• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ಬೊಮ್ಮಾಯಿ ಬಜೆಟ್.. ಮೈಸೂರಿಗೆ ಇರೋ ನಿರೀಕ್ಷೆಗಳೇನು..?

ಪ್ರತಿಧ್ವನಿ by ಪ್ರತಿಧ್ವನಿ
February 17, 2023
in Top Story, ಇದೀಗ
0
ಸಿಎಂ ಬೊಮ್ಮಾಯಿ ಬಜೆಟ್.. ಮೈಸೂರಿಗೆ ಇರೋ ನಿರೀಕ್ಷೆಗಳೇನು..?
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಂತ್ರ ಸಾಂಸ್ಕೃತಿಕ ನಗರಿ ಮೈಸೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡ್ತಾರೆ .

ADVERTISEMENT

ಇಲ್ಲಿನ ಶೇ 60ರಷ್ಟು ಮಂದಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದಾರೆ . ದೇಶದ ಅಗ್ರಗಣ್ಯ ಸಾಲಿನ ನಗರಗಳ ಪೈಕಿ ಮೈಸೂರು ಕೂಡ ಒಂದು.  ಹೇಳಿ ಕೇಳಿ ಚುನಾವಣಾ ವರ್ಷ ಆಗಿರೋದ್ರಿಂದ ಮೈಸೂರಿಗೆ ಈ ಬಾರಿ ಬಜೆಟ್ನಲ್ಲಿ ಬಂಪರ್ ಯೋಜನೆಗಳು ಸಿಗುವ ಸಾಧ್ಯತೆ ಇದೆ. ಸಿಎಂ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ.

ಪಾರಂಪರಿಕ ಕಟ್ಟಡ ರಕ್ಷಣೆಗೆ ಅನುದಾನ..?

ಮೈಸೂರು ಪಾರಂಪರಿಕ ನಗರಿ ಅಂತಾನೇ ಫೇಮಸ್. ಆದ್ರೆ ಸೂಕ್ತ ರೀತಿಯಲ್ಲಿ ಪಾರಂಪರಿಕ ಕಟ್ಟಡಗಳ ರಕ್ಷಣೆ ಆಗಿಲ್ಲ

ಮೈಸೂರಿನಲ್ಲಿ ಸರ್ಕಾರ ಘೋಷಿಸಿರುವ 131 ಪಾರಂಪರಿಕ ಕಟ್ಟಡಗಳಿವೆ. ಇದರಲ್ಲಿ 25 ಕಟ್ಟಡಗಳು ಈಗಾಗಲೇ ಕುಸಿದು ಬೀಳುವ ಸ್ಥಿತಿಯಲ್ಲಿವೆ. ನಗರದ ದೇವರಾಜ ಮಾರುಕಟ್ಟೆ ದುಸ್ಥಿತಿಯಲ್ಲಿದೆ. ಲ್ಯಾನ್ಸ್ಡೌನ್ ಬಿಲ್ಡಿಂಗ್ ಕುಸಿದು 10 ವರ್ಷ ಕಳೆದಿದ್ರೂ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಹಾಗೆಐಏ ಮಹಾರಾಣಿ ಕಾಲೇಜಿನ ಲ್ಯಾಬ್ ಕೊಠಡಿ ಕುಸಿದಿದೆ. ಹೀಗಾಗಿ ಇವುಗಳ ಸಂರಕ್ಷಣೆಗೆ ಭರಪೂರ ಅನುದಾನ ಸಿಗುವ ಸಾಧ್ಯತೆ ಇದೆ. ಬಜೆಟ್ ನಿರೀಕ್ಷೆಯನ್ನ ದ್ವಿಗುಣಗೊಳಿಸಿದೆ

ಟೂರಿಸಂ ಹಬ್ ಗೆ ಹೆಚ್ಚು ಒತ್ತು

ಚಾಮುಂಡಿಬೆಟ್ಟ , ಅಂಬಾವಿಲಾಸ ಅರಮನೆ , ಮೃಗಾಲಯ  ಸೇರಿದಂತೆ ಅನೇಕ ಅತ್ಯಾಕರ್ಷಕ ಪ್ರೇಕ್ಷಣೀಯ ಸ್ಥಳಗಳು ಮೈಸೂರಲ್ಲಿದೆ . ಮೈಸೂರು ಟೂರಿಸಂ ಸರ್ಕ್ಯೂಟ್ ಯೋಜನೆ ಸರ್ಕಾರದ ಮುಂದಿದ್ದು , ಇದಕ್ಕೆ ವಿಶೇಷ ಅನುದಾನ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ . ಇಷ್ಟೇ ಅಲ್ದೇ ರೈಲ್ವೆ ಟರ್ಮಿನಲ್ ಹಾಗೂ ಕಬಿನಿ ಹಿನ್ನೀರಿನ ಯೋಜನೆಗೆ ಅನುದಾನದ ನಿರೀಕ್ಷೆ ಇದೆ. ಹಾಗೆಯೇ  ಮೈಸೂರಿನ  ಪ್ರಮುಖ ಆಕರ್ಷಣೆ ದಸರಾ  ಹಬ್ಬ ಆಚರಣೆಗೆ ದಶಕಗಳಿಂದ ಬೇಡಿಕೆಯಿರುವ ದಸರಾ ಪ್ರಾಧಿಕಾರ ರಚನೆ ಆಗುವ ನಿರೀಕ್ಷೆ ಇದೆ.

ಪ್ರತ್ಯೇಕ ಜಲಮಂಡಳಿ..?

ಅರಮನೆ ನಗರಿ ಮೈಸೂರು ದಿನಕಳೆದಂತೆ ವಿಸ್ತಾರವಾಗಿ ಬೆಳೆಯುತ್ತಿದೆ .ಹೆಚ್ಚು ಕಡಿಮೆ ಹೊರವರ್ತುಲ ರಸ್ತೆ ದಾಟಿ 5-6 ಕಿಮೀ ವರೆಗೂ ಮೈಸೂರು ಬೆಳೆದಿದೆ . ಇಲ್ಲಿನ ಜನಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಲೇ ಇದೆ . ಮೂಲಭೂತ ಸೌಕರ್ಯ ಒದಗಿಸೋದೆ ಸಿಟಿ ಕಾರ್ಪೊರೇಷನ್ ಹಾಗೂ ಮುಡಾಗೆ ಸವಾಲಾಗಿದ್ದು  ಬೆಳೆಯುತ್ತಿರುವ ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಸ್ಥಾಪನೆ ಅವಶ್ಯಕವಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್..?

ಕಳೆದ 5 ವರ್ಷಗಳಲ್ಲಿ ಮೈಸೂರಿನಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಆಗುತ್ತಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದ್ದು, ಹೆಚ್ಚೆಚ್ಚು ಕಂಪನಿಗಳು ಮೈಸೂರಿನತ್ತ ಮುಖಮಾಡಿವೆ . ಹೀಗಾಗಿ ದೊಡ್ಡ ಉದ್ಯಮಗಳಿಗೆ ಮೈಸೂರಲ್ಲಿ ಜಾಗ ಹಾಗೂ ಅಗತ್ಯ ಸೌಲಭ್ಯ ನೀಡೋದು ಸರ್ಕಾರದ ಮುಂದಿದೆ.ಹೀಗಾಗಿ ಮೈಸೂರಲ್ಲಿ ಕೈಗಾರಿಕೆ ವಲಯವನ್ನ ಮುಂದಿಟ್ಟುಕೊಂಡು ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ. ಜೊತೆಗೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ಬೇಡಿಕೆ ಕೂಡ ಹಲವು ವರ್ಷಗಳಿಂದ ಇದೆ. ಸದ್ಯ ರಿಂಗ್ ರಸ್ತೆ ದಾಟಿ ನಗರ ಬೆಳೆದಿದ್ದು ಬೃಹತ್ ಮೈಸೂರು ಪಾಲಿಕೆ ರಚನೆಯೂ ಆಗಬಹುದು ಎಂಬ ನಿರೀಕ್ಷೆ ಇದೆ.

ಏರ್ಪೋರ್ಟ್’ಗೆ ವಿಶೇಷ ಅನುದಾನ

ಮೈಸೂರು ಏರ್‌ಪೋರ್ಟ್‌ಗೆ ಮೂಲಸೌಲಭ್ಯ ಹೆಚ್ಚಾಗಿ ಬೇಕಿದೆ.  ಏರ್‌ಪೋರ್ಟ್ ರನ್ ವೇ ವಿಸ್ತರಣೆಗೆ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಜೊತೆಗೆ ಸ್ವಾಧೀನ ವಿಚಾರವಾಗಿ ಸಾಕಷ್ಟು ಗೊಂದಲ ಇದೆ. ಎಲ್ಲಾ ಗೊಂದಲಗಳಿಗೂ ಈ ಬಾರಿಯ ಬಜೆಟ್ನಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ . ಜೊತೆಗೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಆಗಲು ನಂಜನಗೂಡಿನ ಹಿಮ್ಮಾವು ಬಳಿ ಜಾಗ ಗುರುತು ಮಾಡಲಾಗಿದೆ. ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿ ಹೆಚ್ಚು ಅನುದಾನ ಬಿಡುಗಡೆ ಮಾಡಿದರೆ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ .

Tags: Mysore
Previous Post

ಒಕ್ಕಲಿಗರನ್ನು ಕೊಲೆಗಡುಕರು ಎನ್ನುತ್ತಿರೋದು ಯಾಕೆ ಭಾರತೀಯ ಜನತಾ ಪಾರ್ಟಿ..?

Next Post

ಕರ್ನಾಟಕ ಬಜೆಟ್ 2023: ಪದವಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ- ಸಿಎಂ ಘೋಷಣೆ

Related Posts

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?
Top Story

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

by ಪ್ರತಿಧ್ವನಿ
May 1, 2026
0

ಹಾವೇರಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡಲಾಗುತ್ತಿದೆ. ಕೆಲವರಿಗೆ ಅದರ ಲಾಭ...

Read moreDetails
ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

May 1, 2026
ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

May 1, 2026
ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

May 1, 2026
227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

April 30, 2026
Next Post
ಕರ್ನಾಟಕ ಬಜೆಟ್ 2023: ಪದವಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ- ಸಿಎಂ ಘೋಷಣೆ

ಕರ್ನಾಟಕ ಬಜೆಟ್ 2023: ಪದವಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ- ಸಿಎಂ ಘೋಷಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada