• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ : ರಾಜ್ಯದಲ್ಲಿ 4 ಕೋಟಿ ಫಾಲನುಭವಿಗಳು!

ಪ್ರತಿಧ್ವನಿ by ಪ್ರತಿಧ್ವನಿ
July 16, 2022
in ಕರ್ನಾಟಕ
0
ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ : ರಾಜ್ಯದಲ್ಲಿ 4 ಕೋಟಿ ಫಾಲನುಭವಿಗಳು!
Share on WhatsAppShare on FacebookShare on Telegram

ಕಳೆದ 2 ವಾರದಿಂದ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೂಸ್ಟರ್ ಲಸಿಕಾ ಆಂದೋಲನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ರು. ಇನ್ನೂ ಸಿಎಂಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ರು.

ADVERTISEMENT

ರಾಜ್ಯಾದ್ಯಂತ ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ 75 ದಿನಗಳ ಕಾಲ ನಡೆಯಲಿದೆ. ಸೆ.30ರವರೆಗೂ ಉಚಿತ ಲಸಿಕೆ ನೀಡಲಾಗ್ತಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಲಭ್ಯವಿರಲಿದ್ದು, 18 ರಿಂದ 59 ವರ್ಷದವರಿಗೆ ಕೊರೊನಾ ಮೂರನೇ ಡೋಸ್ ಲಸಿಕೆ‌ ವಿತರಣೆ ಮಾಡಲಾಗುತ್ತೆ. ಇದುವರೆಗೂ ರಾಜ್ಯದಲ್ಲಿ ಕೇವಲ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ನೀಡಿ ಮೂರನೇ ಡೋಸ್‌ ಪಡೆದಿದ್ದಾರೆ. ಉಳಿದಂತೆ ನಾಲ್ಕು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆದಿಲ್ಲ ಎಂದು ಹೇಳಲಾಗ್ತಿದೆ. ಉಚಿತವಾಗಿರುವ ಹಿನ್ನೆಲೆ ಹೆಚ್ಚಿನ ಮಂದಿ ಮೂರನೇ ಡೋಸ್ ಲಸಿಕೆ‌ ಪಡೆಯುವ ನಿರೀಕ್ಷೆಯಲ್ಲಿದೆ ಆರೋಗ್ಯ ಇಲಾಖೆ.

ಕಳೆದ 3 ತಿಂಗಳ ಹಿಂದೆ ಕೇಂದ್ರ ಸರ್ಕಾರ 18 ವರ್ಷ ಮೋಲ್ಪಟ್ಟವರಿಗೆ ಹಣ ಕೊಟ್ಟು ಲಸಿಕೆ ಪಡೆಯುವಂತೆ ಯೋಜನೆ ರೂಪಿಸಿತ್ತು. ಆದರೆ ಆ ಕಾರ್ಯಕ್ರಮ ಅಂದುಕೊಂಡಂತೆ ಸಕ್ಸಸ್ ಆಗ್ಲಿಲ್ಲ ಶೇ 2-3% ಜನ ಮಾತ್ರ ಲಸಿಕೆ ಪಡೆದರು. ಸೋಂಕು ಹೆಚ್ಚಳವಾಗ್ತಿರೋದ್ರಿಂದ ಇಂದಿನಿಂದ ಉಚಿತ ಬೂಸ್ಟರ್ ಡೋಸ್ ನೀಡಲಾಗ್ತಿದೆ.

ರಾಜ್ಯ ರಾಜಧಾನಿಯಲ್ಲಿ 90 ಲಕ್ಷಕ್ಕೂ ಹೆಚ್ಚಿನ ಜನರು ಬೂಸ್ಟರ್ ಪಡೆಯಬೇಕಿದೆ. ಬೆಂಗಳೂರಿನಲ್ಲಿ ಈವರೆಗೆ ಬೂಸ್ಟರ್ ಪಡೆದಿರೋರ ಸಂಖ್ಯೆ ಕೇವಲ 2 ಲಕ್ಷ ಜನ ಮಾತ್ರ. ಇನ್ನೂ 88 ಲಕ್ಷಕ್ಕೂ ಹೆಚ್ಚು ಮಂದಿ ಜೀವಾಮೃತ ಪಡೆಯಬೇಕು. ಸದ್ಯ ಸಿಲಿಕಾನ್ ಸಿಟಿಯಲ್ಲಿ ನಿತ್ಯ 1 ಸಾವಿರಕ್ಕಿಂತ ಹೆಚ್ಚಿನ ಕೇಸ್ ಗಳು ಬರ್ತಿದ್ದು, ಇದರಿಂದ ಎಚ್ಚೆತ್ತ ಬಿಬಿಎಂಪಿ, ಆರೋಗ್ಯ ಇಲಾಖೆ ಬೂಸ್ಟರ್ ಗೆ ವೇಗ ಕೊಡಲು ಮುಂದಾಗಿದೆ. ಸದ್ಯ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ತಲಾ 2 ಲಕ್ಷ ಡೋಸ್ ಸ್ಟಾಕ್ ಇದ್ದು, ಅವಷ್ಯಕತೆಗೆ ತಕ್ಕಂತೆ ಕೇಂದ್ರ ಸರ್ಕಾರ ಪೂರೈಸಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ತಕ್ಕಂತೆ ಇಂದಿನಿಂದ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅರ್ಹ ಪಲಾನುಭವಿಗಳಿಗೆ ಬೂಸ್ಟರ್ ಡೋಸ್ ಉಚಿತವಾಗಿ ಸಿಗಲಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನ ಇದು : ಸಿಎಂ ಅಭಿಮತ.!!

ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದು ಇದರ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ.‌ ಕೊರೋನಾ ಬಂದ ಬಳಿಕ ವಿಜ್ಞಾನಿಗಳು, ವೈದ್ಯರು, ದಾದಿಯರು ಎಲ್ಲರೂ ಲೀಡರ್ ಗಳಾಗಿ ಮಾರ್ಪಾಡು ಆಗಿದ್ದಾರೆ. ಅವರು ಲೀಡರ್ ಆಗದೆ ಹೋಗಿದ್ದರೆ ಇದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. 5.94 ಕೋಟಿ‌ ಮೊದಲ ಡೋಸ್ ಹಾಗೂ 5.42 ಕೋಟಿ ಎರಡನೇ ಡೋಸ್ ಲಸಿಕೆ ಕೊಡಲಾಗಿದೆ ರಾಜ್ಯದಲ್ಲಿ. ಸದ್ಯ ನಾವು ಹಾದು ಹೋಗುತ್ತಿರುವುದು ಟೇಪರಿಂಗ್ ಸಿಟಿವ್ಯೇಷನ್ ನಲ್ಲಿ. ಕೊರೋನಾ ಕಡಿಮೆ ಆಗಿ ಅದು ಫೇಡ್ ಔಟ್ ಆಗುತ್ತಿದೆ. ಈ ವೇಳೆಯಲ್ಲೂ ನಾವು ಕಾಳಜಿವಹಿಸಬೇಕು, ನಿರ್ಲಕ್ಷ್ಯಿಸಬಾರದು ಎಂದು ಹೇಳಿದರು.

ಇನ್ನೂ ಬೂಸ್ಟರ್ ಡೋಸ್ ವಿಚಾರಕ್ಕೆ ಸಾರ್ವಜನಿಕರು ಮಾತ್ರ ನೀರಾಶ್ತಿ ತೋರಿಸಿದ್ದಾರೆ. ಕೊರೊನಾ ಕಡಿಮೆ ಇರುವ ಕಾರಣಕ್ಕೆ ನಾವು ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅದು ಅಲ್ದೆ ಮೊದಲು, ಎರಡನೇ ಲಸಿಕೆಯಿಂದ ತೊಂದ್ರೆ ಆಗಿದೆ. ಬಿಟ್ಟು ಬಿಟ್ಟು ಜ್ವರ ಬರ್ತೀದೆ. ಹಾರ್ಟ್ ಪ್ರಾಬ್ಲಂ, ಕೈಕಾಲು‌ ನೋವು ಹಾಗೂ ನಿಶಕ್ತಿ ಮಾಡುತ್ತೆ ಎಂದು ಬೂಸ್ಟರ್ ಡೋಸ್ ಪಡೆದ ಪ್ರತಪ್ ಹೇಳಿದರು.

ಉಚಿತ ಬೂಸ್ಟರ್ ಡೋಸ್ ಗೆ ಖಾಸಗಿ ಆಸ್ಪತ್ರೆಗಳು ಅಸಮಾಧಾನ.!!

ಸರ್ಕಾರ ಬೂಸ್ಟರ್ ಡೋಸ್ ಉಚಿತವಾಗಿ ನೀಡ್ತಿರುವದ್ರಿಂದ ಖಾಸಗಿ ಆಸ್ಪತ್ರೆಗಳು ಅಸಮಾಧನ ವ್ಯಕ್ತಪಡಿಸಿದ್ದಾರೆ. ನಾವು ಬೂಸ್ಟರ್ ಡೋಸ್ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ‌ ಇಟ್ಟು ಕೊಂಡಿದ್ದೇವೆ. ಆದರೆ ಸರ್ಕಾರ ಈಗ ಉಚಿತ ನೀಡುವದ್ರಿಂದ ನಮಗೆ ತೊಂದ್ರೆ ಆಗಲಿದೆ. ಸ್ಟಾಕ್ ಇರುವ ಲಸಿಕೆ ಏನ್ ಮಾಡಬೇಕೆಂದು ಸರ್ಕಾರಕ್ಕೆ ಫನಾ ಅಧ್ಯಕ್ಷ ಪ್ರಸನ್ನ ಪ್ರಸನ್ನ ಪ್ರೆಶ್ನೆ ಮಾಡಿದ್ದಾರೆ. ಒಟ್ನಲ್ಲಿ‌ ಕೊರೋನಾ ಹೆಚ್ಚಳ ಒಂದ್ಕ ಆದ್ರೆ ಈ ಮಧ್ಯೆ ಸರ್ಕಾರ ಉಚಿತವಾಗಿ ಬೂಸ್ಟರ್ ಡೋಸ್ ಕೊಡ್ತಿರೋದ್ರಿಂದ ಸಾರ್ವಜನಕರು ಮುಂದೆ ಬಂದು ಲಸಿಕೆ ತೆಗೆದುಕೊಳ್ತಾರೋ ಎಂಬುವುದು ಕಾದು ನೋಡಾಬೇಕಾಗಿದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಬೇ…..! ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ : ಸಚಿವ ಅಶ್ವಥ್‌ ನಾರಾಯಣ್‌ ಕ್ಷೇತ್ರದಲ್ಲಿ ಹೀಗೊಂದು ಪೋಸ್ಟ್

Next Post

ಮೂವರು ಸಹೋದ್ಯೋಗಿಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧ

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post
ಮೂವರು ಸಹೋದ್ಯೋಗಿಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧ

ಮೂವರು ಸಹೋದ್ಯೋಗಿಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada