• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಬ್ಬರದ ಪ್ರಚಾರ..!

ಪ್ರತಿಧ್ವನಿ by ಪ್ರತಿಧ್ವನಿ
May 4, 2023
in ರಾಜಕೀಯ
0
ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಬ್ಬರದ ಪ್ರಚಾರ..!
Share on WhatsAppShare on FacebookShare on Telegram

2023ರ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election 2023) ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ‌(CM basavaraj bommai) ಅವರು ಇಂದು ತಮ್ಮ ತವರು ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ರೋಡ್ ಶೋ(road show) ಮೂಲಕ ಬಿರುಸಿನ ಪ್ರಚಾರ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.  ʻಎಲ್ಲಾ ಸಮುದಾಯಗಳು ಒಗ್ಗಟ್ಟಾಗಿ ಊರಿನ ಅಭಿವೃದ್ಧಿಯನ್ನು ಎಲ್ಲರೂ ಒಂದಾಗಿ ಮಾಡೋಣ.‌ ಯಾವುದೇ ಬೇದಭಾವವಿಲ್ಲದೇ ಅಭಿವೃದ್ಧಿ ಮಾಡಿದ್ದೇನೆ.‌ ತೆಗ್ಗಿಹಳ್ಳಿ ಊರಿನ ಜನರ ಸ್ವಾಭಿಮಾನಿ ಜನರು. ನಾನು ಹತ್ತು ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ‌ನೀವೆಲ್ಲ ಒಕ್ಕಟ್ಟಾಗಿ ಈ ಬಾರಿ‌ ಚುನಾವಣೆ ಮಾಡೋಣ. ಕರ್ನಾಟಕದಲ್ಲಿ(karnataka) ಮತ್ತೊಮ್ಮೆ ಬಿಜೆಪಿ ಸರ್ಕಾರ(BJP government) ಅಧಿಕಾರಕ್ಕೆ ಬರುತ್ತದೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತೇನೆʼ ಅಂತ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ADVERTISEMENT

ಇನ್ನು ಕುರಬರಮಲ್ಲರೂ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ ಬೊಮ್ಮಾಯಿ,‌(CM bommai) ʻಎಲ್ಲಾ ಸಮಾಜದ ಜನರು ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಈ ಊರಿಗೆ ಬರಲು ಮೊದಲು ಬಹಳ ಕಷ್ಟ ಇತ್ತು. ನನ್ನ ವಿಧಾನ ಪರಿಷತ್ ಅನುದಾನ, ತಂದೆಯವರ ರಾಜ್ಯಸಭಾ ನಿಧಿ ಬಳಸಿ ಸೇತುವೆ ಮಾಡಿಸಿದ್ದೆ. ಈಗ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು . ಕುರುಬರಮಲ್ಲೂರಿನ ರಾಜಕೀಯ ಪ್ರಜ್ಞೆ ಇರುವ ಗ್ರಾಮ. ಇದರ ಸುತ್ತಲಿನ 8ರಿಂದ 10 ಗ್ರಾಮಗಳ ಮೇಲೆ ಬೀರುತ್ತದೆ. ‌ನಿಮ್ಮೆಲ್ಲರ ಉತ್ಸಾಹ, ಒಕ್ಕಟ್ಟು ನೋಡಿದರೆ, ದಾಖಲೆ ಪ್ರಮಾಣದ ಬೆಂಬಲ ಸಿಗುವ ವಿಶ್ವಾಸ ಬಂದಿದೆ ಎಂದರು. ನಿಮ್ಮ ಬೆಂಬಲ, ಆಶೀರ್ವಾದದಿಂದ ಶಾಸಕನಾಗಿ, ಗೃಹಸಚಿವನಾಗಿ, ಮುಖ್ಯಮಂತ್ರಿಯಾಗಿ(cm) ಕೆಲಸ ಮಾಡುವ‌ ಸೌಭಾಗ್ಯ ಸಿಕ್ಕಿದೆ.‌ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ, ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮ ಮತಕ್ಕೆ ಎಂದಿಗೂ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಶಾಸಕನಾಗಿ, ಸಚಿವನಾದ ಮೇಲೆ ನಿಮ್ಮನ್ನು ನೋಡಲು ಆಗಾಗ ಬರುತ್ತಿದ್ದೆ.‌ ಇಲ್ಲಿ ಬಂದರೆ ನನ್ನ ಆರೋಗ್ಯವೂ ಚೆನ್ನಾಗಿರುತ್ತದೆ. ಮುಖ್ಯಮಂತ್ರಿಯಾದ ಮೇಲೆ ನಿಮ್ಮನ್ನು ಬಿಟ್ಟು ಇರಬೇಕಾಗಿದೆ. ಈ ಖೇದ ನನ್ನನ್ನು ಕಾಡುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ಜಾತಿ, ಮತ ಭೇದಭಾವ ಎನ್ನದೇ ಎಲ್ಲ ಸಮುದಾಯದ ಕೆಲಸ ಮಾಡಿದ್ದೇನೆ. ‌ಸರ್ಕಾರದ ಸವಲತ್ತು, ದೇವಸ್ಥಾನ, ಮಸೀದಿಗಳಿಗೆ ಅನುದಾನ ನೀಡಿದ್ದೇನೆ. ಕಾಯಕ ಯೋಗಿ ಯೋಜನೆಯಡಿ ಎಲ್ಲ ವರ್ಗದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಕಾಂಗ್ರೆಸ್(congress)  ಈಗ ಗ್ಯಾರಂಟಿ ಅಂತ ಹೇಳುತ್ತಿದ್ದಾರೆ. ಅವರು ಜನರನ್ನು ಯಾಮಾರಿಸುತ್ತಿದ್ದಾರೆ. ಈ ಬಾರಿ‌ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವೆಲ್ಲರೂ ಹೆಚ್ಚಿನ ಮತವನ್ನು ನೀಡಿ ಅಂತ ಜನರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM basavaraja bommai) ಮನವಿ ಮಾಡಿಕೊಂಡರು.

Tags: #basavarajbommai#bjp#campaign#congress#election2023#karnataka#karnatakaassemblyelection#pratidhvani#pratidhvanidigital#pratidhvaninews#siggavi
Previous Post

ʻಕೋಳಿ ಕೂಗಿದ್ರೆ ಮಾತ್ರ ಬೆಳಗಾಗೋದಾʼ..? ಸಿದ್ದರಾಮಯ್ಯಗೆ ವಿ.ಸೋಮಣ್ಣ ಟಾಂಗ್..!‌

Next Post

ಬೆಂಗಳೂರಿನ ಮತದಾನ ಹೆಚ್ಚಳಕ್ಕೆ ಪಾಲಿಕೆ ಇ‌ನ್ನಿಲ್ಲದ ಕಸರತ್ತು

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
Next Post
ಬೆಂಗಳೂರಿನ ಮತದಾನ ಹೆಚ್ಚಳಕ್ಕೆ ಪಾಲಿಕೆ ಇ‌ನ್ನಿಲ್ಲದ ಕಸರತ್ತು

ಬೆಂಗಳೂರಿನ ಮತದಾನ ಹೆಚ್ಚಳಕ್ಕೆ ಪಾಲಿಕೆ ಇ‌ನ್ನಿಲ್ಲದ ಕಸರತ್ತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada