ ಸಿಂಗ್ ಪದಗ್ರಹಣ

ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಂಜಾಬ್ನಲ್ಲಿ ಹಿಂದೆಂದೂ ಕಾಣದ ರೀತಿ ಸೋಲನ್ನು ಕಂಡಿತ್ತು. ಅದರಂತೆ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಪಿಸಿಸಿ ಆದ್ಯಕ್ಷ ನವಜೋತ್ ...

Punjab | ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಪಿಎಲ್‌ಸಿ

Punjab | ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಪಿಎಲ್‌ಸಿ

ಬರುವ ತಿಂಗಳು ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆ ನಿಮಿತ್ತ ಇಂದು ಮಾಜಿ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ನೇತೃತ್ವದ ಪಂಜಾಬ್‌ ಲೋಕ್‌ ಕಾಂಗ್ರೆಸ್‌ ತನ್ನ 22 ಕ್ಷೇತ್ರಗಳ ...

ಪಂಜಾಬ್‌ ನಲ್ಲಿ ಮತ್ತೆ ಕೈ ಕಲಹ: ಕ್ಯಾಪ್ಟನ್‌ ಭೇಟಿ ಮಾಡಿದ ಸಿಎಂ ಚನ್ನಿ: ಸಿಧು ಟಾರ್ಗೆಟ್

ಪಂಜಾಬ್‌ ನಲ್ಲಿ ಮತ್ತೆ ಕೈ ಕಲಹ: ಕ್ಯಾಪ್ಟನ್‌ ಭೇಟಿ ಮಾಡಿದ ಸಿಎಂ ಚನ್ನಿ: ಸಿಧು ಟಾರ್ಗೆಟ್

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗಿನ ಮನಸ್ತಾಪದ ಬಳಿಕ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ ಅವರ ನಡೆ ಹಲವು ಅನುಮಾನಗಳಗೆ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿಯಾದ ...

