ಚಿಕ್ಕಬಳ್ಳಾಪುರ ನಗರದಲ್ಲಿ ನನ್ನ ಫ್ಲೆಕ್ಸ್ (flex) ಇರಬಾರದು ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆ ಆಯುಕ್ತರಿಗೆ ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ನನ್ನ ಫ್ಲೆಕ್ಸ್ ಇರಬಾರದು ಬೇರೆಯವರ ಫ್ಲೆಕ್ಸ್ ಕೂಡ ಇರಬಾರದು. ಚಿಕ್ಕಬಳ್ಳಾಪುರ ನಗರ ಕ್ಲೀನ್ ಆಗಿರಬೇಕು. ಅಧಿಕಾರಿಗಳೇ, ಶಾಸಕರ ಪೋಟೋ ಇದೆ ಅಂತ ಭಯ ಬೀಳಬೇಡಿ. ನಾಳೆಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಯಾವ ಫ್ಲೆಕ್ಸ್ ಇರಬಾರದು. ಫಸ್ಟ್ ನನ್ನ ಪೋಟೋ ಇರುವ ಫ್ಲೆಕ್ಸ್ ಕಿತ್ತು ಹಾಕಿ. ಚಿಕ್ಕಬಳ್ಳಾಪುರ ದಲ್ಲಿ ಫ್ಲೆಕ್ಸ್ ಕಲ್ಚರ್ ಇರಬಾರದು. ಯಾವ ಇನ್ ಪ್ಲೂಯನ್ಸ್ ಬಂದ್ರೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಧಿಕಾರಿಗಳಿಗೆ ಅಭಯ ನೀಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಡಾ. ಕೆ ಸುಧಾಕರ್ರನ್ನ ಸೋಲಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್, ರಾಜ್ಯದ ಗಮನವನ್ನು ಸೆಳೆದಿದ್ದಾರೆ. ನಾನು ಪ್ರಭಾವಿ ವ್ಯಕ್ತಿಯನ್ನು ಸೋಲಿಸಿದ್ದಕ್ಕೆ, ನನಗೆ ಅಪಾರ ಗೌರವ ಮನ್ನಣೆ ಸಿಕ್ತಿದೆ. ಸರ್ಕಾರದಲ್ಲಿ ನನಗೆ ಯಾವುದೇ ಸಚಿವ ಸ್ಥಾನ, ನಿಗಮ ಮಂಡಳಿಯೂ ಬೇಡವೆ ಬೇಡ. ನಾನು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಇರುತ್ತೇನೆ ಎಂದು ಅವರು ಇತ್ತೀಚೆಗೆ ಹೇಳಿದ್ದರು.
