2023ರ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election 2023) ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ(CM basavaraj bommai) ಅವರು ಇಂದು ತಮ್ಮ ತವರು ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ರೋಡ್ ಶೋ(road show) ಮೂಲಕ ಬಿರುಸಿನ ಪ್ರಚಾರ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ʻಎಲ್ಲಾ ಸಮುದಾಯಗಳು ಒಗ್ಗಟ್ಟಾಗಿ ಊರಿನ ಅಭಿವೃದ್ಧಿಯನ್ನು ಎಲ್ಲರೂ ಒಂದಾಗಿ ಮಾಡೋಣ. ಯಾವುದೇ ಬೇದಭಾವವಿಲ್ಲದೇ ಅಭಿವೃದ್ಧಿ ಮಾಡಿದ್ದೇನೆ. ತೆಗ್ಗಿಹಳ್ಳಿ ಊರಿನ ಜನರ ಸ್ವಾಭಿಮಾನಿ ಜನರು. ನಾನು ಹತ್ತು ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಒಕ್ಕಟ್ಟಾಗಿ ಈ ಬಾರಿ ಚುನಾವಣೆ ಮಾಡೋಣ. ಕರ್ನಾಟಕದಲ್ಲಿ(karnataka) ಮತ್ತೊಮ್ಮೆ ಬಿಜೆಪಿ ಸರ್ಕಾರ(BJP government) ಅಧಿಕಾರಕ್ಕೆ ಬರುತ್ತದೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತೇನೆʼ ಅಂತ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಇನ್ನು ಕುರಬರಮಲ್ಲರೂ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ ಬೊಮ್ಮಾಯಿ,(CM bommai) ʻಎಲ್ಲಾ ಸಮಾಜದ ಜನರು ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಈ ಊರಿಗೆ ಬರಲು ಮೊದಲು ಬಹಳ ಕಷ್ಟ ಇತ್ತು. ನನ್ನ ವಿಧಾನ ಪರಿಷತ್ ಅನುದಾನ, ತಂದೆಯವರ ರಾಜ್ಯಸಭಾ ನಿಧಿ ಬಳಸಿ ಸೇತುವೆ ಮಾಡಿಸಿದ್ದೆ. ಈಗ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು . ಕುರುಬರಮಲ್ಲೂರಿನ ರಾಜಕೀಯ ಪ್ರಜ್ಞೆ ಇರುವ ಗ್ರಾಮ. ಇದರ ಸುತ್ತಲಿನ 8ರಿಂದ 10 ಗ್ರಾಮಗಳ ಮೇಲೆ ಬೀರುತ್ತದೆ. ನಿಮ್ಮೆಲ್ಲರ ಉತ್ಸಾಹ, ಒಕ್ಕಟ್ಟು ನೋಡಿದರೆ, ದಾಖಲೆ ಪ್ರಮಾಣದ ಬೆಂಬಲ ಸಿಗುವ ವಿಶ್ವಾಸ ಬಂದಿದೆ ಎಂದರು. ನಿಮ್ಮ ಬೆಂಬಲ, ಆಶೀರ್ವಾದದಿಂದ ಶಾಸಕನಾಗಿ, ಗೃಹಸಚಿವನಾಗಿ, ಮುಖ್ಯಮಂತ್ರಿಯಾಗಿ(cm) ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ, ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮ ಮತಕ್ಕೆ ಎಂದಿಗೂ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಶಾಸಕನಾಗಿ, ಸಚಿವನಾದ ಮೇಲೆ ನಿಮ್ಮನ್ನು ನೋಡಲು ಆಗಾಗ ಬರುತ್ತಿದ್ದೆ. ಇಲ್ಲಿ ಬಂದರೆ ನನ್ನ ಆರೋಗ್ಯವೂ ಚೆನ್ನಾಗಿರುತ್ತದೆ. ಮುಖ್ಯಮಂತ್ರಿಯಾದ ಮೇಲೆ ನಿಮ್ಮನ್ನು ಬಿಟ್ಟು ಇರಬೇಕಾಗಿದೆ. ಈ ಖೇದ ನನ್ನನ್ನು ಕಾಡುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಜಾತಿ, ಮತ ಭೇದಭಾವ ಎನ್ನದೇ ಎಲ್ಲ ಸಮುದಾಯದ ಕೆಲಸ ಮಾಡಿದ್ದೇನೆ. ಸರ್ಕಾರದ ಸವಲತ್ತು, ದೇವಸ್ಥಾನ, ಮಸೀದಿಗಳಿಗೆ ಅನುದಾನ ನೀಡಿದ್ದೇನೆ. ಕಾಯಕ ಯೋಗಿ ಯೋಜನೆಯಡಿ ಎಲ್ಲ ವರ್ಗದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಕಾಂಗ್ರೆಸ್(congress) ಈಗ ಗ್ಯಾರಂಟಿ ಅಂತ ಹೇಳುತ್ತಿದ್ದಾರೆ. ಅವರು ಜನರನ್ನು ಯಾಮಾರಿಸುತ್ತಿದ್ದಾರೆ. ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವೆಲ್ಲರೂ ಹೆಚ್ಚಿನ ಮತವನ್ನು ನೀಡಿ ಅಂತ ಜನರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM basavaraja bommai) ಮನವಿ ಮಾಡಿಕೊಂಡರು.