ಪ್ರಧಾನಿ ಮೋದಿ-ಕ್ಯಾ.ಅಮರೀಂದರ್‌ ಸಿಂಗ್‌ ಭೇಟಿ; ಕೃಷಿ ಕಾಯ್ದೆಗಳ ಕುರಿತು ಚರ್ಚೆಗಳ ಸಾಧ್ಯತೆ

ಪ್ರಧಾನಿ ಮೋದಿ-ಕ್ಯಾ.ಅಮರೀಂದರ್‌ ಸಿಂಗ್‌ ಭೇಟಿ; ಕೃಷಿ ಕಾಯ್ದೆಗಳ ಕುರಿತು ಚರ್ಚೆಗಳ ಸಾಧ್ಯತೆ

ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದೆಹಲಿ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.  ಕಳೆದ ಸುಮಾರು ಹತ್ತು ತಿಂಗಳಿನಿಂದ ನಡೆಯುತ್ತಿರುವ ರೈತ ಆಂದೋಲನ ಹಾಗೂ ಲಖೀಂಪುರ ಖೇರಿಯಲ್ಲಿ ನಡೆದಂತಹ ರೈತರ ಹತ್ಯೆಯ ಕುರಿತಾಗಿ ಕ್ಯಾಪ್ಟನ್ ಸಿಂಗ್ ಅವರು ಪ್ರಧಾನಿಯೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ರೈತ ಆಂದೋಲನದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪ್ರಧಾನಿಯೊಂದಿಗೆ ಚರ್ಚಿಸಿ, ಕೃಷಿ ಕಾನೂನು ತಿದ್ದುಪಡಿಯನ್ನು ವಾಪಸ್ ಪಡೆಯಲು ಸಿಂಗ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಹೇಳಲಾಗಿದೆ.  ಲಖೀಂಪುರ ಖೇರಿಯಲ್ಲಿ ನಡೆದ ಘಟನೆಗೆ ಪಂಜಾಬ್’ನಲ್ಲಿ ಪ್ರತಿರೋಧ ಉಂಟಾದರೆ ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಈ ಘಟನೆಯ ಹಿಂದಿನ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಈ ಘಟನೆಯ ಕುರಿತು ಸಮಗ್ರ ತನಿಖೆಯ ವಿಚಾರವಾಗಿ ಪ್ರಧಾನಿಯೊಂದಿಗೆ ಸಿಂಗ್ ಚರ್ಚೆ ನಡೆಸಲಿದ್ದಾರೆ.  ಕೆಲವು ದಿನಗಳ ಹಿಂದೆ ತಾವು ಕಾಂಗ್ರೆಸ್ ತೊರೆಯುವುದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದರು. ಆದರೆ, ಬಿಜೆಪಿ ಸೇರುವುದಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದ್ದರು. ಈಗ ದೆಹಲಿ ಭೇಟಿ ನೀಡುತ್ತಿರುವುದು ಸಂಪೂರ್ಣ ರಾಜಕೀಯ ಭೇಟಿಯಾಗಿರಲಿದ್ದು, ಹಲವು ರಾಜಕೀಯ ಮುಖಂಡರನ್ನು ಸಿಂಗ್ ಅವರು ಭೇಟಿಯಾಗಲಿದ್ದಾರೆ.  ಅಮರಿಂದರ್ ಸಿಂಗ್ ಸಿಎಂ ಆಗಿದ್ದ ವೇಳೆ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಮೇಜರ್ ಅಮರ್‌ದೀಪ್ ಸಿಂಗ್ ಅವರು ಕಾಂಗ್ರೆಸ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. ಅಮರೀಂದರ್ ಸಿಂಗ್ ಅವರಿಗೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಅಪಮಾನ ಮಾಡಿದೆ. ಇದರ ಪರಿಣಾಮವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲಿದೆ. ಕಾಂಗ್ರೆಸ್ 16 ಸೀಟುಗಳನ್ನು ಗೆಲ್ಲಲು ಕೂಡಾ ಪರದಾಡಲಿದೆ, ಎಂದಿದ್ದಾರೆ.  “ನಾವು ಸರ್ಕಾರ ರಚಿಸುತ್ತೇವೆ. ಕಾದು ನೋಡಿ. ಕಾಂಗ್ರೆಸ್ ಹೊರತಾಗಿಯೂ ಹಲವಾರು ರಾಜಕೀಯ ಪಕ್ಷಗಳಿವೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಆಯ್ಕೆಗಳಿವೆ. ನಾವು ವಾಪಸ್ ಬಂದೇ ಬರುತ್ತೇವೆ,” ಎಂದು ಅಮರ್‌ದೀಪ್ ಸಿಂಗ್ ಹೇಳಿದ್ದಾರೆ.  ಇನ್ನು, ಪಂಜಾಬ್’ನಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ, ಹಿಂದಿನ ಸಿಎಂನ ಕಾರ್ಯದರ್ಶಿಗಳಿಗೆ, ಸಲಹೆಗಾರರಿಗೆ ನೀಡಿದ್ದ ಭದ್ರತೆಯನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿರುವ ಅಮರ್‌ದೀಪ್ ಸಿಂಗ್, ಇದು ದ್ವೇಷ ರಾಜಕಾರಣ. ಯಾವುದೇ ನೊಟಿಸ್ ನೀಡದೆ ನಮಗೆ ನಿಡಿರುವ ಭದ್ರತೆ ವಾಪಸ್ ಪಡೆಯಲಾಗಿದೆ. ಸದ್ಯಕ್ಕೆ ನಾವು ಕೂಡಾ ಕಾಂಗ್ರೆಸ್ ಭಾಗವಾಗಿಯೇ ಇದ್ದೇವೆ. ನಮ್ಮ ನಾಯಕ ರಾಷ್ಟ್ರಮಟ್ಟದ ನಾಯಕ, ಎಂದು ಅವರು ಹೇಳಿದ್ದಾರೆ. 

ಸ್ವಂತ ಪಕ್ಷವನ್ನು ಸ್ಥಾಪಿಸಲು ಮುಂದಾದ ಕ್ಯಾಪ್ಟನ್ ಅಮರೀಂದರ್ ಸಿಂಗ್; ಬಿಜೆಪಿ ಜೊತೆ ಮೈತ್ರಿ ಸಾಧ್ಯತೆ!

ಸ್ವಂತ ಪಕ್ಷವನ್ನು ಸ್ಥಾಪಿಸಲು ಮುಂದಾದ ಕ್ಯಾಪ್ಟನ್ ಅಮರೀಂದರ್ ಸಿಂಗ್; ಬಿಜೆಪಿ ಜೊತೆ ಮೈತ್ರಿ ಸಾಧ್ಯತೆ!

ಕಾಂಗ್ರೆಸ್ನಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಬಗ್ಗೆ ಬೇಸರಗೊಂಡಿರುವ ಪಂಜಾಬ್ನ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಸ್ವಂತ ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದಾರೆಂದು ಸುದ್ದಿ ಮೂಲಗಳು ತಿಳಿಸಿವೆ. ...

ಅಮರೀಂದರ್‌ ಬಗ್ಗೆ ಇರುವ ಮೃದು ಧೋರಣೆ ಬಿಎಸ್‌ವೈ ಬಗ್ಗೆ ಏಕಿಲ್ಲ? : ಚರ್ಚೆಯಾಗುತ್ತಿದೆ ಬಿಜೆಪಿ ಹೈಕಮಾಂಡ್‌ ದ್ವಂದ್ವ ನಿಲುವು.!

ಅಮರೀಂದರ್‌ ಬಗ್ಗೆ ಇರುವ ಮೃದು ಧೋರಣೆ ಬಿಎಸ್‌ವೈ ಬಗ್ಗೆ ಏಕಿಲ್ಲ? : ಚರ್ಚೆಯಾಗುತ್ತಿದೆ ಬಿಜೆಪಿ ಹೈಕಮಾಂಡ್‌ ದ್ವಂದ್ವ ನಿಲುವು.!

ರಾಷ್ಟ್ರ ರಾಜಕಾರಣದಲ್ಲಿ ಇತ್ತೀಚಿಗೆ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ 5 ರಾಜ್ಯಗಳಲ್ಲಿ ಒಟ್ಟು 6 ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ.ಇದರಲ್ಲಿ ಐವರು ಬಿಜೆಪಿಯವರಾದರೆ ಮತ್ತೊಬ್ಬರು ಕಾಂಗ್ರೆಸ್‌ನವರು. ಈಗ ರಾಷ್ಟ್ರದಲ್ಲಿ ನಡೆಯುತ್ತಿರುವ ...

ʻಅವಮಾನವನ್ನು ಸಹಿಸಲು ಸಾಧ್ಯವಿಲ್ಲʼ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ ಅಮರಿಂದರ್ ಸಿಂಗ್

ʻಅವಮಾನವನ್ನು ಸಹಿಸಲು ಸಾಧ್ಯವಿಲ್ಲʼ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ ಅಮರಿಂದರ್ ಸಿಂಗ್

ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಾವು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವುದಾಗಿ ಗುರುವಾರ ಘೋಷಿಸಿದ್ದಾರೆ. ʻʻನಾನು ಕಾಂಗ್ರೆಸ್ ಅನ್ನು ತೊರೆಯುತ್ತಿದ್ದೇನೆ ಆದರೆ, ...

ಅವಧಿಗೂ ಮುನ್ನ ದೇಶದ 5 ರಾಜ್ಯಗಳಲ್ಲಿ 6 ಸಿಎಂ ಬದಲಾವಣೆ : ಇದು ರಾಷ್ಟ್ರ ರಾಜಕಾರಣದಲ್ಲಿ‌ ಶುರುವಾದ ಹೊಸ ರಾಜಕೀಯ ‘ತಂತ್ರ’ಗಾರಿಕೆಯೇ ?

ಅವಧಿಗೂ ಮುನ್ನ ದೇಶದ 5 ರಾಜ್ಯಗಳಲ್ಲಿ 6 ಸಿಎಂ ಬದಲಾವಣೆ : ಇದು ರಾಷ್ಟ್ರ ರಾಜಕಾರಣದಲ್ಲಿ‌ ಶುರುವಾದ ಹೊಸ ರಾಜಕೀಯ ‘ತಂತ್ರ’ಗಾರಿಕೆಯೇ ?

ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಪರ್ವ ಶುರುವಾಗಿದೆ. ಮಾರ್ಚ್​ನಿಂದ ಈ ವರೆಗೆ ಭಾರತದ 5 ರಾಜ್ಯಗಳಲ್ಲಿ 6 ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಾಗಿದೆ. ಐವರು ಮುಖ್ಯಮಂತ್ರಿಗಳು ತಮ್ಮ ಅಧಿಕಾರವಧಿ ...

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ಸೂಕ್ತವಾಗುವುದೇ ಪಂಜಾಬ್ ಸೂತ್ರ?

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ಸೂಕ್ತವಾಗುವುದೇ ಪಂಜಾಬ್ ಸೂತ್ರ?

ಪಂಜಾಬ್ ಕಾಂಗ್ರೆಸ್ಸಿನಲ್ಲಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವೆ ಬಿಕ್ಕಟ್ಟು ಉಂಟಾದಾಗ, ಕಾಂಗ್ರೆಸ್ ಹೈಕಮಾಂಡ್ ಅನುಸರಿಸಿದ ಸಂಧಾನ ಸೂತ್ರ ಯಶಸ್ವಿಯಾಗಿತ್ತು. ಸಿಧುಗೆ ...

ಪಂಜಾಬ್ ಕಾಂಗ್ರೆಸ್‌ನ ಸಿಧು-ಸಿಂಗ್ ಬಣ ರಾಜಕೀಯ ಆರಂಭ

ಪಂಜಾಬ್ ಕಾಂಗ್ರೆಸ್‌ನ ಸಿಧು-ಸಿಂಗ್ ಬಣ ರಾಜಕೀಯ ಆರಂಭ

ಸುಮಾರು ಎರಡು ತಿಂಗಳ ಹಗ್ಗ ಜಗ್ಗಾಟದ ನಂತರ ಪಂಜಾಬ್ ಕಾಂಗ್ರೆಸ್ ನ ಚುಕ್ಕಾಣಿ ನವಜೋತ್ ಸಿಂಗ್ ಸಿಧು ಅವರಿಗೆ ಲಭಿಸಿದೆ. ಆದರೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ...

Page 1 of 2 1 2